ಭಾರತೀಯರಿಗೆ ಜಾವೆದ್ ಆಘಾತ ನೀಡಿದ್ದು 34 ವರ್ಷಗಳ ಹಿಂದೆ ಇದೇ ದಿನ!

ಬೆಂಗಳೂರು, ಏಪ್ರಿಲ್ 18: ಸುಮಾರು 34 ವರ್ಷಗಳಿಗೆ ಹಿಂದೆ ಅಂದರೆ 1986ರಲ್ಲಿ ಪಾಕಿಸ್ತಾನದ ಮಾಜಿ ಮ್ಯಾಟ್ಸ್‌ಮನ್ ಜಾವೆದ್ ಮಿಯಾಂದಾದ್ ಭಾರತೀಯರಿಗೆ ಆಘಾತ ನೀಡಿದ್ದರು. ಕೊನೆಯ ಎಸೆತಕ್ಕೆ ಜಾವೆದ್ ಬಾರಿಸಿದ ಸಿಕ್ಸ್‌ನಿಂದಾಗಿ ಆಸ್ಟ್ರೇಲ್ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನಕ್ಕೆ ಶರಣಾಗಿ ಶಾಕ್ ಅನುಭವಿಸಿತ್ತು. ಜಾವೆದ್ ಮಿಯಾಂದಾದ್ ಪಾಕಿಸ್ತಾನದ ಪಾಲಿಗೆ ಹೀರೋ ಆಗಿ, ಭಾರತೀಯರ ಪಾಲಿಗೆ ವಿಲನ್ ಆಗಿ ಕಾಣಿಸಿದ್ದು ಏಪ್ರಿಲ್ 18ರ ಇದೇ ದಿನ.
1986ರಲ್ಲಿನ ಈ ಆಸ್ಟ್ರೇಲ್ ಏಷ್ಯಾಕಪ್ ಪಂದ್ಯ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಶಾರ್ಜಾ ಸ್ಟೇಡಿಯಂನಲ್ಲಿ ನಡೆದಿತ್ತು. ಆಸ್ಟ್ರೇಲಿಯಾ, ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಶ್ರೀಲಂಕಾ ಹೀಗೆ ಒಟ್ಟು 5 ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡಿದ್ದವು.
ಟೂರ್ನಿಯಲ್ಲಿ ಆರಂಭಿಕ ಎರಡೂ ಪಂದ್ಯಗಳನ್ನೂ ಗೆದ್ದು ಫೈನಲ್‌ಗೆ ಪ್ರವೇಶಿದ್ದ ಭಾರತ ಟ್ರೋಫಿಯಾಸೆ ಮೂಡಿಸಿತ್ತು. ಆದರೆ ಫಲಿತಾಂಶ ನಿಜಕ್ಕೂ ಭಾರತೀಯರಿಗೆ ಆಘಾತ ನೀಡಿತ್ತು.

ಪಾಕ್ ಗೆಲುವಿಗೆ 246 ರನ್ ಗುರಿ
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ, ಕೃಷ್ಣಮಂಚರಿ ಶ್ರೀಕಾಂತ್ 75, ಸುನಿಲ್ ಗವಾಸ್ಕರ್ 92, ದಿಲೀಪ್ ವೆಂಗ್ ಸರ್ಕಾರ್ 50 ಗಣನೀಯ ರನ್‌ನೊಂದಿಗೆ 50 ಓವರ್ ಮುಕ್ತಾಯಕ್ಕೆ 7 ವಿಕೆಟ್ ಕಳೆದು 245 ರನ್ ಬಾರಿಸಿ, ಪಾಕ್ ಗೆಲುವಿಗೆ 246 ರನ್ ಗುರಿ ನೀಡಿತ್ತು.

ಕ್ರೀಸಿಗಂಟಿನಿಂತ ಜಾವೆದ್
ಗುರಿ ಬೆನ್ನಟ್ಟಿದ ಪಾಕಿಸ್ತಾನದಿಂದ ಆರಂಭಿಕ ವಿಕೆಟ್‌ಗಳು ಬೇಗನೆ ಪತನಗೊಂಡವು. ಆದರೆ 4ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಜಾವೆದ್ ಮಿಯಾಂದಾದ್ ಕ್ರೀಸಿಗಂಟಿ ನಿಂತರು. ಪಂದ್ಯದ ಕೊನೆಯ ಬಾಲ್‌ವರೆಗೂ ನಿಂತ ಜಾವೆದ್ ಆವತ್ತು ಅಜೇಯ 116 ರನ್ ಸಿಡಿಸಿದ್ದರು.

ಕೊನೇ ಎಸೆತಕ್ಕೆ 4 ರನ್ ಬೇಕಿತ್ತು
ದ್ವಿತೀಯ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನ ತಂಡದಲ್ಲಿ ಮಿಯಾಂದಾದ್ ಬಿಟ್ಟರೆ ಉಳಿದೆಲ್ಲ ಬ್ಯಾಟ್ಸ್‌ಮನ್‌ಗಳು ಬೇಗನೆ ವಿಕೆಟ್ ಒಪ್ಪಿಸುತ್ತಾ ಬಂದಿದ್ದರಿಂದ ಪಂದ್ಯ ರೋಚಕ ಹಂತಕ್ಕೆ ತಲುಪಿತ್ತು. ಪಂದ್ಯದ ಕೊನೆಯ ಎಸೆತದ ವೇಳೆಗೆ ಪಾಕ್ ಖಾತೆಯಲ್ಲಿ ಒಂದೇ ವಿಕೆಟ್ ಬಾಕಿಯಿದ್ದು, ಗೆಲ್ಲಲು 4 ರನ್‌ಗಳ ಅವಶ್ಯಕತೆಯಿತ್ತು.

ಪಾಕ್‌ಗೆ 1 ವಿಕೆಟ್ ಗೆಲುವು
ಎಲ್ಲರೂ ಕಾತರದಿಂದ ನೋಡುತ್ತಿದ್ದಂತೆ ಪಂದ್ಯದ ಕೊನೇ ಎಸೆತಕ್ಕೆ ಜಾವೆದ್ ಸಿಕ್ಸ್ ಚಚ್ಚೇಬಿಟ್ಟರು. ಅಲ್ಲಿಗೆ 248 ರನ್ ಕಲೆ ಹಾಕಿದ್ದ ಪಾಕಿಸ್ತಾನ 1 ವಿಕೆಟ್ ಗೆಲುವನ್ನಾಚರಿಸಿತ್ತು. ಜಾವೆದ್ ಮಿಯಾಂದಾದ್ ಪಂದ್ಯಶ್ರೇಷ್ಠರೆನಿಸಿದರೆ, ಭಾರತದ ಸುನಿಲ್ ಗವಾಸ್ಕರ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications