For Quick Alerts
ALLOW NOTIFICATIONS  
For Daily Alerts
 

ಒಂದೂ ಪಂದ್ಯ ಸೋಲದೆ ವಿಶ್ವಕಪ್ ಗೆದ್ದ ಕೇವಲ ಮೂರು ತಂಡಗಳು ಇದೇ ನೋಡಿ!!

ಐಸಿಸಿ ಏಕದಿನ ವಿಶ್ವಕಪ್ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಪ್ರತಿಷ್ಠಿತ ಕ್ರಿಕೆಟ್ ಟೂರ್ನಮೆಂಟ್. ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) 1975ರಲ್ಲಿ ಈ ಟೂರ್ನಿಯನ್ನು ಆಯೋಜಿಸಲು ಆರಂಭಿಸಿತು. ಅಂದಿನಿಂದ ಇದು ವಿಶ್ವದ ಅತ್ಯಂತ ಪ್ರತಿಷ್ಠಿತ ಏಕದಿನ ಪಂದ್ಯಾವಳಿ ಎನಿಸಿಕೊಂಡಿದೆ. ಟೂರ್ನಿಯ ಶ್ರೀಮಂತ ಇತಿಹಾಸದಲ್ಲಿ ಅನೇಕ ತಂಡಗಳು ವಿಶ್ವ ಚಾಂಪಿಯನ್‌ಗಳಾಗಿ ಮೆರೆದಾಡಿವೆ.

ವಿಶ್ವಕಪ್ ಟೂರ್ನಿಯನ್ನು ಗೆಲ್ಲುವುದು ಅತ್ಯಂತ ದೊಡ್ಡ ಸಾಧನೆ. ಆದರೆ ಒಂದೂ ಪಂದ್ಯವನ್ನು ಸೋಲದೆ ವಿಶ್ವಕಪ್ ಟೂರ್ನಿಯನ್ನು ಗೆಲ್ಲುವುದಿದೆಯಲ್ಲಾ, ಅದು ನಿಜಕ್ಕೂ ಆ ತಂಡ ಚಾಂಪಿಯನ್ ಪಟ್ಟಕ್ಕೇತಲು ಅರ್ಹ ಎನಿಸುವ ಭಾವನೆ ಮೂಡಿಸುತ್ತದೆ. ಅದು ಟೂರ್ನಿಯುದ್ದಕ್ಕೂ ಆ ತಂಡ ಎಂಥಾ ಅದ್ಭುತವಾದ ಆಟವನ್ನು ಸ್ಥಿರವಾಗಿ ಆಡುತ್ತಾ ಬಂದುದೆ ಎನ್ನುವುದನ್ನು ಸ್ಪಷ್ಟವಾಗಿ ಹೇಳುತ್ತದೆ. ಯಾವುದೇ ಎದುರಾಳಿಗೂ ತನ್ನ ವಿರುದ್ಧ ಉಸಿರೆತ್ತಲು ಅವಕಾಶವೇ ಇಲ್ಲದಂತೆ ಮಾಡಿರುತ್ತದೆ.

Only these 3 teams won the ODI World Cup without taste single defeat in the tournament

ಕುತೂಹಲಕಾರಿ ಅಂಶವೆಂದರೆ ಏಕದಿನ ಕ್ರಿಕೆಟ್‌ನ ವಿಶ್ವಕಪ್ ಇತಿಹಾಸದಲ್ಲಿ ಹೀಗೆ ಒಂದೂ ಪಂದ್ಯವನ್ನು ಸೋಲದೆ ಚಾಂಪಿಯನ್ ಪಟ್ಟಕ್ಕೇರಿದ ಉದಾಹರಣೆಗಳು ಕೇವಲ ಮೂರು ಬಾರಿ ಮಾತ್ರವೇ ದೊರೆಯುತ್ತದೆ. ಆದರೆ ಒಂದು ತಂಡ ಮಾತ್ರ ಸತತ ಎರಡು ಟೂರ್ನಿಗಳಲ್ಲಿ ಈ ಸಾಧನೆ ಮಾಡಿ ಮೆರೆದಾಡಿದೆ. ಈ ವರದಿಯಲ್ಲಿ ವಿಶ್ವಕಪ್ ಟೂರ್ನಿಯಲ್ಲಿ ಒಂದೂ ಪಂದ್ಯ ಸೋಲದೆ ಚಾಂಪಿಯನ್ ಎನಿಸಿಕೊಂಡ ಮೂರು ತಂಡಗಳ ಮಾಹಿತಿ ಇಲ್ಲಿದೆ.

2003 ಮತ್ತು 2007ರಲ್ಲಿ ಒಂದೂ ಪಂದ್ಯ ಸೋಲದೆ ಚಾಂಪಿಯನ್ ಆದ ಆಸ್ಟ್ರೇಲಿಯಾ
2000ನೇ ದಶಕದಲ್ಲಿದ್ದ ಆಸ್ಟ್ರೇಲಿಯಾ ಕ್ರಿಕೆಟ್ ತಂಡವನ್ನು ಮಣಿಸುವುದು ಅಸಾಧ್ಯ ಎನ್ನುವುವ ಮಾತಿತ್ತು. ಈ ಮಾತನ್ನು ಸತತ ಎರಡು ವಿಶ್ವಕಪ್‌ ಟೂರ್ನಿಯಲ್ಲಿ ಆಸಿಸ್ ಪಡೆ ಅಕ್ಷರಶಃ ನಿಜ ಮಾಡಿಬಿಟ್ಟಿತ್ತು. ರಿಕಿ ಪಾಂಟಿಂಗ್ ನೇತೃತ್ವದಲ್ಲಿ ಆಸ್ಟ್ರೇಲಿಯಾ ತಂಡ ಒಂದೂ ಪಂದ್ಯವನ್ನು ಸೋಲದೆ ಬರೊಬ್ಬರಿ ಎರಡು ವಿಶ್ವಕಪ್‌ಗಳನ್ನು ಗೆದ್ದುಕೊಂಡಿತ್ತು. 2003ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ವಿಶ್ವಕಪ್ ಹಾಗೂ 2007ರಲ್ಲಿ ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆದ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾವನ್ನು ಮಣಿಸುವ ಸಾಮರ್ಥ್ಯ ಯಾವ ತಂಡಕ್ಕೂ ಇರಲಿಲ್ಲ.

1996ರಲ್ಲಿ ಶ್ರೀಲಂಕಾ ಮಾಡಿತ್ತು ಈ ಸಾಧನೆ
1996ರಲ್ಲಿ ಶ್ರೀಲಂಕಾ ತಂಡ ವಿಶ್ವಕಪ್ ಟ್ರೋಫಿಯನ್ನು ಗೆದ್ದ ಸಾಧನೆ ಮಾಡಿತ್ತು. ಈ ಟೂರ್ನಿಯಲ್ಲಿ ಶ್ರೀಲಂಕಾ ತಂಡ ಅರ್ಜುನ ರಣತುಂಗಾ ನೇತೃತ್ವದಲ್ಲಿ ಟೂರ್ನಿಯುದ್ದಕ್ಕೂ ಅತ್ಯಂತ ಸ್ಥಿರವಾಗಿ ಅಮೋಘ ಪ್ರದರ್ಶನ ನೀಡಿತ್ತು. ಏಷ್ಯಾದ ರಾಷ್ಟ್ರಗಳೇ ಆಯೋಜಿಸಿದ್ದ ಈ ವಿಶ್ವಕಪ್‌ನಲ್ಲಿ ಶ್ರೀಲಂಕಾ ತಂಡ ಒಂದೂ ಪಂದ್ಯವನ್ನು ಸೋಲದೆ ಟೂರ್ನಿಯನ್ನು ಗೆದ್ದು ಬೀಗಿತ್ತು. ಗ್ರೂಪ್ 'ಎ'ಯಲ್ಲಿದ್ದ ಶ್ರೀಲಂಕಾ ಈ ಹಂತದ ಎಲ್ಲಾ ಐದು ಪಂದ್ಯಗಳನ್ನು ಗೆದ್ದುಕೊಂಡಿತ್ತು. ಬಳಿಕ ನಾಕೌಟ್‌ ಪಂದ್ಯಗಳನ್ನು ಗೆದ್ದು ಚಾಂಪಿಯನ್ ಪಟ್ಟಕ್ಕೇರಿತ್ತು.

ಉದ್ಘಾಟನಾ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್‌ ಕೂಡ ಅಜೇಯ
ಏಕದಿನ ವಿಶ್ವಕಪ್‌ನ ಉದ್ಘಾಟನಾ ಆವೃತ್ತಿಯಾದ 1975ರಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಕಟ್ಟಿ ಹಾಕಲು ಯಾವುದೇ ತಂಡಕ್ಕೂ ಸಾಧ್ಯವಾಗಿರಲೇ ಇಲ್ಲ. ಯಾವುದೇ ಪಂದ್ಯವನ್ನೂ ಸೋಲದೆ ವೆಸ್ಟ್ ಇಂಡೀಸ್ ತಂಡ ಚಾಂಪಿಯನ್ ಎನಿಸಿಕೊಂಡಿತ್ತು. ಮೊದಲಿಗೆ ಗ್ರೂಪ್ ಹಂತದಲ್ಲಿ ಎಲ್ಲಾ ಮೂರು ಪಂದ್ಯಗಳಲ್ಲಿಯೂ ವಿಂಡೀಸ್ ಗೆದ್ದು ಸೆಮಿಫೈನಲ್‌ಗೆ ಪ್ರವೇಶಿಸಿತ್ತು. ಬಳಿಕ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯದಲ್ಲಿಯೂ ಗೆದ್ದು ಬೀಗಿತ್ತು.

Story first published: Monday, November 13, 2023, 22:03 [IST]
Other articles published on Nov 13, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+