* ಸತತ ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಟೀಮ್ ಇಂಡಿಯಾಗೆ ದೊಡ್ಡ ಆಘಾತ ಉಂಟಾಗಿದೆ. ಗಾಯದಿಂದ ಅಲಭ್ಯವಾಗಿದ್ದ ಹಾರ್ದಿಕ್ ಪಾಂಡ್ಯ ಸಂಪೂರ್ಣ ವಿಶ್ವಕಪ್ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿದ್ದಾರೆ. ಹಾರ್ದಿಕ್ ಪಾಂಡ್ಯ ಚೇತರಿಸಿಕೊಂಡು ಸೆಮಿಫೈನಲ್‌ಗೂ ಮುನ್ನ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಹಾರ್ದಿಕ್ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಟೂರ್ನಿಯಿಂದ ಹೊರಬೀಳುವಂತಾಗಿದೆ.
* ಹಾರ್ದಿಕ್ ಪಾಂಡ್ಯ ಅಲಭ್ಯವಾಗಿರುವ ಹಿನ್ನೆಲೆಯಲ್ಲಿ ಬದಲಿ ಆಟಗಾರನಾಗಿ ವೇಗದ ಬೌಲರ್ ಕನ್ನಡಿಗ ಪ್ರಸಿದ್ಧ್ ಕೃಷ್ಣ ಟೀಮ್ ಇಂಡಿಯಾ ವಿಶ್ವಕಪ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಪ್ರತಿಭಾನ್ವಿತ ವೇಗಿಗೆ ಅದೃಷ್ಟ ಖುಲಾಯಿಸಿದೆ ಪ್ರಸಿದ್ಧ್ ಕೃಷ್ಣ ಕೂಡ ಸುದೀರ್ಘ ಕಾಲ ಗಾಯದಿಂದ ಮೈದಾನದಿಂದ ದೂರವಾಗಿದ್ದು ಈ ವರ್ಷ ಜಸ್ಪ್ರೀತ್ ಬೂಮ್ರಾ ಜೊತೆಗೆ ಖಳೆದ ಐರ್ಲೆಂಡ್ ಪ್ರವಾಸದ ಮೂಲಕ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದರು. ಆ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಗಮನಸೆಳೆದಿದ್ದರು.

* "ವಿಶ್ವಕಪ್‌ನ ಉಳಿದ ಭಾಗದಿಂದ ನಾನು ಹೊರಗುಳಿಯಲಿದ್ದೇನೆ ಎನ್ನುವ ಈ ಸತ್ಯವನ್ನು ಅರಗಿಸಿಕೊಳ್ಳುವುದು ಕಷ್ಟ. ನಾನು ತಂಡದ ಜೊತೆಗೆ ಇರಲಿದ್ದು ಪ್ರತಿ ಪಂದ್ಯದ ಪ್ರತಿ ಎಸೆತಕ್ಕೂ ನಾನು ಉತ್ಸಾಹದಿಂದ ಹುರಿದುಂಬಿಸುತ್ತೇನೆ. ಈವರೆಗೆ ನಿಮ್ಮಿಂದ ದೊರೆತ ಪ್ರೀತಿ ಬೆಂಬಲ ಅಭೂತಪೂರ್ವವಾದದ್ದು ಅದಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ. ಈ ತಂಡ ವಿಶೇಷವಾದದ್ದು ಹಾಗೂ ಎಲ್ಲರೂ ಹೆಮ್ಮೆ ಪಡುವಂತೆ ನಾವು ಮಾಡಲಿದ್ದೇವೆ" ಎಂದು ಹಾರ್ದಿಕ್ ಪಾಂಡ್ಯ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
* ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಪಾಕಿಸ್ತಾನ ರೋಚಕ ಗೆಲುವು ಸಾಧಿಸಿದೆ. ಮಳೆಯಿಂದಾಗಿ ಅಡ್ಡಿಯಾದ ಈ ಪಂದ್ಯದಲ್ಲಿ ಡಕ್ವರ್ತ್ ಲೂಯಿಸ್ ನಿಯಮದ ಆಧಾರದಲ್ಲಿ ಫಲಿತಾಂಶ ನಿರ್ಧರಿಸಲಾಗಿದ್ದು ಪಂದ್ಯ ಸ್ಥಗಿತವಾದಾಗ ಡಿಎಲ್ ಅಧಾರದಲ್ಲಿ ಪಾಕಿಸ್ತಾನ ತಂಡ ನ್ಯೂಜಿಲೆಂಡ್‌ಗಿಂತ 21 ರನ್‌ಗಳಷ್ಟು ಮುಂದಿತ್ತು. ಇದರಿಂದಾಗಿ ಈ ಪಂದ್ಯವನ್ನು ಪಾಕಿಸ್ತಾನ ತಂಡ ರೋಚಕವಾಗಿ ಗೆದ್ದುಕೊಂಡಿದೆ.
* ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಕೇನ್ ಭರ್ಜರಿ ಬ್ಯಾಟಿಂಗ್ ನಡೆಸಿದರು. ಅಲ್ಲದೆ 120ರ ಸ್ಟ್ರೈಕ್ ರೇಟ್ ನೊಂದಿಗೆ ರನ್ ಕಲೆ ಹಾಕಿದರು. ಇಫ್ತಕಾರ್ ಅಹ್ಮದ್ ಅವು ತೋಡಿದ ಖೆಡ್ಡಾಗೆ ಬಲಿಯಾದ ಕೇನ್, ಶತಕ ವಂಚಿತರಾದರು. ಕೇನ್ ಐಸಿಸಿ ಟೂರ್ನಿಯ 25 ಪಂದ್ಯಗಳ 24 ಇನಿಂಗ್ಸ್ ಗಳಲ್ಲಿ 1084 ರನ್ ಸಿಡಿಸಿದ್ದಾರೆ. ಈ ವೇಳೆ ಅವರ ಸರಾಸರಿ 63.76 ಆಗಿದೆ. ಇದರಲ್ಲಿ ಎರಡು ಶತಕ ಹಾಗೂ 5 ಅರ್ಧಶತಕಗಳು ಸೇರಿವೆ. ಐಸಿಸಿ ಟೂರ್ನಿಯಲ್ಲಿ ಕೇನ್ ವಿಲಿಯಮ್ಸನ್ 148 ರನ್ ಬಾರಿಸಿದ್ದು ಗರಿಷ್ಠ ಸ್ಕೋರ್ ಆಗಿದೆ.
* ವಿಶ್ವಕಪ್ ಟೂರ್ನಿಯ 35ನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಪಾಕಿಸ್ತಾನದ ಬೌಲರ್‌ಗಳ ವಿರುದ್ಧ ಕಿವೀಸ್ ಪಡೆ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದೆ. ನಿಗದಿತ 50 ಓವರ್‌ಗಳಲ್ಲಿ 401 ರನ್‌ಗಳನ್ನು ಗಳಿಸಿರುವ ನ್ಯೂಜಿಲೆಂಡ್ ಪಾಕ್ ತಂಡಕ್ಕೆ ಭಾರೀ ದೊಡ್ಡ ಗುರಿ ನೀಡಿತ್ತು.
* ಭಾನುವಾರ ಈ ಬಾರಿಯ ವಿಶ್ವಕಪ್ ಟೂರ್ನಿಯ ಎರಡು ಬಲಿಷ್ಠ ತಂಡಗಳು ಕಾದಾಟ ನಡೆಸಲಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ಒಂದೆಡೆ ಟೂರ್ನಿಯಲ್ಲಿ ಅಜೇಯವಾಗುಳಿದಿರುವ ಆತಿಥೇಯ ತಂಡ ಟೀಮ್ ಇಂಡಿಯಾ ಹಾಗೂ ಮತ್ತೊಂದೆಡೆ ಅಬ್ಬರದ ಬ್ಯಾಟಿಂಗ್ ಪ್ರದರ್ಶನದ ಮೂಲಕ ಎದುರಾಳಿಗಳನ್ನು ಸದೆಬಡಿತುತ್ತಿರುವ ದಕ್ಷಿಣ ಆಫ್ರಿಕಾ ತಂಡಳು ಈ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ.
* ಅಫ್ಘಾನಿಸ್ತಾನ ತಂಡ ಈ ಬಾರಿಯ ಟೂರ್ನಿಯಲ್ಲಿ ಈವರೆಗೆ 7 ಪಂದ್ಯಗಳನ್ನು ಆಡಿದ್ದು ಅದರಲ್ಲಿ ನಾಲ್ಕು ಗೆಲುವು ಸಾಧಿಸಿ ಗಮನಸೆಳೆದಿದೆ. ಇನ್ನು ಎರಡು ಪಂದ್ಯಗಳು ಬಾಕಿಯಿದ್ದು ಆ ಎರಡರಲ್ಲಿಯೂ ಗೆದ್ದು ಸೆಮಿಫೈನಲ್ ಟಿಕೆಟ್ ಖಚಿತಪಡಿಸಿಕೊಳ್ಳಬೇಕು ಎನ್ನುವ ಲೆಕ್ಕಾಚಾರದಲ್ಲಿ ಅಫ್ಘಾನಿಸ್ತಾನ ತಂಡ ಸಹಜವಾಗಿಯೇ ಇದೆ."ನಾವು ಎದುರಾಳಿಗಲ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮ ಸಾಮರ್ಥ್ಯದ ಮೇಲೆ ಮತ್ತಷ್ಟು ಕೆಲಸ ಮಾಡಲಿದ್ದೇವೆ.ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಎರಡು ಕೂಡ ಬಲಿಷ್ಠವಾದ ತಂಡಗಳು. ಈಗ ನಾವು ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ಸಿದ್ಧವಾಗುತ್ತಿದ್ದೇವೆ. ಅವರಿಗಾಗಿ ಯಾವೆಲ್ಲಾ ಯೋಜನೆಗಳನ್ನು ಮಾಡಿಕೊಳ್ಳಬೇಕು ಎನ್ನುವ ರಣತಂತ್ರವನ್ನು ಹೆಣೆದಿದ್ದೇವೆ" ಎಂದಿದ್ದಾರೆ ಕೋಚ್ ಜೊನಾಥನ್ ಟ್ರಾಟ್.