ಆಸ್ಟ್ರೇಲಿಯಾ vs ವೆಸ್ಟ್ ಇಂಡೀಸ್: ಏಕದಿನ ಸರಣಿಗೆ ವಿಂಡೀಸ್ ತಂಡ ಆಯ್ಕೆ

ಕ್ರಿಕೆಟ್ ವೆಸ್ಟ್ ಇಂಡೀಸ್‌ನ ಆಯ್ಕೆ ಸಮಿತಿ ಗುರುವಾರ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ತಂಡವನ್ನು ಆಯ್ಕೆ ಮಾಡಿದೆ. ಈ ಸರಣಿ ಜುಲೈ 20 ರಿಂದ ಆರಂಭಗೊಳ್ಳಲಿದೆ. ಈ ತಂಡದಲ್ಲಿ ಈ ವರ್ಷಾರಂಭದಲ್ಲಿ ಶ್ರೀಲಂಕಾ ವಿರುದ್ಧ 3-0 ಅಂತರದಿಂದ ಗೆದ್ದ ತಂಡದ ಸದಸ್ಯರು ಅವಕಾಶವನ್ನು ಗಿಟ್ಟಿಉಸಿಕೊಂಡಿದ್ದಾರೆ.
ಈ ತಂಡದಲ್ಲಿ ಎಡಗೈ ವೇಗಿ ಶೆಲ್ಡನ್ ಕಾಟ್ರೆಲ್ ಮತ್ತೆ ಆಯ್ಕೆಯಾಗುವ ಮೂಲಕ ತಂಡಕ್ಕೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಜೊತೆಗೆ ಅಗ್ರ ಕ್ರಮಾಂಕದ ಎಡಗೈ ಬ್ಯಾಟ್ಸ್‌ಮನ್ ಶಿಮ್ರಾನ್ ಹೇಟ್ಮೇರ್ ಹಾಗೂ ಆಲ್‌ರೌಂಡರ್ ರೋಸ್ಟೊನ್ ಚೇಸ್ ಕೂಡ ಮತ್ತೆ ಏಕದಿನ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಮೂರು ಪಂದ್ಯಗಳ ಏಕದಿನ ಸರಣಿ ಇದಾಗಿದ್ದು ಬಾರ್ಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ಪಂದ್ಯಗಳು ನಡೆಯಲಿದೆ. ಜುಲೈ 20, 22 ಹಾಗೂ 24ರಂದು ಮೂರು ಪಂದ್ಯಗಳು ಆಯೋಜನೆಯಾಗಲಿದೆ. ಈ ಮೂಲಕ ಪಂದ್ಯಗಳು ಕೂಡ ಅಹರ್ನಿಶಿ ಪಂದ್ಯವಾಗಿರಲಿದೆ.
"ಈ ತಂಡ ಶ್ರೀಲಂಕಾ ವಿರುದ್ಧ ಭರ್ಜರಿ ಗೆಲುವನ್ನು ಸಾಧಿಸಿದೆ. ಹೀಗಾಗಿ ತಂಡದಲ್ಲಿ ಬಲಿಷ್ಟ ತಂಡವಾಗಿರುವ ಆಸ್ಟ್ರೇಲಿಯಾ ವಿರುದ್ಧದ ಒಂದ್ಯದಲ್ಲಿ ಸೆಣೆಸಾಡಲು ಸಾಕಷ್ಟು ಆತ್ಮವಿಶ್ವಾಸವನ್ನು ನೀಡುತ್ತದೆ. ಶಿಮ್ರಾನ್ ಹೇಟ್ಮೇರ್, ರೋಸ್ಟೊನ್ ಚೇಸ್ ಮತ್ತು ಶೆಲ್ಡನ್ ಕಾಟ್ರೆಲ್ ತಂಡಕ್ಕೆ ಮರಳಿರುವುದು ತಂಡವನ್ನು ಆಳದಿಂದ ಬಲಿಷ್ಟಗೊಳಿಸುತ್ತದೆ" ಎಂದು ಆಯ್ಕೆ ಸಮಿತಿಯ ಮುಖ್ಯಸ್ಥ ರೋಜರ್ ಹಾರ್ಪರ್ ಹೇಳಿದ್ದಾರೆ.
ವೆಸ್ಟ್ ಇಂಡೀಸ್ ತಂಡದ ಸದಸ್ಯರು: ಕಿರಾನ್ ಪೊಲಾರ್ಡ್ (ನಾಯಕ), ಶಾಯ್ ಹೋಪ್ (ಉಪ ನಾಯಕ), ಫ್ಯಾಬಿಯನ್ ಅಲೆನ್, ಡ್ಯಾರೆನ್ ಬ್ರಾವೋ, ರೋಸ್ಟನ್ ಚೇಸ್, ಶೆಲ್ಡನ್ ಕಾಟ್ರೆಲ್, ಶಿಮ್ರಾನ್ ಹೆಟ್ಮಿಯರ್, ಜೇಸನ್ ಹೋಲ್ಡರ್, ಅಕೀಲ್ ಹೊಸೈನ್, ಅಲ್ಜಾರಿ ಜೋಸೆಫ್, ಎವಿನ್ ಲೂಯಿಸ್, ಜೇಸನ್ ಮೊಹಮ್ಮದ್, ಆಂಡರ್ಸನ್ ಫಿಲಿಪ್, ನಿಕೋಲಸ್ ಪೂರನ್, ರೊಮಾರಿಯೋ ಶೆಫರ್ಡ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications