25 ವರ್ಷಗಳ ಹಿಂದೆ ಸಚಿನ್ ತೆಂಡೂಲ್ಕರ್ ವಿಶಿಷ್ಠ ದಾಖಲೆ ಬರೆದಿದ್ದು ಇದೇದಿನ

ನವದೆಹಲಿ, ಏಪ್ರಿಲ್ 9: ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯುತ್ತಮ ಬ್ಯಾಟ್ಸ್‌ಮನ್ ಅನ್ನಿಸಿಕೊಂಡವರು. ಟೆಸ್ಟ್ ಕ್ರಿಕೆಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ತೆಂಡೂಲ್ಕರ್ ಹಲವಾರು ದಾಖಲೆಗಳನ್ನು ಈಗಲೂ ಉಳಿಸಿಕೊಂಡಿದ್ದಾರೆ. 25 ವರ್ಷಗಳ ಹಿಂದೆ ಏಪ್ರಿಲ್ 9ರ ಇದೇ ದಿನ ಸಚಿನ್, ಭಾರತ ಪರ ವಿಶ್ವದಾಖಲೆ ಬರೆದಿದ್ದರು.
1995ರಲ್ಲಿ ಏಪ್ರಿಲ್ 9ರಂದು ಅಂದರೆ 25 ವರ್ಷಗಳ ಹಿಂದೆ ಇದೇ ದಿನ ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್‌ನಲ್ಲಿ 3,000 ರನ್ ಬಾರಿಸಿದ ವಿಶ್ವದ ಅತೀ ಕಿರಿಯ ಬ್ಯಾಟ್ಸ್‌ಮನ್ ಎನ್ನುವ ದಾಖಲೆ ನಿರ್ಮಿಸಿದ್ದರು. ಯುನೈಟೆಡ್ ಅರಬ್‌ನ ಶಾರ್ಜಾದಲ್ಲಿ ನಡೆದಿದ್ದ ಏಷ್ಯಾಕಪ್ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧ ಮಾಸ್ಟರ್ ಬ್ಲಾಸ್ಟರ್ ಈ ವಿಶಿಷ್ಠ ಸಾಧನೆ ಮೆರೆದಿದ್ದರು.
ಅಂದು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಶ್ರೀಲಂಕಾ, 50 ಓವರ್‌ಗೆ 9 ವಿಕೆಟ್ ಕಳೆದು 202 ರನ್ ಮಾಡಿತ್ತು. ಕನ್ನಡಿಗರಾದ ವೆಂಕಟೇಶ್ ಪ್ರಸಾದ್ 3, ಜಾವಗಲ್ ಶ್ರೀನಾಥ್ 2, ಅನಿಲ್ ಕುಂಬ್ಳೆ 1 ಮತ್ತು ಮನೋಜ್ ಪ್ರಭಾಕರ್ 1 ವಿಕೆಟ್ ಮುರಿದು ಪಾರಮ್ಯ ಮೆರೆದಿದ್ದರು.
ಗುರಿ ಬೆನ್ನತ್ತಿದ ಭಾರತ 33.1 ಓವರ್‌ಗೆ 2 ವಿಕೆಟ್ ನಷ್ಟದಲ್ಲಿ 206 ರನ್ ಪೇರಿಸಿ 8 ವಿಕೆಟ್ ಗೆಲುವನ್ನಾಚರಿಸಿತ್ತು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಮನೋಜ್ ಪ್ರಭಾಕರ್ 60, ಸಚಿನ್ ತೆಂಡೂಲ್ಕರ್ 112 (107 ಎಸೆತ), ಜಾವಗಲ್ ಶ್ರೀನಾಥ್ 14, ನವಜೋತ್ ಸಿಧು 3 ರನ್ ಸೇರಿಸಿ ಭಾರತಕ್ಕೆ ಗೆಲುವು ತಂದಿದ್ದರು. ಆವತ್ತು ಸಚಿನ್ ಬ್ಯಾಟಿಂದ 15 ಬೌಂಡರಿ, 1 ಸಿಕ್ಸ್ ಸಿಡಿದಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications