ಏಕದಿನ ಸರಣಿ: ಪಾಕಿಸ್ತಾನಕ್ಕೆ ಸುಲಭ ಸವಾಲಾದ ಜಿಂಬಾಬ್ವೆ

ಪಾಕಿಸ್ತಾನ ಹಾಗೂ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲೂ ಪಾಕಿಸ್ತಾನ ಗೆಲುವು ಕಂಡಿದೆ. ಮೊದಲ ಪಂದ್ಯದಲ್ಲಿ ಸಾಕಷ್ಟು ಪೈಪೋಟಿ ನೀಡಿದ್ದ ಜಿಂಬಾಬ್ವೆ ಸೋಮವಾರದ ಪಂದ್ಯದಲ್ಲಿ ನೀರಸವಾಗಿ ಶರಣಾಗಿದೆ. ಎದುರಾಳಿ ಪಾಕಿಸ್ತಾನದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗದೆ ಜಿಂಬಾಬ್ವೆ 206 ರನ್‌ಗಳಿಗೆ ಆಲೌಟ್ ಆಯಿತು.
ಜಿಂಬಾಬ್ವೆ ತಂಡದ ಪರವಾಗಿ ಸೀನ್ ವಿಲಿಯಮ್ಸ್ ಅದ್ಭುತ ಆಟವನ್ನು ಪ್ರದರ್ಶಿಸಿದ್ದಾರೆ. 70 ಎಸೆತವನ್ನು ಎದುರಿಸಿದ ವಿಲಿಯಮ್ಸ್ 75 ರನ್ ಬಾರಿಸಿದ್ದಾರೆ. ಯಳಿದಂತೆ ಬ್ರೆಂಡನ್ ಟೇಯ್ಲರ್ 36 ರನ್ ಹಾಗೂ ಆರಂಭಿಕ ಆಟಗಾರ ಚಾರಿ ಗಳಿಸಿದ 24 ರನ್ ಅತಿ ಹೆಚ್ಚಿನ ಮೊತ್ತವಾಗಿದೆ. ಉಳಿದ ಎಲ್ಲಾ ಆಟಗಾರರು ನೀರಸ ಪ್ರದರ್ಶನ ನೀಡಿದ್ದಾರೆ.
ಪಾಕಿಸ್ತಾನ ತಂಡದ ಪರವಾಗಿ ಬೌಲಿಂಗ್ ವಿಭಾಗದಲ್ಲಿ ಇಫ್ತಿಕಾರ್ ಅಹ್ಮದ್ ಭೀಕರ ಬೌಲಿಂಗ್ ದಾಳಿಯನ್ನು ನಡೆಸಿದರು. 10 ಓವರ್‌ಗಳಲ್ಲಿ 40 ರನ್ ನೀಡಿ 5 ವಿಕೆಟ್ ಪಡೆದಿದ್ದಾರೆ. ಯಳಿದಂತೆ ಮಹಮ್ಮದ್ ಮೂಸಾ 2 ವಿಕೆಟ್ ಪಡೆದರೆ ಹ್ಯಾರಿಸ್ ರೌಫ್, ಫಹೀಮ್ ಅಶ್ರಫ್, ಇಮದ್ ವಾಸಿಮ್ ತಲಾ ಒಂದು ವಿಕೆಟ್ ಪಡೆದರು.
ಜಿಂಬಾಬ್ವೆ ತಂಡ ನೀಡಿದ 207ರನ್‌ಗಳ ಗುರಿಯನ್ನು ಪಾಕಿಸ್ತಾನ ಸಮರ್ಥವಾಗಿ ಬೆನ್ನಟ್ಟಲು ಆರಂಭಿಸಿತು. ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ 77 ರನ್‌ಗಳ ಕೊಡುಗೆಯನ್ನು ನೀಡಿದರೆ, ಇಮಾಮ್ ಉಲ್ ಹಕ್ 49 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. 35.2 ಓವರ್‌ಗಳಲ್ಲಿ ಜಿಂಬಾಬ್ವೆ ತಂಡ ನೀಡಿದ 207 ರನ್‌ಗಳ ಗುರಿಯನ್ನು ತಲುಪುವಲ್ಲಿ ಪಾಕಿಸ್ತಾನ ಯಶಸ್ವಿಯಾಯಿತು.
ಈ ಗೆಲುವಿನ ಮೂಲಕ ಪಾಕಿಸ್ತಾನ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ. ಏಕದಿನ ಸರಣಿಯ ಬಳಿಕ ಪಾಕಿಸ್ತಾನ 3 ಪಂದ್ಯಗಳ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications