ಈ ದಿನ ಅಂದು: ಏಕದಿನ ಕ್ರಿಕೆಟ್‌ನಲ್ಲಿ ಸಚಿನ್ 200: ಏಕದಿನ ಇತಿಹಾಸದ ಪ್ರಥಮ ದ್ವಿಶತಕಕ್ಕೆ 12 ವರ್ಷ!

ಇಂದಿಗೆ ಸರಿಯಾಗಿ ಹನ್ನೆರಡು ವರ್ಷಗಳ ಹಿಂದೆ ಏಕದಿನ ಕ್ರಿಕೆಟ್ ಹಿಂದೆಂದೂ ಕಾಣದ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾಗಿತ್ತು. ಏಕದಿನ ಇತಿಹಾಸದಲ್ಲಿ ಹಿಂದೆಂದೂ ಸಾಧ್ಯವಾಗದ ದಾಖಲೆಯೊಂದನ್ನು ಟೀಮ್ ಇಂಡಿಯಾ ಪರವಾಗಿ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಮಾಡಿದ್ದರು. ಆ ದಾಖಲೆ ಬೇರೆ ಯಾವುದೂ ಅಲ್ಲ. ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಮೊದಲ ದ್ವಿಶತಕ. ಐವತ್ತು ಓವರ್‌ಗಳ ಸೀಮಿತ ಅವಧಿಯಲ್ಲಿ ದ್ವಿಶತಕವನ್ನು ಬಾರಿಸಬಹುದು ಎಂದು ಮೊದಲ ಬಾರಿಗೆ ಸಚಿನ್ ತೆಂಡೂಲ್ಕರ್ ತೋರಿಸಿಕೊಟ್ಟಿದ್ದರು.
ಕ್ರಿಕೆಟ್ ಲೋಕದಲ್ಲಿ ದಾಖಲೆ ಮೇಲೆ ದಾಖಲೆ ಮಾಡಿರುವ ಸಚಿನ್ ತೆಂಡೂಲ್ಕರ್ ಏಕದಿನ ಇತಿಹಾಸದಲ್ಲಿ ಪ್ರಥಮ ದ್ವಿಶತಕವನ್ನು ಕೂಡ ತಮ್ಮದೇ ಹೆಸರಿನಲ್ಲಿ ಬರೆದುಕೊಂಡಿದ್ದಾರೆ. ಅಂತಾರಾಷ್ಟ್ರೀಯ ಏಕದಿನ ಮಾದರಿ ಜನ್ಮ ತಾಳಿ ನಾಲ್ಕು ದಶಕದವರೆಗೆ ಏಕದಿನ ಕ್ರಿಕೆಟ್‌ನಲ್ಲಿ ಯಾವ ಆಟಗಾರ ಕುಡ ದ್ವಿ ಶತಕವನ್ನು ಸಿಡಿಸಿರಲಿಲ್ಲ. ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಈ ಅಪೂರ್ವ ಸಾಧನೆ ಪೂರೈಸಿ ಇಂದಿಗೆ ಸರಿಯಾಗಿ ಹನ್ನೆರಡು ವರ್ಷಗಳು ಸಂದಿದೆ.

ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿತ್ತು ಗ್ವಾಲಿಯರ್ ಮೈದಾನ
ಅದು 24/02/2010. ಗ್ವಾಲಿಯರ್ ಮೈದಾನ ದಕ್ಷಿಣ ಆಫ್ರಿಕಾ ಮತ್ತು ಟೀಮ್ ಇಂಡಿಯಾ ನಡುವಿನ ಏಕದಿನ ಸರಣಿಗೆ ಸಾಕ್ಷಿಯಾಗಿತ್ತು. ಇದೇ ಪಂದ್ಯದಲ್ಲಿ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಏಕದಿನ ಇತಿಹಾಸದ ಪ್ರಪ್ರಥಮ ದ್ವಿಶತಕವನ್ನು ಸಿಡಿಸಿ ಕ್ರಿಕೆಟ್ ಅಭಿಮಾನಿಗಳನ್ನು ರೋಮಾಂಚನಗೊಳಿಸಿದ್ದರು. ಇದಕ್ಕೂ ಮುನ್ನ ಏಕದಿನ ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ಸಯೀದ್ ಅನ್ವರ್ ಹಾಗೂ ಜಿಂಬಾಬ್ವೆಯ ಕ್ರಿಸ್ ಕಾವೆಂಟ್ರಿ ಸಿಡಿಸಿದ 194 ರನ್ ಏಕದಿನ ಕ್ರಿಕೆಟ್ ಮಾದರಿಯ ಹೈಯೆಸ್ಟ್ ಸ್ಕೋರ್ ಎನಿಸಿತ್ತು. ಈ ದಾಖಲೆಯನ್ನು ಸಚಿನ್ ಮುರಿದಿದ್ದಲ್ಲದೆ ದ್ವಿಶತಕವನ್ನು ಕೂಡ ದಾಖಲಿಸಿ ಮಿಂಚಿದ್ದರು.

ದ.ಆಫ್ರಿಕಾ ವಿರುದ್ಧದ ಎರಡನೇ ಒಡಿಐ
ದಕ್ಷಿಣ ಆಫ್ರಿಕಾ ವಿರುದ್ಧದ ಭಾರತದಲ್ಲ ನಡೆದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಈ ಸಾಧನೆಯನ್ನು ಮಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮೊದಲ ದ್ವಿಶತಕವನ್ನು ಬಾರಿಸಲು ಸಚಿನ್ ತೆಂಡೂಲ್ಕರ್ 147 ಎಸೆತಗಳನ್ನು ಎದುರಿಸಿದ್ದರು. ಈ ದ್ವಿಶತಕ ಭರ್ಜರಿ 25 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಒಳಗೊಂಡಿತ್ತು.
ಟೆನಿಸ್ ಪಂದ್ಯ ಸೋತ ಕೋಪದಲ್ಲಿ ಅಂಪೈರ್ ಮೇಲೆ ಹಲ್ಲೆ ಮಾಡಿದ ಅಲೆಕ್ಸಾಂಡರ್

ಹನ್ನೆರಡು ವರ್ಷದಲ್ಲಿ ಹತ್ತು ದ್ವಿಶತಕ
ಇದಾಗಿ ಹನ್ನೆರಡು ವರ್ಷಗಳು ಕಳೆದಿದೆ. ಈ ಅವಧಿಯಲ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಹತ್ತು ದ್ವಿಶತಕಗಳನ್ನು ಕಂಡಿದೆ. ಇದರಲ್ಲಿ ನಾಲ್ಕು ದ್ವಿಶತಕಗಳನ್ನು ಭಾರತೀಯರೇ ಬಾರಿಸಿದ್ದಾರೆ ಎಂಬುದು ಹೆಮ್ಮೆಯ ಸಂಗತಿ. ಸಚಿನ್ ತೆಂಡೂಲ್ಕರ್ ಜೊತೆಗೆ ವೀರೇಂದ್ರ ಸೆಹ್ವಾಗ್ ಮತ್ತು ರೋಹಿತ್ ಶರ್ಮಾ ಕೂಡ ಈ ಸಾಧನೆಯನ್ನು ಮಾಡಿದ ಇತರ ಭಾರತೀಯ ಆಟಗಾರರು.
ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಮರಳಲು ಪ್ರಾರ್ಥಿಸುತ್ತಿದ್ದೇನೆ: ಜೇಮ್ಸ್ ಆಂಡರ್ಸನ್

ದ್ವಿಶತಕದಲ್ಲಿ ರೋಹಿತ್ ದಾಖಲೆ
ಏಕದಿನ ಇತಿಹಾಸದಲ್ಲಿ ಮೊದಲ ದ್ವಿಶತಕವನ್ನು ಕಾಣಲು ನಾಲ್ಕು ದಶಕ ಬೇಕಾಗಿತ್ತು. ಆದರೆ ಟೀಮ್ ಇಂಡಿಯಾದ ಆಟಗಾರನೊಬ್ಬ ಒಂದಲ್ಲಾ ಎರಡಲ್ಲ ಬರೊಬ್ಬರಿ ಮೂರು ದ್ವಿಶತಕವನ್ನು ಬಾರಿಸಿ ಇತಿಹಾಸ ನಿರ್ಮಿಸಿದ್ದಾರೆ. ಅದು ಬೇರೆ ಯಾರೂ ಅಲ್ಲ. ಟೀಮ್ ಇಂಡಿಯಾದ ಸ್ಪೋಟಕ ಆಟಗಾರ ರೋಹಿತ್ ಶರ್ಮಾ. ಶ್ರೀಲಂಕಾ ವಿರುದ್ಧ ಶರ್ಮಾ ಬಾರಿಸಿದ 264 ರನ್ ಏಕದಿನ ಇತಿಹಾಸದಲ್ಲಿ ಬಾರಿಸಿದ ಅತಿದೊಡ್ಡ ವೈಯಕ್ತಿಕ ಮೊತ್ತವಾಗಿದೆ. ರೊಹಿತ್ ಶರ್ಮಾ ಇತ್ತೀಚೆಗಷ್ಟೇ ಭಾರತೀಯ ಕ್ರಿಕೆಟ್ ತಂಡದ ಎಲ್ಲಾ ಮಾದರಿಗೂ ನಾಯಕನಾಗಿ ಆಯ್ಕೆಯಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications