ಆವತ್ತು ಇದೇ ದಿನ ಸಚಿನ್ ತೆಂಡೂಲ್ಕರ್ ಏಕದಿನ ವಿಶ್ವದಾಖಲೆ ನಿರ್ಮಿಸಿದ್ದರು

ನವದೆಹಲಿ: ಕ್ರಿಕೆಟ್‌ನಲ್ಲಿ ಅಪರೂಪದ ವಿಶ್ವದಾಖಲೆಗಳನ್ನು ನಿರ್ಮಿಸಿದ್ದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 13 ವರ್ಷಗಳ ಹಿಂದೆ ಇದೇ ದಿನ, ಅಂದರೆ ಜೂನ್ 29ರಂದು ಭಾರತದ ಪರ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದರು. ಏಕದಿನ ಕ್ರಿಕೆಟ್ ದಾಖಲೆಗಾಗಿ ಸಚಿನ್ ಆವತ್ತು ವಿಶ್ವದ ಗಮನ ಸೆಳೆದಿದ್ದರು. 2007ರ ಜೂನ್ 29ರಂದು ಸಚಿನ್ ತೆಂಡೂಲ್ಕರ್, ಏಕದಿನ ಕ್ರಿಕೆಟ್‌ನಲ್ಲಿ 15,000 ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆ ನಿರ್ಮಿಸಿದ್ದರು.
ವಿಶೇಷವೆಂದರೆ ಸಚಿನ್ ಓಡಿಐ ಆಟ ನಿಲ್ಲಿಸಿ 8 ವರ್ಷಗಳು ಕಳೆದಿವೆ. ಆದರೆ ಏಕದಿನದಲ್ಲಿ ನಿರ್ಮಾಣವಾಗಿರುವ ಈ 15,000 ರನ್ ದಾಖಲೆ ಈಗಲೂ ತೆಂಡೂಲ್ಕರ್ ಒಬ್ಬರದ್ದೇ ಹೆಸರಿನಲ್ಲಿದೆ.
13 ವರ್ಷಗಳ ಹಿಂದಿನ ಆ ಪಂದ್ಯದ ಏನಾಯಿತು? ಸಚಿನ್ ಆವತ್ತು ಎಷ್ಟು ರನ್ ಬಾರಿಸಿದ್ದರು? ಸಂಪೂರ್ಣ ಚಿತ್ರಣ ಇಲ್ಲಿದೆ.

ಭಾರತಕ್ಕೆ ಗೆಲುವು
ಸಚಿನ್ ತೆಂಡೂಲ್ಕರ್ ಈ ಏಕದಿನ ದಾಖಲೆ ನಿರ್ಮಿಸಿದ್ದು ಫ್ಯೂಚರ್ ಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ. ಐರ್ಲೆಂಡ್‌ನ ಬೆಲ್ಫಾಸ್ಟ್‌ನಲ್ಲಿ ಈ ಪಂದ್ಯ ನಡೆದಿತ್ತು. ಆವತ್ತಿನ ಪಂದ್ಯದಲ್ಲಿ ಭಾರತ 6 ವಿಕೆಟ್ ಗೆಲುವನ್ನಾಚರಿಸಿತ್ತಲ್ಲದೆ, ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1ರಿಂದ ಗೆದ್ದಿತ್ತು.

ಸಚಿನ್‌ಗೆ ಗಿಫ್ಟಾಗಿ ಲಭಿಸಿದ್ದ ರನ್
ಕುತೂಹಲಕಾರಿ ಸಂಗತಿಯೆಂದರೆ, ಆ ದಿನ ಸಚಿನ ಏಕದಿನದಲ್ಲಿ 15,000 ರನ್ ಮೈಲಿಗಲ್ಲು ಸ್ಥಾಪಿಸಿದ್ದು ಓವರ್ ಥ್ರೋನಿಂದಾಗಿ. ದಕ್ಷಿಣ ಆಫ್ರಿಕಾ ನೀಡಿದ್ದ 149 ರನ್ ಗುರಿಯನ್ನು ಭಾರತ ಬೆನ್ನಟ್ಟುತ್ತಿದ್ದಾಗ ವೇಗಿ ಆ್ಯಂಡ್ರೆ ನೇಲ್ ಅವರ 18ನೇ ಓವರ್‌ನಲ್ಲಿ ಓವರ್ ಥ್ರೋನಿಂದಾಗಿ ಸಚಿನ್ ಖಾತೆಗೆ ರನ್ ಸೇರಿತ್ತು. ವಿಶ್ವದಾಖಲೆ ನಿರ್ಮಾಣವಾಗಿತ್ತು.

ಯುವರಾಜ್ ಅಜೇಯ ಆಟ
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿದ್ದ ದಕ್ಷಿಣ ಆಫ್ರಿಕಾ, ಎಬಿ ಡಿ ವಿಲಿಯರ್ಸ್ 15, ಹರ್ಷೆಲ್ ಗಿಬ್ಸ್ 56, ಜಸ್ಟಿನ್ ಕೆಂಪ್ 61 ರನ್‌ನೊಂದಿಗೆ 31 ಓವರ್‌ಗೆ 7 ವಿಕೆಟ್ ಕಳೆದ 148 ರನ್ ಮಾಡಿತ್ತು. ಭಾರತ ತಂಡ, ಸೌರವ್ ಗಂಗೂಲಿ 18, ಸಚಿನ್ 8, ಗೌತಮ್ ಗಂಭೀರ್ 5, ರಾಹುಲ್ ದ್ರಾವಿಡ್ 36, ಯುವರಾಜ್ ಸಿಂಗ್ ಅಜೇಯ 61, ಎಂಎಸ್ ಧೋನಿ ಅಜೇಯ 14 ರನ್‌ನೊಂದಿಗೆ 30.2 ಓವರ್‌ಗೆ 4 ವಿಕೆಟ್ ನಷ್ಟದಲ್ಲಿ 152 ರನ್ ಮಾಡಿತ್ತು.

18 ಸಾವಿರ ರನ್‌ಗಳ ಸರದಾರ
ಸಚಿನ್ ತೆಂಡೂಲ್ಕರ್ ಅವರು ಒಟ್ಟು 452 ಒಡಿಐ ಇನ್ನಿಂಗ್ಸ್‌ಗಳಲ್ಲಿ 18,426 ರನ್ ದಾಖಲೆ ಹೊಂದಿದ್ದಾರೆ. ಇದರಲ್ಲಿ 49 ಶತಕಗಳು, 96 ಅರ್ಧ ಶತಕಗಳು ಸೇರಿವೆ. ಇನ್ನು 200 ಟೆಸ್ಟ್ ಪಂದ್ಯಗಳಲ್ಲಿ ಸಚಿನ್ 15,921 ರನ್ ಗಳಿಸಿದ್ದಾರೆ. 51 ಶತಕ, 68 ಅರ್ಧ ಶತಕಗಳು ಇದರಲ್ಲಿ ಸೇರಿಕೊಂಡಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications