ಕ್ರಿಕೆಟರ್ ವಿರಾಟ್ ಕೊಹ್ಲಿ ತಂಡದಲ್ಲಿ ಫೆಡರರ್ ಆಟ!
ದುಬೈ, ಸೆ. 10 : ಟೆನಿಸ್ ರಂಗದ ಸೂಪರ್ ಸ್ಟಾರ್ ಸ್ವಿಟ್ಜರ್ಲೆಂಡ್ ನ ರೋಜರ್ ಫೆಡರರ್ ಅವರು ಭಾರತೀಯ ಕ್ರಿಕೆಟರ್ ವಿರಾಟ್ ಕೊಹ್ಲಿ ಅವರ ತಂಡದಲ್ಲಿ ಆಡಲಿದ್ದಾರೆ.
ಮುಂಬರುವ ಅಂತಾರಾಷ್ಟ್ರೀಯ ಪ್ರಿಮಿಯರ್ ಟೆನಿಸ್ ಲೀಗ್ (ಐಪಿಟಿಎಲ್) ನಲ್ಲಿ ಕ್ರಿಕೆಟರ್ ವಿರಾಟ್ ಕೊಹ್ಲಿ ಒಡೆತನದ ಯುಎಇ ರಾಯಲ್ಸ್ ತಂಡದಲ್ಲಿ ರೋಜರ್ ಫೆಡರರ್ ಆಡುವ ವಿಷಯ ಟ್ವಿಟ್ಟರ್ ಮೂಲಕ ತಿಳಿದು ಬಂದಿದೆ.
ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಈಗಾಗಲೇ ಇಂಡಿಯನ್ ಸೂಪರ್ ಲೀಗ್ನಲ್ಲಿ ಗೋವಾ ಫುಟ್ಬಾಲ್ ತಂಡದ ಸಹ ಮಾಲೀಕತ್ವ ಹೊಂದಿದಾರೆ. ಮಹೇಶ್ ಭೂಪತಿ ವಿನ್ಯಾಸದ ಇಂಟರ್ನ್ಯಾಷನಲ್ ಪ್ರೀಮಿಯರ್ ಟೆನಿಸ್ ಲೀಗ್ನಲ್ಲಿ (ಐಪಿಟಿಎಲ್) ಚೊಚ್ಚಲ ಆವೃತ್ತಿಯಲ್ಲಿ ಭಾರತದ ಇಂಡಿಯನ್ ಏಸಸ್ ತಂಡದ ಪರ ಆಡಿದ್ದ ಫೆಡರರ್ ಈ ಬಾರಿ ಯುಎಇ ರಾಯಲ್ಸ್ ಪರ ಆಡುತ್ತಿದ್ದಾರೆ.
2001ರ ವಿಂಬಲ್ಡನ್ ಚಾಂಪಿಯನ್ ಅನಾ ಇವಾನೊವಿಕ್, ಡೇನಿಯಲ್ ನೆಸ್ಟರ್, ಗೋರನ್ ಇವಾನಿಸೆವಿಕ್, ಕ್ರಿಸ್ಟಿನಾ ಮ್ಲಾಡೆನೋವಿಕ್ ಮತ್ತು ಥಾಮಸ್ ಬೆರ್ಡಿಕ್ ಈ ತಂಡದ ಇತರ ಆಟಗಾರರು. ಯುಎಇ ಪಂದ್ಯಗಳು ಡಿಸೆಂಬರ್ 14-16ರಂದು ದುಬೈನಲ್ಲಿ ನಡೆಯಲಿದೆ.
ಇತ್ತೀಚೆಗಷ್ಟೇ ಶ್ರೀಲಂಕಾದಲ್ಲಿ2-1 ಅಂತರರದಲ್ಲಿ 22ವರ್ಷಗಳ ನಂತರ ಟೆಸ್ಟ್ ಸರಣಿ ಗೆದ್ದಿರುವ ವಿರಾಟ್ ಕೊಹ್ಲಿ ಅವರು ಇಂಡಿಯನ್ ಸೂಪರ್ ಲೀಗ್ ನಲ್ಲಿ ಎಫ್ ಸಿ ಗೋವಾ ಫುಟ್ಬಾಲ್ ತಂಡ ಮಾಲೀಕರಾಗಿದ್ದಾರೆ.

ಫೆಡರರ್ ಜೊತೆ ಫ್ಯಾನ್ ಕೊಹ್ಲಿ
ಟೆನಿಸ್ ರಂಗದ ಸೂಪರ್ ಸ್ಟಾರ್ ಸ್ವಿಟ್ಜರ್ಲೆಂಡ್ ನ ರೋಜರ್ ಫೆಡರರ್ ಅವರು ಭಾರತೀಯ ಕ್ರಿಕೆಟರ್ ವಿರಾಟ್ ಕೊಹ್ಲಿ ಅವರ ತಂಡದಲ್ಲಿ ಆಡಲಿದ್ದಾರೆ. ಈ ಹಿಂದೆ ಫೆಡರರ್ ರನ್ನು ಭೇಟಿ ಮಾಡಿದ್ದ ಕೊಹ್ಲಿ ಇದು ನನ್ನ ಜೀವನದ ಅತ್ಯಂತ ಸ್ಮರಣೀಯ ದಿನಗಳಲ್ಲಿ ಒಂದು ಎಂದು ಟ್ವೀಟ್ ಮಾಡಿದ್ದರು.
ಯುಎಇ ರಾಯಲ್ಸ್ ಗೆ ರವಿಶಾಸ್ತ್ರಿ ಸಲಹೆಗಾರ
ಭಾರತ ಕ್ರಿಕೆಟ್ ತಂಡದ ನಿರ್ದೇಶಕ ಹಾಗೂ ಜನಪ್ರಿಯ ವೀಕ್ಷಕ ವಿವರಣೆಕಾರ ರವಿಶಾಸ್ತ್ರಿಅವರು ಕೊಹ್ಲಿ ಒಡೆತನದ ಯುಎಇ ರಾಯಲ್ಸ್ ತಂಡದ ಸಲಹೆಗಾರರಾಗಿರುವುದು ವಿಶೇಷ
ಯುಎಇ ರಾಯಲ್ಸ್ ತಂಡದ ಬಗ್ಗೆ ಮಾಹಿತಿ
ಯುಎಇ ರಾಯಲ್ಸ್ ತಂಡದ ಬಗ್ಗೆ ಮಾಹಿತಿ ನಿಮಗೆ ಟ್ವೀಟ್ ಗಳ ಮೂಲಕ ಲಭ್ಯ.
ಕೊಹ್ಲಿ ಅವರಿಂದ ತಂಡ ಪ್ರಕಟ
ಕೊಹ್ಲಿ ಅವರಿಂದ ಅವರಿಂದ ಅಂತಾರಾಷ್ಟ್ರೀಯ ಪ್ರಿಮಿಯರ್ ಟೆನಿಸ್ ಲೀಗ್ (ಐಪಿಟಿಎಲ್) ಆಡಲಿರುವ ಯುಎಇ ರಾಯಲ್ಸ್ ತಂಡ ಪ್ರಕಟ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications