For Quick Alerts
ALLOW NOTIFICATIONS  
For Daily Alerts
 

Pak vs Ned: ರಿಜ್ವಾನ್, ಶಕೀಲ್ ಅರ್ಧಶತಕ: ಸವಾಲಿನ ಮೊತ್ತ ಕಲೆಹಾಕಿದ ಪಾಕಿಸ್ತಾನ

ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ 2023ರ ಎರಡನೇ ಪಂದ್ಯದಲ್ಲಿ, ಪಾಕಿಸ್ತಾನ ತಂಡ ನೆದರ್ಲ್ಯಾಂಡ್ಸ್ ವಿರುದ್ಧ ಸವಾಲಿನ ಮೊತ್ತ ಕಲೆಹಾಕಿದೆ. 49 ಓವರ್ ಗಳಲ್ಲಿ 286 ರನ್ ಗಳಿಸಿದ ಪಾಕಿಸ್ತಾನ ಆಲೌಟ್ ಆಯಿತು.

ಟಾಸ್ ಗೆದ್ದ ನೆದರ್ಲ್ಯಾಂಡ್ಸ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಪಾಕಿಸ್ತಾನ ಅಗ್ರ ಮೂರು ಆಟಗಾರರು ಉತ್ತಮ ರನ್ ಗಳಿಸುವಲ್ಲಿ ವಿಫಲವಾದರು. ಫಖಾರ್ ಜಮಾನ್ 12 ರನ್ ಗಳಿಸಿ ಔಟಾದರೆ, ಇಮಾಮ್ ಉಲ್ ಹಕ್ 15 ರನ್ ಗಳಿಸಿದರು, ನಾಯಕ ಬಾಬರ್ ಅಜಂ ಕೇವಲ 5 ರನ್ ಗಳಿಸಿ ಔಟಾದರು.

odi-world-cup

38 ರನ್ ಗಳಿಸುವಷ್ಟರಲ್ಲಿ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಪಾಕಿಸ್ತಾನ ತಂಡಕ್ಕೆ ಮಹಮ್ಮದ್ ರಿಜ್ವಾನ್ ಮತ್ತು ಸೌದ್ ಶಕೀಲ್ ಆಸರೆಯಾದರು. ಇಬ್ಬರೂ ಅರ್ಧಶತಕ ಗಳಿಸುವ ಮೂಲಕ ಪಾಕ್ ತಂಡ ಉತ್ತಮ ಮೊತ್ತ ಗಳಿಸಲು ಸಹಾಯ ಮಾಡಿದರು.

4ನೇ ವಿಕೆಟ್‌ಗೆ ಈ ಜೋಡಿ 120 ರನ್ ಕಲೆಹಾಕಿತು. ಮಹಮ್ಮದ್ ರಿಜ್ವಾನ್ 68 ರನ್ ಗಳಿಸಿದರೆ, ಸೌದ್ ಶಕೀಲ್ 52 ಎಸೆತಗಳಲ್ಲಿ 68 ರನ್ ಗಳಿಸಿ ಮಿಂಚಿದರು. ಮೊಹಮ್ಮದ್ ನವಾಜ್ 39 ರನ್ ಗಳಿಸಿದರೆ, ಶದಾಬ್ ಖಾನ್ 32 ರನ್ ಗಳಿಸಿದರು. ಅಂತಿಮವಾಗಿ ಪಾಕಿಸ್ತಾನ 49 ಓವರ್ ಗಳಲ್ಲಿ 286 ರನ್ ಗಳಿಸಿ ಆಲೌಟ್ ಆಯಿತು.

ಬಾಸ್ ಡಿ ಲೀಡೆ ಅತ್ಯುತ್ತಮ ಬೌಲಿಂಗ್

ನೆದರ್ಲ್ಯಾಂಡ್ಸ್ ತಂಡ ಅತ್ಯುತ್ತಮ ಬೌಲಿಂಗ್ ದಾಳಿ ಸಂಘಟಿಸಿತು. ಬಾಸ್ ಡಿ ಲೀಡೆ 9 ಓವರ್ ಗಳಲ್ಲಿ 62 ರನ್ ನೀಡಿ 4 ವಿಕೆಟ್ ಪಡೆದರು. ಕೊಲಿನ್ ಅಕೆರ್‍ಮಾನ್ 2 ವಿಕೆಟ್ ಪಡೆದರೆ, ಆರ್ಯನ್ ದತ್, ಪೌಲ್ ವ್ಯಾನ್ ಮೀಕರನ್ ಮತ್ತು ಲೋಗನ್ ವ್ಯಾನ್ ಬೀಕ್ ತಲಾ ಒಂದು ವಿಕೆಟ್ ಪಡೆದರು.

Story first published: Friday, October 6, 2023, 18:04 [IST]
Other articles published on Oct 6, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+