For Quick Alerts
ALLOW NOTIFICATIONS  
For Daily Alerts
 

NZ vs SL: ನ್ಯೂಜಿಲೆಂಡ್ ವಿರುದ್ಧದ ಏಕದಿನ, ಟಿ20 ಸರಣಿಗೆ 2 ಪ್ರತ್ಯೇಕ ಶ್ರೀಲಂಕಾ ತಂಡ ಪ್ರಕಟ

NZ vs SL: Sri Lanka Squads Announced For ODI And T20 Series Against New Zealand

ಆತಿಥೇಯ ನ್ಯೂಜಿಲೆಂಡ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗಾಗಿ 18 ಸದಸ್ಯರ ಎರಡು ಪ್ರತ್ಯೇಕ ತಂಡಗಳನ್ನು ಶ್ರೀಲಂಕಾ ಕ್ರಿಕೆಟ್ ಸಮಿತಿ ಶುಕ್ರವಾರ, ಮಾರ್ಚ್ 17ರಂದು ಪ್ರಕಟಿಸಿದೆ.

ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಯು ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್ ಅಂಕಗಳನ್ನು ಹೊಂದಿರುತ್ತದೆ.

ದಸುನ್ ಶನಕ ನಾಯಕತ್ವದ ಶ್ರೀಲಂಕಾ ತಂಡ 77 ಅಂಕಗಳೊಂದಿಗೆ ಸೂಪರ್ ಲೀಗ್ ಅಂಕಪಟ್ಟಿಯಲ್ಲಿ ಪ್ರಸ್ತುತ 10ನೇ ಸ್ಥಾನದಲ್ಲಿದೆ. ಭಾರತದಲ್ಲಿ ನಡೆಯುವ 2023ರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯಲು ಲಂಕನ್ನರು ಕೆಲವು ಪಂದ್ಯಗಳನ್ನು ಗೆದ್ದು ಅಂಕಗಳನ್ನು ಗಳಿಸಲು ಎದುರು ನೋಡುತ್ತಿದ್ದಾರೆ.

ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಯು ಮಾರ್ಚ್ 25ರಿಂದ ಪ್ರಾರಂಭವಾಗಲಿದ್ದು, ಟಿ20 ಸರಣಿಯು ಏಪ್ರಿಲ್ 2ರಿಂದ ಪ್ರಾರಂಭವಾಗಲಿದೆ.

ಲಂಕಾದ ವೇಗದ ಬೌಲರ್ ದುಷ್ಮಂತ ಚಮೀರ ಎಡ ಪಾದದ ಶಸ್ತ್ರಚಿಕಿತ್ಸೆಯ ನಂತರ ಇನ್ನೂ ತರಬೇತಿಗೆ ಒಳಗಾಗಿರುವ ಕಾರಣ ಎರಡೂ ಸರಣಿಗಳಿಂದ ಹೊರಗುಳಿದಿದ್ದು, ಶ್ರೀಲಂಕಾದ ಮಾಜಿ ನಾಯಕ ಏಂಜೆಲೊ ಮ್ಯಾಥ್ಯೂಸ್ ಎರಡು ವರ್ಷಗಳ ವಿಶ್ರಾಂತಿಯ ಬಳಿಕ ರಾಷ್ಟ್ರೀಯ ವೈಟ್‌ಬಾಲ್ ತಂಡಕ್ಕೆ ಮರಳಿದ್ದಾರೆ.

NZ vs SL: Sri Lanka Squads Announced For ODI And T20 Series Against New Zealand

ಏಂಜೆಲೊ ಮ್ಯಾಥ್ಯೂಸ್ ಅವರು ಶ್ರೀಲಂಕಾದ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 35 ವರ್ಷದ ಏಂಜೆಲೊ ಮ್ಯಾಥ್ಯೂಸ್ 2021ರಲ್ಲಿ ಕೊನೆಯ ಬಾರಿಗೆ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಪಂದ್ಯವನ್ನು ಆಡಿದ್ದರು. ಇದೇ ವೇಳೆ ವಿಕೆಟ್‌ಕೀಪರ್-ಬ್ಯಾಟರ್ ಕುಶಾಲ್ ಪೆರೇರಾ 16 ತಿಂಗಳ ನಂತರ ಮೊದಲ ಬಾರಿಗೆ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯವು ಮಾರ್ಚ್ 25ರಂದು ಆಕ್ಲೆಂಡ್‌ನಲ್ಲಿ ನಡೆಯಲಿದ್ದು, ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವೂ ಏಪ್ರಿಲ್ 2ರಿಂದ ಅಲ್ಲಿಂದಲೇ ಪ್ರಾರಂಭವಾಗಲಿದೆ.

ಇನ್ನು ಶುಕ್ರವಾರ, ಮಾರ್ಚ್ 17ರಂದು ವೆಲ್ಲಿಂಗ್ಟನ್‌ನಲ್ಲಿ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ತಂಡಗಳು ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯವನ್ನು ಪ್ರಾರಂಭಿಸಿವೆ. ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯವು ಇತಿಹಾಸವನ್ನು ಸೃಷ್ಟಿಸಿದೆ. ಟೆಸ್ಟ್ ಸ್ವರೂಪದ ಇತಿಹಾಸದಲ್ಲಿ 2500ನೇ ಪಂದ್ಯವಾಗಿದೆ.

NZ vs SL: Sri Lanka Squads Announced For ODI And T20 Series Against New Zealand

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಶ್ರೀಲಂಕಾ ತಂಡ ಪ್ರಕಟ
ದಸುನ್ ಶನಕ (ನಾಯಕ), ಪಾತುಮ್ ನಿಸ್ಸಾಂಕ, ನುವಾನಿಡು ಫೆರ್ನಾಂಡೋ, ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್/ ಉಪನಾಯಕ), ಏಂಜೆಲೊ ಮ್ಯಾಥ್ಯೂಸ್, ಚರಿತ್ ಅಸಲಂಕಾ, ಸದೀರ ಸಮರವಿಕ್ರಮ, ಧನಂಜಯ ಡಿ ಸಿಲ್ವಾ, ಸಹನ್ ಅರಾಚ್ಚಿಗೆ, ವನಿಂದು ಹಸರಂಗಾ, ಧುನಿತ್ ವೆಲ್ಲಲಗೆ, ಮಹೀಶ್ ತೀಕ್ಷಣ, ಕಸುನ್ ರಜಿತ, ಲಹಿರು ಕುಮಾರ, ಪ್ರಮೋದ್ ಮದುಶನ್, ದಿಲ್ಶನ್ ಮಧುಶಂಕ, ಚಾಮಿಕ ಕರುಣಾರತ್ನೆ, ಮತೀಶ ಪತಿರಣ

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಶ್ರೀಲಂಕಾ ತಂಡ ಪ್ರಕಟ
ದಸುನ್ ಶನಕ (ನಾಯಕ), ಪಾತುಮ್ ನಿಸ್ಸಾಂಕ, ವನಿಂದು ಹಸರಂಗ (ಉಪನಾಯಕ), ಮಹೀಶ್ ತೀಕ್ಷಣ, ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್), ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ಮಥೀಶ ಪತಿರಣ, ಚಮಿಕ ಕರುಣಾರತ್ನೆ, ಕುಸಾಲ್ ಜನಿತ್ ಪೆರೆರಾ, ಲಸಿತ್ ಕ್ರೂಸ್ಪುಲ್ಲೆ, ಸದೀರ ಸಮರವಿಕ್ರಮ, ನುವಾನಿಡು ಫೆರ್ನಾಂಡೋ, ದುನಿತ್ ವೆಲ್ಲಲಗೆ, ಕಸುನ್ ರಜಿತ, ದಿಲ್ಶಾನ್ ಮಧುಶಂಕ, ಲಹಿರು ಕುಮಾರ, ಪ್ರಮೋದ್ ಮದುಶನ್

Story first published: Friday, March 17, 2023, 21:56 [IST]
Other articles published on Mar 17, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+