Novak Djokovic: ಆಸ್ಟ್ರೇಲಿಯಾ ಓಪನ್‌ನಿಂದ ಜೋಕೊ ಹೊರಕ್ಕೆ
ವಿಶ್ವದ ಸ್ಟಾರ್ ಟೆನಿಸ್ ಆಟಗಾರರಲ್ಲಿಒಬ್ಬರಾಗಿರುವ ಆಸ್ಟ್ರೇಲಿಯಾದ ಸ್ಟಾರ್ ಆಟಗರ ಸರ್ಬಿಯಾದ ನೋವಾಕ್ ಜೋಕೊವಿಚ್ ಆಸ್ಟ್ರೇಲಿಯಾ ಗ್ರ್ಯಾಂಡ್ ಸ್ಲ್ಯಾಮ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ವರ್ಷದ ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಜೋಕೊ ಗಾಯದ ಸಮಸ್ಯೆಯಿಂದಾಗಿ, ಸೆಮಿಫೈನಲ್‌ನಲ್ಲಿ ಆಡಲು ಸಾಧ್ಯವಾಗಲಿಲ್ಲ. ಇವರು 25ನೇ ಗ್ರ್ಯಾಂಡ್ ಸ್ಲ್ಯಾಮ್ ಎತ್ತುವ ಕನಸಿನಲ್ಲಿದ್ದರು. ಆದರೆ ಗಾಯ ಇವರಿಗೆ ಬಹುವಾಗಿ ಕಾಡುತ್ತಿದೆ.
ಆಸ್ಟ್ರೇಲಿಯನ್ ಓಪನ್ ನಡೆಯುವಾಗಲೇ ಜೋಕೊ ಹಠಾತನೆ ಮೈದಾನದಿಂದ ಹಿಂದೆ ಸರಿದಿದ್ದು ಅವರ ಅಭಿಮಾನಿಗಳಿಗೆ ಬೇಸರ ತರಿಸಿದೆ. ಕ್ವಾರ್ಟರ್ ಫೈನಲ್‌ನಲ್ಲಿ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್ ಅವರನ್ನು ಸೋಲಿಸಿ ಜೊಕೊವಿಕ್ ಸೆಮಿಫೈನಲ್ ಪ್ರವೇಶಿಸಿದರು. ಎಂಟರ ಘಟ್ಟದ ಪಂದ್ಯದ ನಂತರ ಜೋಕೊ ಗಾಯದಿಂದ ಬಳಲುತ್ತಿದ್ದರು. ಮತ್ತು ಸೆಮಿಫೈನಲ್‌ನ ಮಧ್ಯದಲ್ಲಿ, ಅವರು ಆಸ್ಟ್ರೇಲಿಯನ್ ಓಪನ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದರು.

ಉಪಾಂತ್ಯ ಪಂದ್ಯಕ್ಕೂ ಮುನ್ನ ನಡೆಯುವ ಅಭ್ಯಾಸದ ವೇಳೆಯೂ ಜೋಕೊ ಅಂಗಳದಲ್ಲಿ ಕಾಣಿಸಿಕೊಳ್ಳಲಿಲ್ಲ. ಹೀಗಾಗಿ ಊಹಾಪೋಹಗಳು ಹೆಚ್ಚಾಗಿದ್ದವು. ಈಗ ಈ ಎಲ್ಲ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಸೆಮಿಫೈನಲ್ ಪಂದ್ಯದಲ್ಲಿ ಸರ್ಬಿಯಾದ ಸ್ಟಾರ್ ಆಟಗಾರ ನೋವಾಕ್ 6-7 ರಿಂದ ಹಿನ್ನಡೆ ಅನುಭವಿಸಿದರು. ಇವರು ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧ ಆಡುವಾಗ ಗಾಯ ಕಾಣಿಸಿಕೊಂಡಿದ್ದು, ಮೊದಲ ಸೆಟ್ ಬಳಿಕ ಮೈದಾನದಿಂದ ಹಿಂದೆ ಸರಿಯಬೇಕಾಯಿತು. ಈ ಮೂಲಕ ಅಲೆಕ್ಸಾಂಡರ್ ಜ್ವೆರೆವ್ ಇದೇ ಮೊದಲ ಬಾರಿಗೆ ಟೂರ್ನಿಯ ಫೈನಲ್ ಪ್ರವೇಶಿಸಿದ್ದಾರೆ. ಇದಕ್ಕೂ ಮೊದಲು ಅಲೆಕ್ಸಾಂಡರ್ ಜ್ವೆರೆವ್ ಕಳೆದ ವರ್ಷ ಫ್ರೆಂಚ್ ಓಪನ್ ಫೈನಲ್, 2020ರಲ್ಲಿ ಯುಎಸ್ ಓಪನ್ ಫೈನಲ್ ಪ್ರವೇಶಿಸಿದ್ದರು.
ಜೋಕೋ ಸಾಧನೆ
ಜೊಕೊವಿಕ್ ತಮ್ಮ 25 ನೇ ಗ್ರ್ಯಾಂಡ್ ಸ್ಲ್ಯಾಮ್ ಗೆಲ್ಲುವ ಕನಸಿನೊಂದಿಗೆ ಆಸ್ಟ್ರೇಲಿಯಾ ಪ್ರವಾಸವನ್ನು ಆರಂಭಿಸಿದ್ದರು. ಅವರು 008, 2011, 2012, 2013, 2015, 2016, 2019, 2020, 2021 ಮತ್ತು 2023 ರಲ್ಲಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದು ಬೀಗಿದ್ದರು. ಈಗಾಗಲೇ ಜೋಕೊ 7 ಬಾರಿ ವಿಂಬಲ್ಡನ್, 4 ಬಾರಿ ಫ್ರೆಂಚ್, 4 ಬಾರಿ ಯುಎಸ್ ಓಪನ್ ಗೆದ್ದ ಕೀರ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಕ್ವಾರ್ಟರ್-ಫೈನಲ್‌ನಲ್ಲಿ ಜೋಕೊ, ಅಲ್ಕರಾಜ್ ವಿರುದ್ಧ ಸಾಧಿಸಿದ ಗೆಲುವು 99ನೇ ಗೆಲುವು ದಾಖಲಿಸಿದರು. ಈ ವರ್ಷದ ಸೆಮಿಫೈನಲ್‌ನಲ್ಲಿ ಜಯ ಸಾಧಿಸಿ ಗೆಲುವಿನ ಶತಕ ಬಾರಿಸುವ ಅವರ ಆಸೆಗೆ ಬ್ರೇಕ್ ಬಿದ್ದಿದೆ.
ಜೊಕೊವಿಕ್ 12ನೇ ಬಾರಿಗೆ ಆಸ್ಟ್ರೇಲಿಯನ್ ಓಪನ್‌ನಲ್ಲಿ ಸೆಮಿಫೈನಲ್ ತಲುಪಿದರು. ಜೊಕೊವಿಕ್ ಅತಿ ಹೆಚ್ಚು ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದ ಕೀರ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಪಂದ್ಯದ ವೇಳೆ ಕಾಣಿಸಿಕೊಂಡ ಗಾಯ
ನೋವಾಕ್ ಎಂಟರ ಘಟ್ಟದ ಪಂದ್ಯವನ್ನು ಆಡುವಾಗಲೇ ಅವರಿಗೆ ಗಾಯ ಕಾಣಿಸಿಕೊಂಡಿತ್ತು. ಅವರ ವೈದ್ಯ ತಂಡ ಮೈದಾನಕ್ಕೆ ಬಂದು ಅವರಿಗೆ ಚಿಕಿತ್ಸೆ ನೀಡಿತ್ತು. ಆ ಬಳಿಕವೇ ನೋವಾಕ್, ಕಾರ್ಲೋಸ್ ಅಲ್ಕರಾಜ್ ವಿರುದ್ಧದ ಪಂದ್ಯವನ್ನು ಆಡಲು ಸಜ್ಜಾಗಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications