ಶತಕ ಬಾರಿಸಿ ದಾಖಲೆ ಬರೆದ ಒಲಿ ಪೋಪ್, ಉತ್ತಮ ಮೊತ್ತದತ್ತ ಇಂಗ್ಲೆಂಡ್
ಶ್ರೀಲಂಕಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡಿ ಅಮೋಘ ಪ್ರದರ್ಶನ ನೀಡುತ್ತಿದೆ. ಮೊದಲ ದಿನದಾಟದ ಅಂತ್ಯಕ್ಕೆ 3 ವಿಕೆಟ್‌ಗೆ 221 ರನ್ ಸೇರಿಸಿತು. ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕ ಓಲಿ ಪೋಪ್ ಇತಿಹಾಸದ ಪುಟ ಸೇರಿದ್ದಾರೆ.
ಒಲಿ ಪೋಪ್ ನಾಯಕತ್ವದಲ್ಲಿ ಆಡುತ್ತಿರುವ ಇಂಗ್ಲೆಂಡ್ ತಂಡ ಮೂರನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿತು. ಈ ವೇಳೆ ಒಲಿ ಪೋಪ್ ತಮ್ಮ ಬ್ಯಾಟಿಂಗ್ ಕಲೆಯ ಅನವಾರಣ ಮಾಡಿದರು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಪೋಪ್ ದಾಖಲಿಸಿದ 7 ನೇ ಶತಕವಾಗಿದೆ. ಈ ಶತಕದ ಮೂಲಕ ಪೋಪ್ ದಾಖಲೆಯ ಪುಟ ಸೇರಿದರು.

ಈ ಶತಕ ಏಕೆ ವಿಶಿಷ್ಠ?
ಒಬ್ಬ ಬ್ಯಾಟರ್ ಆಗಿ ಒಲಿ ಪೋಪ್ 7 ಶತಕ ಬಾರಿಸಿದ ಸಾಧನೆಯನ್ನು ಮಾಡಿದ್ದಾರೆ. ಎಲ್ಲ ಶತಕಗಳಿಗಿಂತ ಈ ಶತಕದಲ್ಲಿ ಅಂತಹದ್ದೇನು ಅಚ್ಚರಿ ಎಂದು ನೀವು ಅನ್ನಬಹುದು. ಇವರು ಟೆಸ್ಟ್ ಆಡುವ ಐದು ತಂಡಗಳ ವಿರುದ್ಧ ಏಳು ಶತಕ ಬಾರಿಸಿದ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಹಿಂದೆ ಯಾವುದೇ ಆಟಗಾರ ಈ ಸಾಧನೆ ಮಾಡಿಲ್ಲ. ಈ ಪಂದ್ಯದಲ್ಲಿ ಅವರು ಕೇವಲ 102 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ನಾಯಕನಾಗಿ ಅವರ ಮೊದಲ ಶತಕವಾಗಿದೆ.
ಒಲಿ ಪೋಪ್ 2020ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಟೆಸ್ಟ್ ವೃತ್ತಿ ಜೀವನದ ಮೊದಲ ಶತಕವನ್ನು ಬಾರಿಸಿದರು. ಇದಾದ ಬಳಿಕ ನ್ಯೂಜಿಲೆಂಡ್, ಪಾಕಿಸ್ತಾನ, ಐರ್ಲೆಂಡ್, ಭಾರತ, ವೆಸ್ಟ್ ಇಂಡೀಸ್ ಹಾಗೂ ಶ್ರೀಲಂಕಾ ದೇಶಗಳ ವಿರುದ್ಧ ಮೂರಂಕಿ ಸಾಧನೆ ಮಾಡಿದರು.
ಬೇಸ್ ಬಾಲ್ ಮಾದರಿಯ ಆಟಕ್ಕೆ ಹೆಸರುವಾಸಿಯಾಗಿರುವ ಇಂಗ್ಲೆಂಡ್, ಮೂರನೇ ಟೆಸ್ಟ್ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ನಡೆಸಿತು. ಇಂಗ್ಲೆಂಡ್, ಶ್ರೀಲಂಕಾ ವಿರುದ್ಧ 5.00ರ ಸರಾಸರಿಯಲ್ಲಿ ಹೆಚ್ಚಿನ ರನ್ ಕಲೆ ಹಾಕಿದರು. ಪ್ರಸ್ತುತ, ಹ್ಯಾರಿ ಬ್ರೂಕ್ ಒಲ್ಲಿ ಪೋಪ್ ಅವರೊಂದಿಗೆ ಮೊದಲ ಇನಿಂಗ್ಸ್‌ನಲ್ಲಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇಂಗ್ಲೆಂಡ್ ದಿನದಾಟದ ಮುಕ್ತಾಯಕ್ಕೆ ಮೂರು ವಿಕೆಟ್‌ಗೆ 221 ರನ್ ಸೇರಿಸಿದೆ.
ಪೋಪ್ ಅವರ ಅಮೋಘ ಇನಿಂಗ್ಸ್‌ನಲ್ಲಿ 13 ಬೌಂಡರಿ, 2 ಸಿಕ್ಸರ್‌ಗಳು ಸೇರಿವೆ. ಆರಂಭಿಕ ಬೆನ್ ಡಕೆಟ್ 79 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್ ಸಹಾಯದಿಂದ 86 ರನ್ ಬಾರಿಸಿ ಔಟ್ ಆದರು. ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ ಉತ್ತಮ ಮೊತ್ತದತ್ತ ದಾಪುಗಾಲು ಇಟ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications