For Quick Alerts
ALLOW NOTIFICATIONS  
For Daily Alerts
 

ಕೊಹ್ಲಿಯ ವಿಡಿಯೋಗೆ ನೊವಾಕ್ ಜೊಕೋವಿಕ್ ತಮಾಷೆಯ ಪ್ರತಿಕ್ರಿಯೆ

Novak Djokovic reacted hilariously on Virat Kohlis Crossbar Challenge

ನವದೆಹಲಿ: ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್‌ ಎಂದು ಕರೆಸಿಕೊಳ್ಳುತ್ತಿರುವ ವಿರಾಟ್ ಕೊಹ್ಲಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಹಾಕಿಕೊಂಡಿದ್ದರು. ಫುಟ್ಬಾಲ್‌ನಲ್ಲೂ ಆಸಕ್ತಿ ಹೊಂದಿರುವ ಕೊಹ್ಲಿ, ಫ್ರೀ ಕಿಕ್ ಹೊಡೆದಿರುವ ವಿಡಿಯೋ ಇದು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಈ ವಿಡಿಯೋಗೆ ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ಕೂಡ ಪ್ರತಿಕ್ರಿಯಿಸಿದ್ದರು.

ಟ್ವಿಟರ್ ಮತ್ತು ಫೇಸ್ಬುಕ್‌ನಲ್ಲಿ ವಿರಾಟ್ ಕೊಹ್ಲಿ ಒಂದು ವಿಡಿಯೋ ಹಾಕಿಕೊಂಡಿದ್ದರು. 'ಆ್ಯಕ್ಸಿಡೆಂಟಲ್ ಕ್ರಾಸ್‌ಬಾರ್ ಚಾಲೆಂಜ್‌' ಎಂದು ತಲೆಬರಹ ನೀಡಲಾಗಿದ್ದ ಈ ವಿಡಿಯೋದಲ್ಲಿ ಕೊಹ್ಲಿ ಕೊಟ್ಟ ಫ್ರೀ ಕಿಕ್ ಒಂದು ಗೋಲ್‌ಪೋಸ್ಟ್‌ನ ಕ್ರಾಸ್‌ಬಾರ್‌ಗೆ ಬಡಿದು ಹೊರ ಬೀಳುವ ಚಿತ್ರಣವಿತ್ತು.

ಈ ವಿಡಿಯೋಗೆ ಸರ್ಬಿಯಾದ ಸ್ಟಾರ್ ಟೆನಿಸ್ ಆಟಗಾರ, ವಿಶ್ವ ನಂ.1 ನೊವಾಕ್ ಜೊಕೋವಿಕ್ ಕೂಡ ಪ್ರತಿಕ್ರಿಯಿಸಿದ್ದಾರೆ. ಜೊಕೋವಿಕ್ ಕೊಹ್ಲಿಯ ವಿಡಿಯೋಗೆ ಬರಹದ ಮೂಲಕ ಪ್ರತಿಕ್ರಿಯಿಸಿಲ್ಲ, ಬದಲಿಗೆ ಹಲ್ಲು ಸಿಕಿಯುವ ಇಮೋಜಿಯನ್ನು ಕಾಮೆಂಟ್ ಮಾಡಿದ್ದಾರೆ.

Novak Djokovic reacted hilariously on Virat Kohlis Crossbar Challenge

ಸದ್ಯ ಬೆಲ್ಗ್ರೇಡ್ ಎಟಿಪಿ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಸರ್ಬಿಯನ್ ಆಟಗಾರ ಜೊಕೋವಿಕ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ವಿರಾಟ್ ಕೊಹ್ಲಿ ಮುಂಬರಲಿರುವ ಇಂಗ್ಲೆಂಡ್ ಪ್ರವಾಸಕ್ಕೆ ಸಜ್ಜಾಗಿದ್ದಾರೆ. ಜೂನ್ 2ಕ್ಕೆ ಭಾರತ ತಂಡ ಇಂಗ್ಲೆಂಡ್‌ಗೆ ಪ್ರಯಾಣಿಸಲಿದೆ.

Story first published: Saturday, May 29, 2021, 12:55 [IST]
Other articles published on May 29, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+