ಆಂಡರ್ಸನ್ ದಾಖಲೆಯನ್ನು ಯಾರೂ ಮುರಿಯಲಾರರು: ಮೆಕ್‌ಗ್ರಾತ್

ಲಂಡನ್, ಆಗಸ್ಟ್ 27: ಟೆಸ್ಟ್‌ನಲ್ಲಿ ಗರಿಷ್ಠ ವಿಕೆಟ್ ತೆಗೆದ ವೇಗದ ಬೌಲರ್ ಎಂಬ ತಮ್ಮ ದಾಖಲೆಯನ್ನು ಜೇಮ್ಸ್ ಆಂಡರ್ಸನ್ ಮುರಿದ ಬಳಿಕ ಅವರು ನಿರ್ಮಿಸುವ ದಾಖಲೆಯನ್ನು ಭವಿಷ್ಯದಲ್ಲಿ ಯಾವ ಬೌಲರ್ ಕೂಡ ಮುರಿಯಲಾರರು ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಗ್ಲೆನ್ ಮೆಕ್‌ಗ್ರಾತ್ ಹೇಳಿದ್ದಾರೆ.
ಗ್ಲೆನ್ ಮೆಕ್‌ಗ್ರಾತ್ ಟೆಸ್ಟ್‌ನಲ್ಲಿ 563 ವಿಕೆಟ್ ಕಬಳಿಸಿದ್ದಾರೆ. ತಮ್ಮ ಖಾತೆಯಲ್ಲಿ 557 ವಿಕೆಟ್ ಹೊಂದಿರುವ ಆಂಡರ್ಸನ್, ಭಾರತದ ವಿರುದ್ಧದ ಸರಣಿಯಲ್ಲಿಯೇ ಅದನ್ನು ಮೀರುವ ನಿರೀಕ್ಷೆ ಮೂಡಿಸಿದ್ದಾರೆ.
ದಾಖಲೆಗಳು ಯಾವಾಗಲೂ ಖುಷಿ ನೀಡುತ್ತವೆ. ಟೆಸ್ಟ್ ಇತಿಹಾಸದಲ್ಲಿ ಬೇರೆ ಯಾವ ವೇಗದ ಬೌಲರ್ ಕೂಡ ಪಡೆಯದಷ್ಟು ಹೆಚ್ಚಿನ ವಿಕೆಟ್ ಪಡೆದಿದ್ದೇನೆ ಎಂಬ ಹೆಮ್ಮೆ ಇದೆ. ಜೇಮ್ಸ್ ಆಂಡರ್ಸನ್ ನನ್ನ ದಾಖಲೆಯನ್ನು ಹಿಂದಿಕ್ಕಿದ ಬಳಿಕವೂ ಅವರ ಬಗ್ಗೆ ಅಷ್ಟೇ ಹೆಮ್ಮೆ ಪಡುತ್ತೇನೆ. ಏಕೆಂದರೆ ನಾವು ಯಾವುದೇ ದೇಶದಿಂದ ಬಂದಿರಲಿ, ವೇಗದ ಬೌಲರ್‌ಗಳ ಒಕ್ಕೂಟ ಯಾವಾಗಲೂ ಜತೆಗೇ ಇರುತ್ತದೆ ಎಂದು ಮೆಕ್‌ಗ್ರಾತ್ ಹೇಳಿದ್ದಾರೆ.
ವೇಗದ ಬೌಲರ್ ಈ ಒಕ್ಕೂಟದೊಳಗೆ ಸೇರಿಕೊಳ್ಳುವ ಸಮಯವಷ್ಟೆ. ಚೆನ್ನಾಗಿ ಆಡಿದ್ದೀರಿ ಎಂದು ನಾವು ಹೇಳಿದಾಗಿನಿಂದಲೂ ಅವರು ನಮ್ಮ ಸಂಪರ್ಕದಲ್ಲಿ ಇರುತ್ತಾರೆ. ಜಿಮ್ಮಿ ಕುರಿತು ನನಗೆ ಅಪಾರ ಗೌರವವಿದೆ. ಅವರಿಗೆ ಶುಭವಾಗಲಿ. ನನ್ನ ದಾಖಲೆಯನ್ನು ಹಿಂದಿಕ್ಕಿದ ಬಳಿಕ ಅವರ ದಾಖಲೆಯನ್ನು ಯಾರೂ ಮುರಿಯಲಾರರು ಎನ್ನುವುದು ನನ್ನ ನಂಬಿಕೆ ಎಂದಿದ್ದಾರೆ ಅವರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications