Oshane Thomas: ಒಂದು ಎಸೆತಕ್ಕೆ 15 ರನ್; ವೆಸ್ಟ್ ವಿಂಡೀಸ್ ವೇಗಿಯಿಂದ ಕಳಪೆ ಬೌಲಿಂಗ್
ಕ್ರಿಕೆಟ್ ಲೋಕದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಅಂತಾಆರಾಷ್ಟ್ರೀಯ ಬೌಲರ್‌ನ ಸ್ಥಿತಿ ಗಲ್ಲಿ ಕ್ರಿಕೆಟ್‌ನಂತೆ ಕಾಣುತ್ತಿದೆ. ವೆಸ್ಟ್ ಇಂಡೀಸ್ ವೇಗದ ಬೌಲರ್ ಓಶಾನೆ ಥಾಮಸ್ ಕೇವಲ 1 ಎಸೆತದಲ್ಲಿ 15 ರನ್ ನೀಡಿದರು. ಇದಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಓಶಾನೆ ಥಾಮಸ್ ಭಾರೀ ಸದ್ದು ಮಾಡುತ್ತಿದ್ದಾರೆ. ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಓಶಾನೆ ಥಾಮಸ್ ಈ ಕೆಟ್ಟ ದಾಖಲೆಯನ್ನು ಮಾಡಿದ್ದಾರೆ.
ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಖುಲ್ನಾ ಟೈಗರ್ಸ್ ಮತ್ತು ಚಿತ್ತಗಾಂಗ್ ಕಿಂಗ್ಸ್ ನಡುವೆ ಪಂದ್ಯ ನಡೆಯಿತು. 2024 ರ ಕೊನೆಯ ದಿನ ವೆಸ್ಟ್ ಇಂಡೀಸ್ ಬೌಲರ್‌ಗೆ ದುಃಸ್ವಪ್ನವಾಗಿತ್ತು. ಖುಲ್ನಾ ಟೈಗರ್ಸ್ ಪರ ಓಶನ್ ಥಾಮಸ್ ಮೊದಲ ಓವರ್ ಬೌಲಿಂಗ್ ಮಾಡಲು ಬಂದು ತಮ್ಮ ವೃತ್ತಿಜೀವನವನ್ನು ಹಾಳು ಮಾಡಿಕೊಂಡಂತೆ ಕಾಣುತ್ತಿದೆ. ಅವರು ತಮ್ಮ ಮೊದಲ ಓವರ್‌ನಲ್ಲಿ ನೋ ಮತ್ತು ವೈಡ್ ಬಾಲ್‌ಗಳನ್ನು ಎಸೆಯುವ ಮೂಲಕ ಒಂದೇ ಎಸೆತದಲ್ಲಿ 15 ರನ್‌ಗಳನ್ನು ನೀಡಿದರು.

ಒತ್ತಡದಲ್ಲಿ ಥಾಮಸ್
ನಿರಂತರ ವೈಡ್‌ಗಳು ಮತ್ತು ನೋ ಬಾಲ್ ಎಸೆಯುವ ಮೂಲಕ ಥಾಮಸ್ ಸಾಕಷ್ಟು ತೊಂದರೆಗೀಡಾದರು. ಅವರು ಮೊದಲ ಎಸೆತವನ್ನು ನೋ ಬಾಲ್ ಮಾಡಿದರು. ಹೀಗಾಗಿ ಬ್ಯಾಟರ್‌ಗೆ ಫ್ರೀ ಹಿಟ್‌ಗೆ ಅವಕಾಶ ಸಿಕ್ಕಿತು. ಫ್ರೀ ಹಿಟ್ ಬಾಲ್‌ನಲ್ಲಿ ಯಾವುದೇ ರನ್ ಗಳಿಸಲಿಲ್ಲ. ಆದರೆ ಬ್ಯಾಟರ್ ಮುಂದಿನ ಎಸೆತದಲ್ಲಿ ಸಿಕ್ಸರ್ ಬಾರಿಸಿದಾಗ ಅಂಪೈರ್ ನೋ ಎಂದು ಘೋಷಿಸಿದರು. ಥಾಮಸ್ ಅವರು ಫ್ರೀ ಹಿಟ್‌ನಲ್ಲಿ ಸತತ ಎರಡು ವೈಡ್‌ಗಳನ್ನು ಬೌಲ್ ಮಾಡಿದರು. ನಂತರ ಬ್ಯಾಟರ್ ಬೌಂಡರಿ ಬಾರಿಸಿದರು. ಆದರೆ ಇದು ಕೂಡ ನೋ ಬಾಲ್ ಆಗಿತ್ತು. ಈ ವೇಳೆ ಕೇವಲ 1 ಎಸೆತದಲ್ಲಿ 15 ರನ್ ಬಂದಿತ್ತು. ಥಾಮಸ್ 18 ರನ್ ನೀಡುವುದರ ಜೊತೆಗೆ ಒಂದು ವಿಕೆಟ್ ಪಡೆಯುವ ಮೂಲಕ ತಮ್ಮ ಓವರ್ ಅನ್ನು ಮುಗಿಸಿದರು.
ಥಾಮಸ್ ಅವರ ಕಳಪೆ ಬೌಲಿಂಗ್‌ನಿಂದಾಗಿ ಖುಲ್ನಾ ಟೈಗರ್ಸ್ ಸೋಲಿನ ಭೀತಿಯಲ್ಲಿತ್ತು. ಆದರೆ, ಖುಲ್ನಾ ಟೈಗರ್ಸ್‌ನ ಉಳಿದ ಬೌಲರ್‌ಗಳು ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಈ ಮೂಲಕ ಪಂದ್ಯವನ್ನು ಮತ್ತೆ ತಮ್ಮದೆಡೆ ಹೋಲವಂತೆ ಮಾಡಿದರು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಖುಲ್ನಾ ಟೈಗರ್ಸ್ 203 ರನ್ ಗಳಿಸಿತು. ಇದಕ್ಕೆ ಪ್ರತ್ಯುತ್ತರವಾಗಿ ಚಿತ್ತಗಾಂಗ್ ಕಿಂಗ್ಸ್ ತಂಡ ಕೇವಲ 166 ರನ್‌ಗಳಿಗೆ ಸೀಮಿತವಾಯಿತು. ಇದರೊಂದಿಗೆ ಖುಲ್ನಾ ಟೈಗರ್ಸ್ 38 ರನ್‌ಗಳ ಭರ್ಜರಿ ಗೆಲುವು ಸಾಧಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications