Pak vs Ned: ನೆದರ್ಲ್ಯಾಂಡ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಪಾಕಿಸ್ತಾನ
ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ 2023ರ ಎರಡನೇ ಪಂದ್ಯದಲ್ಲಿ, ನೆದರ್ಲ್ಯಾಂಡ್ಸ್ ವಿರುದ್ಧ ಪಾಕಿಸ್ತಾನ ತಂಡವು 81 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಈ ಬಾರಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಶುಭಾರಂಭ ಮಾಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 49 ಓವರ್ ಗಳಲ್ಲಿ 286 ರನ್ ಗಳಿಸಿ ಆಲೌಟ್ ಆಯಿತು. ಈ ಸವಾಲಿನ ಮೊತ್ತವನ್ನು ಬೆನ್ನತ್ತಿದ ನೆದರ್ಲ್ಯಾಂಡ್ಸ್ 41 ಓವರ್ ಗಳಲ್ಲಿ 205 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು.

ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಆರಂಭಿಕರಾದ ಫಖಾರ್ ಜಮಾನ್ 12 ರನ್ ಗಳಿಸಿ ಔಟಾದರೆ, ಇಮಾಮ್ ಉಲ್ ಹಕ್ 15 ರನ್ ಗಳಿಸಿದರು. ನಂತರ ಬಂದ ಬಾಬರ್ ಅಜಮ್ 18 ಎಸೆತಗಳಲ್ಲಿ ಕೇವಲ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
38 ರನ್ ಗಳಿಸುವಷ್ಟರಲ್ಲಿ ಪಾಕಿಸ್ತಾನ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ನಂತರ ಬಂದ ಮೊಹಮ್ಮದ್ ರಿಜ್ವಾನ್ ಮತ್ತು ಸೌದ್ ಶಕೀಲ್ 120 ರನ್‌ಗಳ ಜೊತೆಯಾಟ ಆಡುವ ಮೂಲಕ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ರಿಜ್ವಾನ್ 68 ರನ್ ಗಳಿಸಿದರೆ, ಸೌದ್ ಶಕೀಲ್ 52 ಎಸೆತಗಳಲ್ಲಿ 68 ರನ್ ಗಳಿಸಿದರು.
ನೆದರ್ಲ್ಯಾಂಡ್ಸ್ ತಂಡ ಅತ್ಯುತ್ತಮ ಬೌಲಿಂಗ್ ಮಾಡಿತು. ಬಾಸ್ ಡಿ ಲೀಡೆ 4 ವಿಕೆಟ್ ಪಡೆದರು. ಕೊಲಿನ್ ಅಕೆರ್‍ಮಾನ್ 2 ವಿಕೆಟ್ ಪಡೆದರೆ, ಪೌಲ್ ವ್ಯಾನ್ ಮೀಕರನ್, ಆರ್ಯನ್ ದತ್ ಮತ್ತು ಲೋಗನ್ ವ್ಯಾನ್ ಬೀಕ್ ತಲಾ ಒಂದು ವಿಕೆಟ್ ಪಡೆದರು.
ಪಾಕಿಸ್ತಾನದ ಉತ್ತಮ ಬೌಲಿಂಗ್
ಈ ಸವಾಲಿನ ಮೊತ್ತವನ್ನು ಬೆನ್ನತ್ತಿದ ನೆದರ್ಲ್ಯಾಂಡ್ಸ್ ಆರಂಭದಲ್ಲೇ ಮ್ಯಾಕ್ಸ್ ಓಡೌಡ್ ಅವರ ವಿಕೆಟ್ ಕಳೆದುಕೊಂಡಿತು. ಮ್ಯಾಕ್ಸ್ ಕೇವಲ 5 ರನ್ ಗಳಿಸಿ ಔಟಾದರು. ಕಾಲಿನ್ ಅಕರ್‍ಮಾನ್ 17 ರನ್ ಗಳಿಸಿ ಔಟಾದರು.
ವಿಕ್ರಮ್‌ಜಿತ್ ಸಿಂಗ್ 52 ರನ್ ಮತ್ತು ಬಾಸ್ ಡಿ ಲೀಡೆ 67 ರನ್ ಗಳಿಸುವ ಮೂಲಕ ಒಂದು ಹಂತದವರೆಗೆ ಗೆಲುವಿಗೆ ಹೋರಾಟ ನಡೆಸಿದರು. ಆದರೆ ಇವರಿಬ್ಬರೂ ಔಟಾದ ನಂತರ ಉಳಿದ ಬ್ಯಾಟರ್ ಗಳು ರನ್ ಗಳಿಸುವಲ್ಲಿ ವಿಫಲವಾದರು. ಪಾಕ್ ಬೌಲರ್ ಗಳು ಮೇಲುಗೈ ಸಾಧಿಸುವ ಮೂಲಕ ನೆದರ್ಲ್ಯಾಂಡ್ಸ್ ಮೇಲೆ ಒತ್ತಡ ಹಾಕಿದರು. ಲೋಗನ್ ವ್ಯಾನ್ ವೀಕ್ 28 ರನ್ ಗಳಿಸಿದರೂ ಹೆಚ್ಚಿನ ಪ್ರಯೋಜನವಾಗಲಿಲ್ಲ.
ಹ್ಯಾರಿಸ್ ರೌಫ್ 3 ವಿಕೆಟ್ ಪಡೆದರೆ, ಹಸನ್ ಅಲಿ 2 ವಿಕೆಟ್ ಪಡೆದರು. ಶಹೀನ್ ಅಫ್ರಿದಿ, ಇಫ್ತಿಕರ್ ಅಹಮದ್, ಮೊಹಮ್ಮದ್ ನವಾಜ್ ಮತ್ತು ಶದಾಬ್ ಖಾನ್ ತಲಾ ಒಂದು ವಿಕೆಟ್ ಪಡೆದರು. ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ ಪಾಕಿಸ್ತಾನ ತನ್ನ ಮುಂದಿನ ಪಂದ್ಯದಲ್ಲಿ ಶ್ರೀಲಂಕಾವನ್ನು ಎದುರಿಸಲಿದೆ. ಅಕ್ಟೋಬರ್ 10ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications