IPl Auction: 14 ಕೋಟಿಗೆ ಒಬ್ಬ ಆಲ್‌ರೌಂಡರ್: 5.8 ಕೋಟಿಗೆ ಇಬ್ಬರು ಆಲ್‌ರೌಂಡರ್ಸ್ ಖರೀದಿಸಿದ ಸಿಎಸ್‌ಕೆ
ಚೆನ್ನೈ ಸೂಪರ್ ಕಿಂಗ್ಸ್ ಮೊದಲಿನಿಂದಲೂ ಆಕ್ಷನ್‌ನಲ್ಲಿ ಅಳೆದು ತೂಗಿ ಆಟಗಾರರಿಗೆ ಮಣೆ ಹಾಕುತ್ತಾ ಬಂದಿದೆ. ಮಂಗಳವಾರ ನಡೆದ ಐಪಿಎಲ್ ಮಿನಿ ಹರಾಜಿನಲ್ಲೂ ಚೆನ್ನೈ ತನ್ನ ಹಳೆಯ ಸಂಪ್ರದಾಯವನ್ನೇ ಮುಂದುವರಿಸಿದೆ. ಚೆನ್ನೈ ತಾನು ಅಂದುಕೊಂಡಂತೆ ಇಬ್ಬರು ಸ್ಟಾರ್ ಆಟಗಾರರನ್ನು ಕಡಿಮೆ ಬೆಲೆಯಲ್ಲಿ ತನ್ನ ತಂಡಕ್ಕೆ ಸೇರಿಸಿಕೊಂಡಿದೆ.
ಚೆನ್ನೈ ಸೂಪರ್ ಕಿಂಗ್ಸ್ ಫ್ಯೂಚರ್ ಟೀಮ್ ಕಟ್ಟುವ ನಿಟ್ಟಿನಲ್ಲಿ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ ಎಂದು, ಮಂಗಳವಾರ ನಡೆದ ಹರಾಜು ಸಾಬೀತು ಪಡೆಸಿತು. ನ್ಯೂಜಿಲೆಂಡ್ ತಂಡದ ಆಲ್‌ರೌಂಡರ್ ಡೇರಿಲ್ ಮಿಚೆಲ್ 14 ಕೋಟಿ ನೀಡಿ ತನ್ನ ತಂಡಕ್ಕೆ ಬರ ಮಾಡಿಕೊಂಡಿತು. ಚೆನ್ನೈ ತಂಡದ ಈ ನಡೆಯನ್ನು ಕಂಡು ಅಭಿಮಾನಿಗಳು ಫುಲ್ ಖುಷ್ ಆಗಿದ್ದರು.

ಹರಾಜಿನಲ್ಲಿ ಎಲ್ಲರ ಚಿತ್ತವನ್ನು ಕದ್ದಿದ್ದ ನ್ಯೂಜಿಲೆಂಡ್ ತಂಡದ ಸ್ಟಾರ್ ಯುವ ಆಟಗಾರ ರಚಿನ್ ರವೀಂದ್ರ ಹೆಸರು ಹರಾಜಿನ ಅಂಗಳಕ್ಕೆ ಬರುತ್ತಿದ್ದಂತೆ, ಅಭಿಮಾನಿಗಳಿಗೆ ಕುತೂಹಲ ಮನೆ ಮಾಡಿತ್ತು. ಈ ಪ್ಲೇಯರ್ ಯಾವ ಪ್ರೈಸ್ ತನ್ನ ಜೇಬಿಗೆ ಇರಿಸಿಕೊಳ್ಳಲಿದ್ದಾನೆ ಎಂಬ ಲೆಕ್ಕಾಚಾರ ಆರಂಭವಾದವು. ವಿಶ್ವಕಪ್‌ನಲ್ಲಿ ತಮ್ಮಧಮಾಕೆದಾರ್ ಪ್ರದರ್ಶನದಿಂದಲೇ ವಿಶ್ವದ ಚಿತ್ತ ಕದ್ದಿದ ರಚಿನ್ ಐಪಿಎಲ್ ಹರಾಜಿನಲ್ಲಿ ಮಾಲೀಕರ ಚಿತ್ತ ಕದಿಯಲಿಲ್ಲ.
ಏಕದಿನ ವಿಶ್ವಕಪ್‌ನಲ್ಲಿ 24 ವರ್ಷದ ರಚಿನ್ ರವೀಂದ್ರ 10 ಪಂದ್ಯಗಳಲ್ಲಿ 578 ರನ್ ಗಳನ್ನು ಸಿಡಿಸಿದ್ದರು. ಈ ವೇಳೆ 3 ಶತಕ ಹಾಗೂ ಎರಡು ಅರ್ಧಶತಕ ಬಾರಿಸಿದ್ದರು. ಅಲ್ಲದೆ ಐದು ವಿಕೆಟ್ ಪಡೆದು ಮಿಂಚಿದ್ದರು. ಇವರಿಗೆ ಹರಾಜಿನಲ್ಲಿ ಹಣದ ಹೊಳೆ ಹರಿಯುವ ನಿರೀಕ್ಷೆ ಇತ್ತು. ಆದರೆ ನಿರೀಕ್ಷೆ ಹುಸಿಯಾಗಿದೆ. ಚೆನ್ನೈ ಸುಲಭವಾಗಿ 1.8 ಕೋಟಿ ನೀಡಿ ಕಿವೀಸ್ ಪ್ಲೇಯರ್‌ಗೆ ಮಣೆ ಹಾಕಿದೆ.

ಇನ್ನು ಟೀಮ್ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಶಾರ್ದೂಲ್ ಠಾಕೂರ್ ಅವರನ್ನು ಸೇರಿಸಿಕೊಳ್ಳಲು ಚೆನ್ನೈ ಆರಂಭದಿಂದಲೂ ಮನಸ್ಸು ಮಾಡಿತ್ತು. ಅದರಂತೆ ಮೊದಲಿಗೆ ಯಾರೂ ಶಾರ್ದೂಲ್ ಠಾಕೂರ್ ಬಗ್ಗೆ ಆಸಕ್ತಿ ತೋರಿಸಲಿಲ್ಲ, ಆದರೆ CSK ಬಿಡ್ ಮಾಡಿತು. ಅವನ ಹಿಂದೆ ಹೈದರಾಬಾದ್ ಕೂಡ ಬಂದಿತು. ಬಿಡ್ಡಿಂಗ್ 3 ಕೋಟಿ ರೂ.ಗೆ ತಲುಪಿತು. ಅಂತಿಮವಾಗಿ ಶಾರ್ದೂಲ್ ಠಾಕೂರ್ 4 ಕೋಟಿಗೆ CSK ತಂಡ ಸೇರಿದರು. ಈ ಮೊದಲೇ ಚೆನ್ನೈ ಪರ ಆಡಿದ್ದ ಶಾರ್ದೂಲ್ ತವರಿಗೆ ಮರಳಿದಂತೆ ಆಗಿದೆ. 2023 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದ ಶಾರ್ದೂಲ್ ಠಾಕೂರ್ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದರು.
ಶಾರ್ದೂಲ್ ಠಾಕೂರ್ 86 ಐಪಿಎಲ್ ಪಂದ್ಯಗಳನ್ನು ಆಡಿರುವ ಶಾರ್ದೂಲ್ 286 ರನ್ ಗಳನ್ನು ಬಾರಿಸಿದ್ದು, 89 ವಿಕೆಟ್‌ಗಳನ್ನು ಪಡೆದಿದ್ದಾರೆ. ಶಾರ್ದೂಲ್ ಡೆತ್ ಓವರ್‌ಗಳಲ್ಲಿ ತಂಡಕ್ಕೆ ನೆರವಾಗಬಲ್ಲ ಪ್ಲೇಯರ್. ಹೀಗಾಗಿ ಅಳೆದು ತೂಗಿ ಚೆನ್ನೈ ಈ ಆಟಗಾರರಿಗೆ ಮಣೆ ಹಾಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications