Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

39ನೇ ವರ್ಷಕ್ಕೆ ಕಾಲಿಟ್ಟ ಮಿಸ್ಟರ್ ಕೂಲ್‌ಗೆ ವಿಶೇಷ ಉಡುಗೊರೆ ನೀಡಿದ ಬ್ರಾವೋ

On Eve Of Ms Dhonis 39th Birthday, Dwayne Bravo Releases New Song

ಭಾರತ ಕ್ರಿಕೆಟ್ ಕಂಡ ಅತ್ಯಂತ ಯಶಸ್ವೀ ನಾಯಕ ಮಹೇಂದ್ರ ಸಿಂಗ್ ಧೋನಿ ಇಂದು 39ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಧೋನಿ ಅಭಿಮಾನಿಗಳು ಮಾತ್ರವಲ್ಲ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಈ ವಿಶೇಷ ದಿನದಂದು ಚೆನ್ನೈ ಸೂಪರ್ ಕಿಂಗ್ಸ್ ಸಹ ಆಟಗಾರ ಡ್ವೇಯ್ನ್ ಬ್ರಾವೋ ಮತ್ತಷ್ಟು ವಿಶೇಷವಾಗಿ ಶುಭಕೋರಿದ್ದಾರೆ.

ಹೌದು, ಡ್ವೇಯ್ನ್ ಬ್ರಾವೋ ತಮ್ಮ ನೆಚ್ಚಿನ ನಾಯಕ ಧೋನಿಗಾಗಿ ಸಿದ್ದಪಡಿಸಿದ ವಿಶೇಷ ಹಾಡನ್ನು ಇಂದು ಬಿಡುಗಡೆಗೊಳಿಸಿದ್ದಾರೆ. ಧೋನಿಯ ಬಗ್ಗೆ ವಿಶೇಷ ಸಾಲುಗಳನ್ನು ಬರೆದು ಡ್ವೇಯ್ನ್ ಬ್ರಾವೋ ಈ ಹಾಡಿನ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಡ್ವೇಯ್ನ್ ಬ್ರಾವೋ "ಕಾಯುವಿಕೆ ಈಗ ಅಂತ್ಯವಾಗಿದೆ. ಮಾಹಿ ನೀವು ನಿಜವಾಗಿಯೂ ಸುತ್ತಲಿನ ಎಲ್ಲ ಜನರಿಗೂ ಶ್ರೇಷ್ಠ ಸ್ಪೂರ್ತಿಯಾಗಿದೆ. ನಾವೆಲ್ಲಾ ನಿಮ್ಮ ಹುಟ್ಟುಹಬ್ಬವನ್ನು ಆಚರಿಸಲು ಸಿದ್ಧರಾಗಿದ್ದೇವೆ, ನನ್ನ ಅಭಿಮಾನಿಗಳ ಪರವಾಗಿ, ನನ್ನ ತಂಡದ ಪರವಾಗಿ ನಿಮ್ಮ ಅಭಿಮಾನಿಗಳ ಪರವಾಗಿ ನಿಮಗೆ ಒಳ್ಳೆಯದಾಗಲೆಂದು ಪ್ರಾರ್ಥಿಸುತ್ತೇನೆ. ಹೆಲಿಕಾಫ್ಟರ್ ಹಾರಾಡುತ್ತಿದೆ" ಎಂದು ಹಾಡಿನ ಬಿಡುಗಡೆಯನ್ನು ಘೋಷಿಸಿದ್ದಾರೆ.

'ಹೆಲಿಕಾಫ್ಟರ್ 7' ಈ ಹಾಡನ್ನು ಡ್ವೇಯ್ನ್ ಬ್ರಾವೋ ಸ್ವತಃ ರಚಿಸಿ ಸಂಯೋಜಿಸಿದ್ದಾರೆ. ಇಂದು ಈ ಹಾಡನ್ನು ಬಿಡುಗಡೆಗೊಳಿಸಿದ್ದು ಯೂಟ್ಯೂಬ್‌ನಲ್ಲಿ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ವೀಕ್ಷಿಸಿ ಪ್ರತಿಕ್ರಿಯಿಸುತ್ತಿದ್ದಾರೆ.

ಧೋನಿ ಹಾಗೂ ಬ್ರಾವೋ ಇಬ್ಬರೂ ಹಲವು ವರ್ಷಗಳಿಂದ ಐಪಿಎಲ್‌ನಲ್ಲಿ ಒಂದೇ ತಂಡಕ್ಕೆ ಆಡುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಪ್ರಮುಖ ಆಲ್‌ರೌಂಡರ್ ಆಗಿರುವ ಡ್ವೇಯ್ನ್ ಬ್ರಾವೋ ಧೋನಿ ಆಟಕ್ಕೆ ಹಾಗೂ ನಾಯಕತ್ವಕ್ಕೆ ಮಾರು ಹೋಗಿದ್ದಾರೆ. ತಮ್ಮ ಹಾಡಿನ ಮೂಲಕ ಧೋನಿಗೆ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

Story first published: Tuesday, July 7, 2020, 10:06 [IST]
Other articles published on Jul 7, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+