Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಚಿನ್ ತೆಂಡೂಲ್ಕರ್ ಶತಕಗಳ ಶತಕ ಬಾರಿಸಿದ್ದು ಇದೇ ದಿನ

On this day in: Sachin Tendulkar scored his 100th international century

ನವದೆಹಲಿ: ಬ್ಯಾಟಿಂಗ್ ದಂತಕತೆ ಸಚಿನ್ ತೆಂಡೂಲ್ಕರ್ 2012ರಲ್ಲಿ ವಿಶ್ವದಾಖಲೆಯೊಂದನ್ನು ನಿರ್ಮಿಸಿದ್ದರು. ಆವತ್ತು ಸಚಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕಗಳ ಶತಕ ಬಾರಿಸಿದ್ದರು. ಆ ವಿಶ್ವದಾಖಲೆ ಇಂದಿಗೂ ಹಾಗೇ ಇದೆ. ಬಹುಶಃ ಸಚಿನ್ ಅವರ ಈ ಶತಕಗಳ ಶತಕ ದಾಖಲೆಯನ್ನು ಮುರಿಯೋದು ಅಷ್ಟು ಸುಲಭವೂ ಇಲ್ಲ.

2012 ಮಾರ್ಚ್ 16 ಏಷ್ಯಾಕಪ್ (ಏಕದಿನ) 4ನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ 147 ಎಸೆತಗಳಿಗೆ 114 ರನ್ ರನ್ ಬಾರಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100ನೇ ಶತಕ ಬಾರಿಸಿದ ವಿಶ್ವದ ಏಕೈಕ ಆಟಗಾರನಾಗಿ ದಾಖಲೆ ನಿರ್ಮಿಸಿದ್ದರು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿದ್ದ ಭಾರತ, ಗೌತಮ್ ಗಂಭೀರ್ 11, ಸಚಿನ್ 114, ವಿರಾಟ್ ಕೊಹ್ಲಿ 66, ಸುರೇಶ್ ರೈನಾ 51, ನಾಯಕ ಎಂಎಸ್ ಧೋನಿ 21 ರನ್‌ನೊಂದಿಗೆ 50 ಓವರ್‌ಗೆ 5 ವಿಕೆಟ್ ಕಳೆದು 289 ರನ್ ಬಾರಿಸಿತ್ತು. ಆದರೆ ಬಾಂಗ್ಲಾದೇಶ 49.2 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 293 ರನ್ ಬಾರಿಸಿ 5 ವಿಕೆಟ್ ಗೆಲುವಾಚರಿಸಿತ್ತು.

ಆವತ್ತು ಬಾಂಗ್ಲಾ ವಿರುದ್ಧ ಸಚಿನ್ ಬಾರಿಸಿದ್ದು ಏಕದಿನದಲ್ಲಿ ಕೊನೇಯ ಮತ್ತು 49ನೇ ಶತಕವದು. ಅಗ 38ರ ಹರೆಯದವರಾಗಿದ್ದ ಸಚಿನ್ ಅವರು 99ರಿಂದ 100 ಶತಕ ಬಾರಿಸಲು ಹತ್ತಿರ ಒಂದು ವರ್ಷ ತೆಗೆದುಕೊಂಡಿದ್ದರು. ಸಚಿನ್ ಅವರ 99ನೇ ಶತಕ ದಾಖಲಾಗಿದ್ದು 2011ರ ವಿಶ್ವಕಪ್‌ನಲ್ಲಿ. ಟೀಮ್ ಇಂಡಿಯಾದ ಈಗಿನ ನಾಯಕ ವಿರಾಟ್ ಕೊಹ್ಲಿ ಅವರು ಸಚಿನ್ ದಾಖಲೆಯನ್ನು ಮೀರಿಸುತ್ತಾರೆ ಎನ್ನಲಾಗುತ್ತಿದೆಯಾದರೂ ಆ ಸಾಧನೆ ಸುಲಭವಿಲ್ಲ.

Story first published: Tuesday, March 16, 2021, 16:43 [IST]
Other articles published on Mar 16, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+