ಅಕ್ಟೋಬರ್ 11: ಅಫ್ಘಾನಿಸ್ತಾನ ಬೌಲರ್‌ಗಳ ಚೆಂಡಾಡಿದ ಭಾರತ: ರೋಹಿತ್ ಅಮೋಘ ಶತಕ: ಕ್ರೀಡಾ ಲೋಕದ ಇಂದಿನ ಸುದ್ದಿ
* ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಅಫ್ಘಾನಿಸ್ತಾನ ನೀಡಿದ ಸವಾಲಿನ ಮೊತ್ತವನ್ನು ಬೆನ್ನಟ್ಟಿರುವ ಟೀಮ್ ಇಂಡಿಯಾಗೆ ನಾಯಕ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಅಮೋಘ ಜೊತೆಯಾಟ ನೀಡಿದ್ದು ಅಫ್ಘನ್ ಬೌಲಿಂಗ್ ದಾಳಿಯನ್ನು ಪುಡಿಗಟ್ಟಿದ್ದಾರೆ. ರೋಹಿತ್ ಶರ್ಮಾ ಅಮೋಘ ಶತಕ ಸಿಡಿಸಿದ್ದು ಭಾರತದ ನೆಲದಲ್ಲಿ ಪ್ರಪ್ರಥಮ ವಿಶ್ವಕಪ್ ಶತಕ ಸಿಡಿಸಿದ್ದಾರೆ.
* 2019ರ ಜುಲೈ 4ರಂದು ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 50 ಓವರ್‌ಗಳಲ್ಲಿ ಅಫ್ಘಾನಿಸ್ತಾನ ತಂಡದ ಗರಿಷ್ಠ ಸ್ಕೋರ್ 288 ರನ್ ದಾಖಲಾಗಿದೆ. ಅಲ್ಲದೆ, ಅಫ್ಘಾನಿಸ್ತಾನ ತಂಡ ಮೊದಲು ಬ್ಯಾಟಿಂಗ್ ಮಾಡುವಾಗ ವಿಶ್ವಕಪ್‌ನಲ್ಲಿ ತಮ್ಮ ತಂಡದ ಗರಿಷ್ಠ ಮೊತ್ತವನ್ನು ಗಳಿಸಿದೆ. 2015ರ ಫೆಬ್ರವರಿ 22ರಂದು ಡ್ಯುನೆಡಿನ್‌ನ ಯೂನಿವರ್ಸಿಟಿ ಓವಲ್‌ನಲ್ಲಿ ಶ್ರೀಲಂಕಾ ವಿರುದ್ಧ 49.4 ಓವರ್‌ಗಳಲ್ಲಿ ಅಫ್ಘಾನಿಸ್ತಾನದ ಹಿಂದಿನ ಗರಿಷ್ಠ ಸ್ಕೋರ್ 232 ಆಗಿದೆ.

* ಭಾರತ ಹಾಗೂ ಅಫ್ಘಾನಿಸ್ತಾನ ತಂಡಗಳು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿದೆ. ಈ ಪಂದ್ಯದ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾದ ಮಾಜಿ ಆಟಗಾರ ಕನ್ನಡಿಗ ರಾಬಿನ್ ಉತ್ತಪ್ಪ ಪ್ರತಿಕ್ರಿಯೆ ನೀಡಿದ್ದು ಪಂದ ಮೇಲೆ ತಮ್ಮ ಕುತೂಹಲವನ್ನು ಹಂಚಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಹಾಗೂ ಅಫ್ಘಾನಿಸ್ತಾನದ ವೇಗಿ ನವೀನ್ ಉಲ್ ಹಕ್ ಮುಖಾಮುಖಿಯಾಗುವುದನ್ನು ಕಾಯುತ್ತಿದ್ದೇನೆ ಎಂದಿದ್ದಾರೆ ರಾಬಿನ್ ಉತ್ತಪ್ಪ.
* ಈ ಪಂದ್ಯ ಆರಂಭವಾಗುತ್ತಿದ್ದಂತೆಯೇ ಇಂಗ್ಲೆಂಡ್ ತಂಡದ ಮಾಜಿ ನಾಯಕ ಕಾಮೆಂಟೇಟರ್ ಮೈಕಲ್ ವಾನ್ ಈ ಪಂದ್ಯಕ್ಕೂ ಪ್ರೇಕ್ಷಕರೇ ಇಲ್ಲ ಎಂದು ಟ್ವೀಟ್ ಮಾಡಿದ್ದು ಅಚ್ಚರಿ ಮೂಡಿಸಿದೆ. ಪಂದ್ಯ ಆರಂಭವಾದ ಕೆಲವೇ ಹೊತ್ತಿನಲ್ಲಿ ಅವರು ಭಾರತ ಹಾಗೂ ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೂ ಪ್ರೇಕ್ಷಕರು ತುಂಬದೆ ಖುರ್ಚಿಗಳು ಖಾಲಿಯಿದೆ ಯಾಕೆ? ಎಂದು ಟ್ವೀಟ್ ಮಾಡಿದ್ದಾರೆ.
* ವೇಗಿ ಮೊಹಮ್ಮದ್ ಸಿರಾಜ್ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಭಾರತದ ನಾಲ್ಕನೇ ಅತ್ಯಂತ ದುಬಾರಿ ಸ್ಪೆಲ್ ಬೌಲ್ ಮಾಡಿದ ಕುಖ್ಯಾತಿಗೆ ಒಳಗಾದರು. 2023ರ ವಿಶ್ವಕಪ್ ಪಂದ್ಯಾವಳಿಯ ಹಶ್ಮತುಲ್ಲಾ ಶಾಹಿದಿ ನಾಯಕತ್ವದ ಅಫ್ಘಾನಿಸ್ತಾನ ವಿರುದ್ಧ ಮೊಹಮ್ಮದ್ ಸಿರಾಜ್ 9-0-76-0 ಅಂಕಿಸಂಖ್ಯೆಗಳೊಂದಿಗೆ ಮುಗಿಸಿದರು. 2019ರ ಜೂನ್ 30ರಂದು ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 10-0-88-0 ಅಂಕಿಅಂಶಗಳೊಂದಿಗೆ ಮುಕ್ತಾಯಗೊಂಡ ನಂತರ ಯುಜ್ವೇಂದ್ರ ಚಹಾಲ್ ಅತ್ಯಂತ ದುಬಾರಿ ಸ್ಪೆಲ್‌ನ ದಾಖಲೆಯನ್ನು ಹೊಂದಿದ್ದಾರೆ.
* ಭಾರತದ ಮಾಜಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ತಮ್ಮ ಮಾಜಿ ಸಹ ಆಟಗಾರ ಹಾಗೂ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ಶ್ಲಾಘಿಸಿದರು ಮತ್ತು ಪಂದ್ಯದ ಕೊನೆಯ ಎಸೆತದವರೆಗೂ ಹೋರಾಡುವ ಸ್ಪಿನ್ನರ್ ಎಂದು ಹೇಳಿದರು. ಈ ಮೊದಲು 2023ರ ವಿಶ್ವಕಪ್ ಭಾರತ ತಂಡಕ್ಕೆ ರವಿಚಂದ್ರನ್ ಅಶ್ವಿನ್ ಅವರ ಹಾದಿಯು ಸುಲಭವಾಗಿರಲಿಲ್ಲ. ಆರಂಭದಲ್ಲಿ ಅಶ್ವಿನ್ ಭಾರತದ ವಿಶ್ವಕಪ್ ಯೋಜನೆಗಳಲ್ಲಿ ನಿಶ್ಚಿತ ಆಟಗಾರನಾಗಿರಲಿಲ್ಲ. ರಾಷ್ಟ್ರೀಯ ಆಯ್ಕೆ ಸಮಿತಿಯು ಗುರುತಿಸಿದ ಹೆಸರಿಸದ ಸ್ಟ್ಯಾಂಡ್-ಬೈ ಆಟಗಾರರಲ್ಲಿ ಒಬ್ಬರಾಗಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications