For Quick Alerts
ALLOW NOTIFICATIONS  
For Daily Alerts
 

ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿರುವ ಈ ವಿಶ್ವ ದಾಖಲೆಗೆ ಭರ್ತಿ 14 ವರ್ಷ

On this day: Sachin Tendulkar becomes the first batsman in ODI history to reach 15,000 runs
14 ವರ್ಷ ಆದ್ರು ಸಚಿನ್ ದಾಖಲೆಯನ್ನು ಯಾರು ಮುರಿದಿಲ್ಲ | Oneindia Kannada

ನವದೆಹಲಿ, ಜೂನ್ 29: ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರ ಸಚಿನ್ ತೆಂಡೂಲ್ಕರ್ ನಿರ್ಮಿಸಿದ ದಾಖಲೆಗಳಿಗೆ ಲೆಕ್ಕವಿಲ್ಲ. ವಿಶ್ವ ಕ್ರಿಕೆಟ್‌ನಲ್ಲಿ ಸಚಿನ್ ನಿರ್ಮಿಸಿದ ಅದೆಷ್ಟೋ ದಾಖಲೆಗಳನ್ನು ಮುರಿಯಲು ಸಾಧ್ಯವಾ ಎಂಬ ಪ್ರಶ್ನೆಗಳು ಕ್ರಿಕೆಟ್ ಪ್ರೇಮಿಗಳಲ್ಲಿದೆ. ಅಭಿಮಾನಿಗಳ ಪಾಲಿನ ದೇವರು ಎನಿಸಿರುವ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿರುವ ಒಂದು ವಿಶ್ವ ದಾಖಲೆ ನಿರ್ಮಾಣವಾಗಿ ಇಂದಿಗೆ ಭರ್ತಿ 14 ವರ್ಷಗಳಾಗಿದೆ.

ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ 15,000ಕ್ಕೂ ಅಧಿಕ ರನ್‌ಗಳ ಸಾಧನೆಯನ್ನು 2007ರಲ್ಲಿ ಇದೇ ದಿನ ತಲುಪಿ ದಾಖಲೆ ನಿರ್ಮಿಸಿದ್ದರು. ಈ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ಮೊಟ್ಟಮೊದಲ ಬಾರಿಗೆ ಆಟಗಾರನೋರ್ವ ಈ ಸಾಧನೆಯನ್ನು ತಲುಪಿದ್ದರು. ವಿಶೇಷವೆಂದರೆ ಸಚಿನ್ ಓಡಿಐ ಆಟ ನಿಲ್ಲಿಸಿ 9ವರ್ಷಗಳು ಕಳೆದಿವೆ. ಆದರೆ ಏಕದಿನದಲ್ಲಿ ನಿರ್ಮಾಣವಾಗಿರುವ ಈ 15,000 ರನ್ ದಾಖಲೆ ಈಗಲೂ ತೆಂಡೂಲ್ಕರ್ ಒಬ್ಬರದ್ದೇ ಹೆಸರಿನಲ್ಲಿದೆ.

2007ರ ಜೂನ್ 29ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಫ್ಯೂಚರ್‌ ಕಪ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಈ ದಾಖಲೆಯನ್ನು ಸಚಿನ್ ನಿರ್ಮಿಸಿದ್ದರು. ಐರ್ಲೆಂಡ್‌ನ ಬೆಲ್ಫಾಸ್ಟ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ 6 ವಿಕೆಟ್ ಗೆಲುವನ್ನಾಚರಿಸಿತ್ತಲ್ಲದೆ, ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1ರಿಂದ ಗೆದ್ದಿತ್ತು.

ಕುತೂಹಲಕಾರಿ ಸಂಗತಿಯೆಂದರೆ, ಆ ದಿನ ಸಚಿನ ಏಕದಿನದಲ್ಲಿ 15,000 ರನ್ ಮೈಲಿಗಲ್ಲು ಸ್ಥಾಪಿಸಿದ್ದು ಓವರ್‌ ಥ್ರೋನಿಂದಾಗಿ. ದಕ್ಷಿಣ ಆಫ್ರಿಕಾ ನೀಡಿದ್ದ 227 ರನ್ ಗುರಿಯನ್ನು ಭಾರತ ಬೆನ್ನಟ್ಟುತ್ತಿದ್ದಾಗ ವೇಗಿ ಆ್ಯಂಡ್ರೆ ನೇಲ್ ಅವರ 18ನೇ ಓವರ್‌ನಲ್ಲಿ ಓವರ್‌ ಥ್ರೋನಿಂದಾಗಿ ಸಚಿನ್ ಖಾತೆಗೆ ರನ್ ಸೇರಿತ್ತು. ಈ ಮೂಲಕ ವಿಶ್ವದಾಖಲೆ ನಿರ್ಮಾಣವಾಗಿತ್ತು.

18 ಸಾವಿರ ರನ್‌ಗಳ ಸರದಾರ ಸಚಿನ್ ತೆಂಡೂಲ್ಕರ್ ಅವರು ಒಟ್ಟು 452 ಒಡಿಐ ಇನ್ನಿಂಗ್ಸ್‌ಗಳಲ್ಲಿ 18,426 ರನ್ ದಾಖಲೆ ಹೊಂದಿದ್ದಾರೆ. ಇದರಲ್ಲಿ 49 ಶತಕಗಳು, 96 ಅರ್ಧ ಶತಕಗಳು ಸೇರಿವೆ. ಇನ್ನು 200 ಟೆಸ್ಟ್ ಪಂದ್ಯಗಳಲ್ಲಿ ಸಚಿನ್ 15,921 ರನ್ ಗಳಿಸಿದ್ದಾರೆ. 51 ಶತಕ, 68 ಅರ್ಧ ಶತಕಗಳು ಇದರಲ್ಲಿ ಸೇರಿಕೊಂಡಿವೆ.

Story first published: Tuesday, June 29, 2021, 15:41 [IST]
Other articles published on Jun 29, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+