Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನಮ್ಮ ವೇಗಿಗಳು ಯಾವ ತಂಡಕ್ಕೂ ಸವಾಲೊಡ್ಡಬಲ್ಲರು: ವಿಂಡೀಸ್ ಕೋಚ್

Our pace attack can challenge any team says West Indies assistant coach Roddy Estwick

ಪೋರ್ಟ್ ಆಫ್‌ ಸ್ಪೇನ್, ಜೂನ್ 16: ಕೊರೊನಾವೈರಸ್ ಬಳಿಕ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿ ಜುಲೈನಲ್ಲಿ ನಡೆಯಲಿದೆ. ಇಂಗ್ಲೆಂಡ್‌ಗೆ ಪ್ರವಾಸ ಬಂದಿರುವ ಕೆರಿಬಿಯನ್ನರು ಅಲ್ಲಿ ಆತಿಥೇಯರ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿ ಆಡಲಿದ್ದಾರೆ. ಜೂನ್ 9ರಂದೇ ವಿಂಡೀಸ್‌ನ 25 ಆಟಗಾರರಿದ್ದ ತಂಡ ಇಂಗ್ಲೆಂಡ್ ತಲುಪಿದೆ.

ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ಎರಡೂ ತಂಡಗಳ ಆಟಗಾರರು 14 ದಿನಗಳ ಕಡ್ಡಾಯ ಕ್ವಾರಂಟೈನ್‌ ಬಳಿಕ ಪಂದ್ಯವನ್ನಾಡಲಿದ್ದಾರೆ. ಸದ್ಯ ಎರಡೂ ತಂಡದ ಆಟಗಾರರು ಕುತೂಹಲಕಾರಿ ಸರಣಿಗಾಗಿ ಅಭ್ಯಾಸ ನಡೆಸುತ್ತಿದ್ದಾರೆ. ಸರಣಿ ಗೆಲ್ಲುವ ಉತ್ಸಾದಲ್ಲಿರುವ ವಿಂಡೀಸ್ ತಂಡದ ಸಹಾಯಕ ಕೋಚ್ ರೊಡ್ಡಿ ಎಸ್ಟ್ವಿಕ್ ನಮ್ಮಲ್ಲಿ ಮಾರಕ ಬೌಲರ್‌ಗಳಿದ್ದಾರೆ ಎಂದಿದ್ದಾರೆ.

ಇಎಸ್‌ಪಿಎನ್ ಕ್ರಿಕ್‌ಇನ್ಫೋ ಜೊತೆ ಮಾತನಾಡಿದ ಎಸ್ಟ್ವಿಕ್, 'ವೆಸ್ಟ್ ಇಂಡೀಸ್‌ನ ವೇಗಿಗಳ ಬಲದೊಂದಿಗೆ ಸರಣಿ ಆರಂಭಿಸುವುದರಲ್ಲಿದ್ದೇವೆ. ಹೀಗಾಗಿ ನಮಗಿದು ರೋಮಾಂಚನಕಾರಿ ಸಮಯವಾಗಿದೆ,' ಎಂದಿದ್ದಾರೆ. ಎಸ್ಟ್ವಿಕ್ ಹೇಳಿದಂತೆ ವಿಂಡೀಸ್ ತಂಡದಲ್ಲಿ ಕೆಮರ್ ರೋಚ್, ಶಾನನ್ ಗೇಬ್ರಿಯಲ್, ಅಲ್ಝಾರಿ ಜೋಸೆಫ್ ಮತ್ತು ನಾಯಕ ಜೇಸನ್ ಹೋಲ್ಡರ್‌ನಂತ ವೇಗಿಗಳಿದ್ದಾರೆ.

'ನಮ್ಮ ಫಿಟ್ನೆಸ್ ಸುಧಾರಿಸುವುದನ್ನು ನಾವು ಮಾಡಿದ್ದೇವೆ. ಅದೇ ಪ್ರಮುಖ ವಿಚಾರಗಳಲ್ಲೊಂದು. ನೀವೊಂದು ವೇಳೆ 80ರ ದಶಕದತ್ತ ಹೊರಳಿ ನೋಡಿದರೆ ಫಾಸ್ಟ್ ಬೌಲರ್‌ಗಳ ಪ್ರಮುಖ ವಿಚಾರವೆಂದರೆ ಫಿಟ್ನೆಸ್ಸೇ ಆಗಿತ್ತು,' ಎಂದು ರೊಡ್ಡಿ ವಿವರಿಸಿದ್ದಾರೆ. ಜುಲೈ 8ರಿಂದ ಇಂಗ್ಲೆಂಡ್ vs ವೆಸ್ಟ್ ಇಂಡೀಸ್ ಸರಣಿ ಆರಂಭಗೊಳ್ಳಲಿದೆ.

Story first published: Tuesday, June 16, 2020, 21:07 [IST]
Other articles published on Jun 16, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+