Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Novak Djokovic: ವಿಂಬಲ್ಡನ್‌ ಟೂರ್ನಿಯಲ್ಲಿ 100ನೇ ಗೆಲುವು ದಾಖಲಿಸಿದ ನೋವಾಕ್

ವಿಶ್ವದ ಸ್ಟಾರ್ ಟೆನಿಸ್ ಪ್ಲೇಯರ್ ಸರ್ಬಿಯಾದ ನೋವಾಕ್ ಜೋಕೊವಿಚ್ 2025 ವಿಂಬಲ್ಡನ್‌ ಗ್ರ್ಯಾನ್ ಸ್ಲ್ಯಾಮ್ ಟೂರ್ನಿಯಲ್ಲಿ ದೊಡ್ಡ ದಾಖಲೆ ಬರೆದಿದ್ದಾರೆ. ಶನಿವಾರ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ನೋವಾಕ್ ತಮ್ಮದೇ ದೇಶದ ಮಿಯೋಮಿರ್ ಕೆಕ್ಮಾನೋವಿಕ್ ಅವರನ್ನು ಮಣಿಸಿ ಮತ್ತೊಂದು ಮೈಲಿಗಲ್ಲು ತಲುಪಿದರು. ಈ ಪಂದ್ಯದಲ್ಲಿ ನೋವಾಕ್‌ 6-3, 6-0, 6-4 ಅಂತರದ ಗೆಲುವು ದಾಖಲಿಸಿ ಮತ್ತೊಂದು ದಾಖಲೆಗೆ ತಮ್ಮ ಹೆಸರನ್ನು ನಮೂದಿಸಿದರು.

ಶನಿವಾರ ನಡೆದ ಪಂದ್ಯದಲ್ಲಿ ನೋವಾಕ್ ಒಂದು ಗಂಟೆ 47 ನಿಮಿಷಗಳಲ್ಲಿ ಗೆಲುವು ದಾಖಲಿಸಿ ಸಾಧನೆ ಮಾಡಿದರು. ಈ ಗೆಲುವಿನೊಂದಿಗೆ ನೋವಾಕ್‌ ಪ್ರತಿಷ್ಠಿತ ಗ್ರ್ಯಾಂಡ್‌ ಸ್ಲ್ಯಾಮ್‌ ಟೂರ್ನಿಯಲ್ಲಿ 100 ಪಂದ್ಯಗಳ ಜಯ ಸಾಧಿಸಿದ ಹಿರಿಮೆಗೆ ಪಾತ್ರರಾದರು. ಈ ಮೂಲಕ ಇವರು ದಿಗ್ಗಜ ಆಟಗಾರರಾದ ಫೆಡರರ್ ಮತ್ತು ಮಾರ್ಟಿನಾ ನವ್ರಾಟಿಲೋವಾ ವಿಂಬಲ್ಡನ್ ಗ್ರ್ಯಾನ್‌ ಸ್ಲ್ಯಾಮ್‌ನಲ್ಲಿ ಈ ಸಾಧನೆ ಮಾಡಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು.

Novak Djokovic Achieves Historic 100th Wimbledon Win

ಮಿಯೋಮಿರ್ ಕೆಕ್ಮಾನೋವಿಕ್ ವಿರುದ್ಧದ ಪಂದ್ಯ ಆರಂಭದಲ್ಲಿ ಜಿದ್ದಿನಿಂದ ಕೂಡಿದಂತೆ ಕಂಡು ಬಂದಿತು. ಈ ಪಂದ್ಯದಲ್ಲಿ ಉಭಯ ಆಟಗಾರರು 3-3 ಅಂಕಗಳಿಂದ ಮುನ್ನಡೆ ಸಾಧಿಸಿದ್ದರು. ಈ ವೇಳೆ ನೋವಾಕ್‌ ತಮ್ಮ ಕ್ಲಾಸಿಕ್ ಶಾಟ್‌ಗಳ ಮೂಲಕ ಎಲ್ಲರ ಗಮನ ಸೆಳೆದರು. ಅಲ್ಲದೆ ಅಂಕಗಳನ್ನು ಬಾಚಿಕೊಂಡು ಸೆಟ್ ಗೆದ್ದರು. ಬಳಿಕ ನಡೆದ ಎರಡನೇ ಸೆಟ್‌ನಲ್ಲಿ ಎದುರಾಳಿ ಆಟಗಾರ ಖಾತೆ ತೆರೆಯಲು ನೋವಾಕ್ ಅವಕಾಶವನ್ನೇ ನೀಡಲಿಲ್ಲ. ಜೋಕೊ ಮೂರನೇ ಹಾಗೂ ನಿರ್ಣಾಯಕ ಸೆಟ್‌ನಲ್ಲೂ ಸ್ಥಿರ ಪ್ರದರ್ಶನ ನೀಡಿ ಅರ್ಹ ಗೆಲುವು ದಾಖಲಿಸಿ, ದಾಖಲೆಯ ಪುಟಕ್ಕೆ ಎಂಟ್ರಿ ಪಡೆದರು.

ಸೆಲೆಬ್ರೇಷನ್‌ ಸ್ಪೇಷಲ್

24 ಗ್ರ್ಯಾಂಡ್‌ ಸ್ಲ್ಯಾಮ್‌ ಟೂರ್ನಿಗಳನ್ನು ಗೆದ್ದಿರುವ ವಿಶ್ವದ ಶ್ರೇಷ್ಠ ಟೆನಿಸ್ ಆಟಗಾರ ನೋವಾಕ್ ಜೋಕೊವಿಚ್, ತಮ್ಮ 25ನೇ ಗ್ರ್ಯಾಂಡ್‌ ಸ್ಲ್ಯಾಮ್‌ ಎದುರು ನೋಡುತ್ತಿದ್ದಾರೆ. ಈ ಪಂದ್ಯದ ಬಳಿಕ ಮಾತನಾಡಿದ ಅವರು ಟೆನಿಸ್‌ ಕ್ರೀಡೆ ನಾನು ಯಾರು ಎಂಬುದನ್ನು ಜನರಿಗೆ ತೋರಿಸಿಕೊಟ್ಟಿದೆ. ನಾನು ಯಾವದನ್ನು ಗ್ರ್ಯಾಂಟೆಡ್ ಆಗಿ ಪಡೆದಿಲ್ಲ ಎಂದು ತಿಳಿಸಿದ್ದಾರೆ. ಇದೇ ವೇಳೆ ಪಂದ್ಯ ಮುಗಿದ ಬಳಿಕ ಅವರು ನಡೆಸಿದ ಸೆಲೆಬ್ರೆಷನ್‌ ಬಗ್ಗೆಯೂ ಕೇಳಲಾಯಿತು. ಆಗ ನೋವಾಕ್‌ ಈ ಹಾಡು ನನ್ನ ಮಗಳ ನೆಚ್ಚಿನ ಹಾಡು ಎಂದರು. ಅಲ್ಲದೆ ಆಗಲೇ ತಮ್ಮ ಮಗಳಿಗೆ ಸ್ಪೆಪ್ ಹಾಕಿ ತೋರಿಸುವಂತೆ ತಿಳಿಸಿದರು. ಮಗಳು ಕುಳಿದು ಅಭಿಮಾನಿಗಳನ್ನು ರಂಜಿಸಿದಳು.

ವಿಶ್ವದ ಮಾಜಿ ನಂಬರ್ 1 ಆಟಗಾರ ನೋವಾಕ್‌ ಜೋಕೊವಿಚ್ ಮುಂದಿನ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಅಲೆಕ್ಸ್ ಡಿ ಮಿನೌರ್ ವಿರುದ್ಧ ಹೋರಾಟ ನಡೆಸಲಿದ್ದಾರೆ.

Story first published: Sunday, July 6, 2025, 12:30 [IST]
Other articles published on Jul 6, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+