ಬಾಂಗ್ಲಾ ಕ್ರಿಕೆಟ್ ತಂಡಕ್ಕೆ ಬೌಲಿಂಗ್ ಕೋಚ್ ಆಗಿ ಓಟಿಸ್ ಗಿಬ್ಸನ್ ಆಯ್ಕೆ

ಧಾಕಾ, ಜನವರಿ 22: ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಮಾಜಿ ವೇಗಿ ಓಟಿಸ್ ಗಿಬ್ಸನ್ ಅವರನ್ನು ಬಾಂಗ್ಲಾದೇಶ ಕ್ರಿಕೆಟ್ ತನ್ನ ಬೌಲಿಂಗ್ ಕೋಚ್ ಆಗಿ ನೇಮಿಸಿದೆ. ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್‌ನ ಎರಡು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿರುವ ಗಿಬ್ಸನ್ 2022ರ ವರೆಗೆ ತಂಡಕ್ಕೆ ಮಾರ್ಗದರ್ಶಕರಾಗಿರಲಿದ್ದಾರೆ.
ಬಾಂಗ್ಲಾ ತಂಡಕ್ಕೆ ಬೌಲಿಂಗ್ ಕೋಚ್ ಆಗಿದ್ದ ಚಾರ್ಲ್ ಲ್ಯಾಂಗ್ವೆಲ್ಡ್ ಅವರು 2019ರ ಡಿಸೆಂಬರ್‌ನಲ್ಲಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 2007ರಲ್ಲಿ ನಿವೃತ್ತಿ ಘೋಷಿಸಿದ್ದ ಗಿಬ್ಸನ್, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ತಂಡಕ್ಕೆ ಮುಖ್ಯ ಕೋಚ್ ಆಗಿ, ಇಂಗ್ಲೆಂಡ್‌ಗೆ ಬೌಲಿಂಗ್ ಕೋಚ್ ಆಗಿ ಜವಾಬ್ದಾರಿ ನಿರ್ವಹಿಸಿದ ಅನುಭವ ಹೊಂದಿದ್ದಾರೆ.
'ಕೋಚ್ ಆಗಿ ಅಥವಾ ಕ್ರಿಕೆಟ್ ಆಡಿದ ವಿಚಾರದಲ್ಲಿ ಗಿಬ್ಸನ್‌ಗೆ ಅಪಾರ ಅನುಭವವಿದೆ. ಬಾಂಗ್ಲಾದೇಶವನ್ನು ಹತ್ತರದಿಂದ ನೋಡುವ ಅವಕಾಶವೂ ಅವರಿಗೆ ಲಭಿಸಿದೆ. ಬಾಂಗ್ಲಾದೇಶದ ಕೋಚಿಂಗ್ ಗ್ರೂಪಿನಲ್ಲಿ ಅವರೊಬ್ಬರು ಮೌಲ್ಯಯುತ ಸೇರ್ಪಡೆ ಎಂದು ಖಂಡಿತಾ ನನಗನ್ನಿಸುತ್ತಿದೆ,' ಎಂದು ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ (ಬಿಸಿಬಿ) ಸಿಇಒ ನಿಜಾಮುದ್ದೀನ್ ಚೌಧರಿ ಹೇಳಿದ್ದಾರೆ.
ಪಾಕಿಸ್ತಾನಕ್ಕೆ ಬಾಂಗ್ಲಾ ಪ್ರವಾಸ ಸರಣಿಯ ಮೊದಲ ಜವಾಬ್ದಾರಿ ಗಿಬ್ಸನ್ ಮೇಲಿದೆ. ಪಾಕ್‌ಗೆ ಪ್ರವಾಸ ಕೈಗೊಳ್ಳುವ ಬಾಂಗ್ಲಾ ತಂಡ ಅಲ್ಲಿ 3 ಟಿ20, 2 ಟೆಸ್ಟ್ ಮತ್ತು ಒಂದು ಏಕದಿನ ಪಂದ್ಯವನ್ನಾಡಲಿದೆ. ಜನವರಿ ಮತ್ತು ಏಪ್ರಿಲ್ ಮಧ್ಯೆ ಈ ಪಂದ್ಯಗಳು ನಡೆಯಲಿವೆ. ಟಿ20 ಸರಣಿಯ ಪಂದ್ಯಗಳು ಜನವರಿ 24ರಿಂದ 27ರವರೆಗೆ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications