Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಳೆಯೇ ನಮ್ಮ ದೊಡ್ಡ ಎದುರಾಳಿ: ದಕ್ಷಿಣ ಆಫ್ರಿಕಾ ಮಾಜಿ ಆಟಗಾರ ಹೀಗೆ ಹೇಳಿದ್ದೇಕೆ?

South africa

ಐಸಿಸಿ ಟಿ20 ವಿಶ್ವಕಪ್‌ನ ಸೂಪರ್ 12 ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಗೆಲುವಿನಂಚಿನಲ್ಲಿ ಮಳೆಯಿಂದಾಗಿ ಎರಡು ಅಂಕಗಳನ್ನ ಕಳೆದುಕೊಂಡ ದಕ್ಷಿಣ ಆಫ್ರಿಕಾ ನಿರಾಸೆಯಿಂದ ವಿಶ್ವಕಪ್ ಅಭಿಯಾನ ಪ್ರಾರಂಭಿಸಿದೆ. ಹೊಬಾರ್ಟ್‌ನಲ್ಲಿ ನಡೆದ ಪಂದ್ಯದಲ್ಲಿ ದ. ಆಫ್ರಿಕಾ ಗೆಲುವಿಗೆ 24 ಎಸೆತಗಳಲ್ಲಿ ಕೇವಲ 13ರನ್‌ಗಳು ಬೇಕಿತ್ತು. ಆದ್ರೆ ಮಳೆಯ ಎಂಟ್ರಿಯಿಂದಾಗಿ ಗೆಲ್ಲುವ ಕನಸಿಗೆ ತಣ್ಣಿರೆರಚಿದೆ.

ಈ ಕುರಿತಾಗಿ ಮಾತನಾಡಿರುವ ದ.ಆಫ್ರಿಕಾ ಮಾಜಿ ಆಟಗಾರ ಕೊಬೊಸ್ ಒಲಿವರ್ ''ನಮ್ಮ ಅತಿದೊಡ್ಡ ಎದುರಾಳಿ ಮಳೆ'' ಎಂದು ಹೇಳಿದ್ದಾರೆ. ಒಲಿವರ್ ಹವಾಮಾನ ಏರಿಳಿತದ ವಿರುದ್ಧ ಸಾಕಷ್ಟು ಬೇಸರಗೊಂಡಿದ್ದು, ಗೆಲ್ಲುವ ಅವಕಾಶ ಕಳೆದುಕೊಂಡ ದ.ಆಫ್ರಿಕಾ ತಂಡದ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.

''ನಮ್ಮ ಅತಿದೊಡ್ಡ ಎದುರಾಳಿ ಅಂದ್ರೆ ಅದು ಮಳೆಯೇ ಆಗಿದ್ದು, ಭಾರತ ಅಥವಾ ಆಸ್ಟ್ರೇಲಿಯಾವಲ್ಲ. ಮಳೆ ದೊಡ್ಡ ಎದುರಾಳಿ. ನನಗೆ ನಿಜಕ್ಕೂ ಅರ್ಥವಾಗದು ಜನರು ಹೇಗೆ ನಮ್ಮನ್ನು ಚೋಕರ್ ಎಂದು ಕರೆಯುತ್ತಾರೆ. ನನ್ನ ಪ್ರಕಾರ ನಾವು ಚೋಕರ್ ಆಗಿಲ್ಲ, ಅದು ಮಳೆ'' ಎಂದು ಒಲಿವರ್ ಬ್ಯಾಟ್‌ಬ್ರಿಕ್ಸ್‌7 ಪ್ರಸ್ತುತಪಡಿಸುವ ರನ್‌ ಕಿ ರಣನೀತಿ ಶೋನಲ್ಲಿ ಹೇಳಿದ್ದಾರೆ.

ಪಂದ್ಯವನ್ನ ಸುಲಭವಾಗಿ ಗೆಲ್ಲಬಹುದಿತ್ತು ದಕ್ಷಿಣ ಆಫ್ರಿಕಾ
ಹೌದು ದಕ್ಷಿಣ ಆಫ್ರಿಕಾ ಜಿಂಬಾಬ್ವೆ ವಿರುದ್ಧದ ಪಂದ್ಯವನ್ನ ಅತ್ಯಂತ ಸುಲಭವಾಗಿ ಗೆಲ್ಲಬಹುದಿತ್ತು. ಮಳೆಯಿಂದಾಗಿ ಪಂದ್ಯವು 9 ಓವರ್‌ಗೆ ಸೀಮಿತಗೊಂಡಾಗ ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ 80ರನ್ ಟಾರ್ಗೆಟ್ ನೀಡಿತು. ಈ ಗುರಿಯನ್ನು ಅತ್ಯಂತ ವೇಗವಾಗಿ ತಲುಪುತ್ತಾ ಸಾಗಿದ್ದ ದಕ್ಷಿಣ ಆಫ್ರಿಕಾಗೆ ಮಳೆ ಅಡ್ಡಿಪಡಿಸಿತು.

ಮಳೆಯಿಂದಾಗಿ ಪಂದ್ಯದ ಮಧ್ಯೆ ಈ ಓವರ್ ಕಡಿತಗೊಂಡು 7 ಓವರ್‌ಗೆ 64ರನ್‌ ನೀಡಲಾಯಿತು. ಆದ್ರೆ ಮಳೆಯು ಬಿಟ್ಟು ಬಿಡದೆ ಕಾಡಿದ್ದರ ಪರಿಣಾಮ ಪಂದ್ಯ ಫಲಿತಾಂಶವಿಲ್ಲದೆ ಅಂತ್ಯಗೊಂಡಿದ್ದು, ದ.ಆಫ್ರಿಕಾಗೆ ಭಾರೀ ನಿರಾಸೆಯಾಗಿದೆ. ದ.ಆಫ್ರಿಕಾ 3 ಓವರ್ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲದೆ 47 ರನ್ ಕಲೆಹಾಕಿತ್ತು. ಹೀಗಾಗಿ ಸುಲಭವಾಗಿ ಗೆಲುವಿನ ದಡ ತಲುಪಿಬಿಡುತ್ತಿತ್ತು. ಆದ್ರೆ ಮಳೆಯು ಕಣ್ಣಾಮುಚ್ಚಾಲೆ ಆಟವಾಡಿದ ಪರಿಣಾಮ ಫಲಿತಾಂಶವಿಲ್ಲದೆ ಪಂದ್ಯ ಕೊನೆಗೊಂಡಿದೆ.

ದ.ಆಫ್ರಿಕಾ ಪರ ಕ್ವಿಂಟನ್ ಡಿಕಾಕ್ 18 ಎಸೆತಗಳಲ್ಲಿ ಅಜೇಯ 47ರನ್ ಸಿಡಿಸುವ ಮೂಲಕ ಮಿಂಚಿನ ಆಟವಾಡಿದ್ರು. ಇವರ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡಿತ್ತು. ಇದಕ್ಕೂ ಮುನ್ನ ಮಳೆಯ ಕಾಟದಿಂದಾಗಿ 30 ನಿಮಿಷಗಳ ಕಾಲ ಟಾಸ್ ವಿಳಂಭವಾಗಿದ್ದಲ್ಲೆ ಮತ್ತೆ ಮಳೆಯಿಂದಾಗಿ ಪಂದ್ಯದ ಓವರ್‌ಗಳು ಕಡಿತಗೊಂಡು, 9 ಓವರ್‌ಗಳಿಗೆ ಪಂದ್ಯ ನಿಗದಿಗೊಂಡಿತು. ನಂತರ ದ.ಆಫ್ರಿಕಾ ಗುರಿ ಬೆನ್ನತ್ತುವಾಗ ಮತ್ತೆ ಮಳೆಯಿಂದಾಗಿ 7 ಓವರ್‌ಗೆ 64ರನ್‌ ನೀಡಲಾಯಿತು.

ಆದ್ರೆ ಪಂದ್ಯ ಮಳೆಯಿಂದಾಗಿ ನಿಲ್ಲುವ ಮೊದಲು ದ.ಆಫ್ರಿಕಾ ವಿಕೆಟ್ ನಷ್ಟವಿಲ್ಲ 3 ಓವರ್‌ನಲ್ಲಿ 51ರನ್ ಕಲೆಹಾಕಿತು. ಗೆಲುವಿಗೆ ಕೇವಲ 13ರನ್ ಬೇಕಿತ್ತು.

Story first published: Monday, October 24, 2022, 23:47 [IST]
Other articles published on Oct 24, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+