For Quick Alerts
ALLOW NOTIFICATIONS  
For Daily Alerts
 

ರಾಹುಲ್ ಅಲ್ಲ, ಸಂಜು ಅಲ್ಲ: 2023ರ ವಿಶ್ವಕಪ್‌ಗೆ ಭಾರತದ ವಿಕೆಟ್ ಕೀಪರ್ ಆಯ್ಕೆ ಮಾಡಿದ ಗಂಗೂಲಿ

ಮುಂಬರುವ 2023ರ ಏಷ್ಯಾ ಕಪ್ ಮತ್ತು ತವರಿನಲ್ಲಿ ನಡೆಯುವ 2023ರ ಏಕದಿನ ವಿಶ್ವಕಪ್‌ ಪಂದ್ಯಾವಳಿಗಾಗಿ ವಿಕೆಟ್‌ ಕೀಪರ್-ಬ್ಯಾಟರ್‌ಗಾಗಿ ಭಾರತದ ಹುಡುಕಾಟದ ಕುರಿತು ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಮಾತನಾಡಿದ್ದಾರೆ.

ಕಳೆದ ವರ್ಷ ನಡೆದ ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡಿರುವ ರಿಷಭ್ ಪಂತ್ ಅನುಪಸ್ಥಿತಿಯಲ್ಲಿ, ವಿಕೆಟ್ ಕೀಪರ್ ಆಯ್ಕೆ ನಿರ್ಧಾರವು ಭಾರತೀಯ ತಂಡಕ್ಕೆ ಪ್ರಮುಖ ವಿಷಯವಾಗಿದೆ.

Not Rahul, Not Sanju: Sourav Ganguly Picks Indias Wicketkeeper For The 2023 World Cup

ಯುವ ಆಟಗಾರನ ಸ್ಫೋಟಕ ಬ್ಯಾಟಿಂಗ್ ಶೈಲಿಯನ್ನು ಪ್ರಮುಖವಾಗಿ ಉಲ್ಲೇಖಿಸಿ, ವಿಕೆಟ್‌ಕೀಪರ್- ಬ್ಯಾಟರ್ ಆಯ್ಕೆಯಾಗಿ ಇಶಾನ್ ಕಿಶನ್‌ಗೆ ಬಿಸಿಸಿಐ ಮಾಜಿ ಅಧ್ಯಕ್ಷರೂ ಆಗಿರುವ ಸೌರವ್ ಗಂಗೂಲಿ ತಮ್ಮ ಆದ್ಯತೆ ನೀಡಿದರು.

"ರಿಷಭ್ ಪಂತ್ ಭಾರತ ತಂಡದ ಅತ್ಯುತ್ತಮ ವಿಕೆಟ್ ಕೀಪರ್. ಆದರೆ ಇಶಾನ್ ಕಿಶನ್ ಮತ್ತು ಫಿಟ್‌ನೆಸ್ ಆಧಾರದಲ್ಲಿ ಕೆಎಲ್ ರಾಹುಲ್ ಅವರನ್ನು ಆಯ್ಕೆಯಾಗಿ ನೋಡಬಹುದು. ಈ ಇಬ್ಬರು ನಾಯಕ ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಅವರ ಮನಸ್ಸಿನಲ್ಲಿದ್ದಾರೆ," ಎಂದು ಸೌರವ್ ಗಂಗೂಲಿ ತಿಳಿಸಿದರು.

"ವಿಕೆಟ್ ಕೀಪರ್ ಸ್ಥಾನಕ್ಕೆ ನಾನು ಇಶಾನ್ ಕಿಶನ್ ಅವರನ್ನು ಇಷ್ಟಪಡುತ್ತೇನೆ. ಏಕೆಂದರೆ ಆತ ಯಾವುದೇ ತಂಡಕ್ಕೆ ಇನ್ನಿಂಗ್ಸ್ ತೆರೆಯುತ್ತಾನೆ. ಹೀಗಾಗಿ ರಾಹುಲ್ ದ್ರಾವಿಡ್ ತನ್ನ ಯೋಜನೆಗಳಲ್ಲಿ ಉಳಿಸಿಕೊಳ್ಳುತ್ತಾರೆ ಎಂದು ನನಗೆ ಖಾತ್ರಿಯಿದೆ," ಎಂದು ಸೌರವ್ ಗಂಗೂಲಿ ಹೇಳಿದರು.

Not Rahul, Not Sanju: Sourav Ganguly Picks Indias Wicketkeeper For The 2023 World Cup

ಏಷ್ಯಾ ಕಪ್ ಮತ್ತು ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡದ ಅನುಗುಣವಾಗಿ, ಅನುಭವಿ ಆಟಗಾರರು ಮತ್ತು ಹೊಸ ಮುಖಗಳ ಸಮತೋಲಿತ ಸಂಯೋಜನೆಯನ್ನು ಸೌರವ್ ಗಂಗೂಲಿ ಪ್ರತಿಪಾದಿಸಿದರು.

ನಿರ್ಭೀತ ಕ್ರಿಕೆಟ್ ಆಡುವ ಸಾಮರ್ಥ್ಯವನ್ನು ಹೊಂದಿರುವ ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ ಮತ್ತು ಇಶಾನ್ ಕಿಶನ್ ಅವರಂತಹ ಆಟಗಾರರನ್ನು ಭಾರತ ತಂಡದ ಮಾಜಿ ನಾಯಕ ಬೆಂಬಲಿಸಿದರು.

ಭಾರತ ತಂಡದ ಮುಖ್ಯ ಕೊಚ್ ರಾಹುಲ್ ದ್ರಾವಿಡ್ ಮತ್ತು ಆಯ್ಕೆಗಾರರಿಗೆ ಆಯ್ಕೆ ಮಾಡಲು ಲಭ್ಯವಿರುವ ಆಯ್ಕೆಗಳನ್ನು ಸೌರವ್ ಗಂಗೂಲಿ ಒತ್ತಿಹೇಳಿದರು. ಭಾರತವು ಅತ್ಯುತ್ತಮ ಆಟಗಾರರ 11ರ ಬಳಗವನ್ನು ಗುರುತಿಸುವತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

"ವಿಶ್ವಕಪ್‌ಗೆ ಅನುಭವದ ತಂಡವಾಗಿರಬೇಕು ಮತ್ತು ಯಾವುದೇ ಗಾಯಗಳಿಲ್ಲದ ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಇಶಾನ್ ಕಿಶನ್ ಅವರು ನಿರ್ಭೀತ ಕ್ರಿಕೆಟ್ ಆಡಬಹುದು. ರಾಹುಲ್ ದ್ರಾವಿಡ್, ರೋಹಿತ್ ಶರ್ಮಾ ಮತ್ತು ಆಯ್ಕೆಗಾರರಿಗೆ ಹೆಚ್ಚಿನ ಆಯ್ಕೆಗಳಿವೆ," ಸೌರವ್ ಗಂಗೂಲಿ ತಿಳಿಸಿದರು.

ಇಶಾನ್ ಕಿಶನ್ 17 ಏಕದಿನ ಪಂದ್ಯಗಳಲ್ಲಿ 46.26ರ ಸರಾಸರಿಯಲ್ಲಿ 694 ರನ್ ಗಳಿಸುವ ಮೂಲಕ ಉತ್ತಮ ದಾಖಲೆ ಹೊಂದಿದ್ದಾರೆ. ಗಮನಾರ್ಹವಾಗಿ, ಅವರು ದ್ವಿಶತಕ ಮತ್ತು ಆರು ಅರ್ಧ ಶತಕಗಳನ್ನು ಬಾರಿಸಿದ್ದಾರೆ.

ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯ ವೇಳೆ ತವರಿನ ಮೈದಾನದಲ್ಲಿ ಗೆಲುವು ಸಾಧಿಸುವ ಭಾರತದ ಆಸೆಯನ್ನು ಪರಿಗಣಿಸಿ ಆಯ್ಕೆ ಪ್ರಕ್ರಿಯೆಯು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ.

ಮುಂಬರುವ 2023ರ ಏಷ್ಯಾ ಕಪ್ ಪಂದ್ಯಾವಳಿಯು ಆಗಸ್ಟ್ 30ರಿಂದ ಆರಂಭವಾಗಲಿದ್ದರೆ, 2023ರ ವಿಶ್ವಕಪ್ ಪಂದ್ಯಾವಳಿಯು ಅಕ್ಟೋಬರ್ 5ರಿಂದ ಪ್ರಾರಂಭವಾಗಲಿದೆ.

ಏಷ್ಯಾ ಕಪ್‌ಗೆ ಭಾರತ ತಂಡದ ಸಂಭಾವ್ಯ 17 ಸದಸ್ಯರು

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್, ಫಿಟ್‌ನೆಸ್‌ಗೆ ಒಳಪಟ್ಟಿರುತ್ತಾರೆ), ಶ್ರೇಯಸ್ ಅಯ್ಯರ್ (ಫಿಟ್‌ನೆಸ್‌ಗೆ ಒಳಪಟ್ಟಿರುತ್ತಾರೆ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಇಶಾನ್ ಕಿಶನ್ (2ನೇ ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಪ್ರಸಿದ್ಧ್ ಕೃಷ್ಣ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಯುಜ್ವೇಂದ್ರ ಚಾಹಲ್/ಆರ್ ಅಶ್ವಿನ್.

Story first published: Sunday, August 20, 2023, 17:05 [IST]
Other articles published on Aug 20, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+