2024ರ SA20 ಪಂದ್ಯಾವಳಿಗಾಗಿ ಉಳಿಸಿಕೊಂಡ ಆಟಗಾರರ ಪಟ್ಟಿ ಪ್ರಕಟಿಸಿದ ಪಾರ್ಲ್ ರಾಯಲ್ಸ್
ಗುರುವಾರ, ಆಗಸ್ಟ್ 3ರಂದು ರಾಯಲ್ಸ್ ಸ್ಪೋರ್ಟ್ಸ್ ಗ್ರೂಪ್ ಒಡೆತನದ ಫ್ರಾಂಚೈಸಿ ಪಾರ್ಲ್ ರಾಯಲ್ಸ್ ತಂಡವು ದಕ್ಷಿಣ ಆಫ್ರಿಕಾ ಟಿ20 ಲೀಗ್ ಆದ SA20 ಪಂದ್ಯಾವಳಿಯ 2024ರ ಆವೃತ್ತಿಗೆ ಉಳಿಸಿಕೊಂಡಿರುವ 15 ಆಟಗಾರರ ತಂಡವನ್ನು ಪ್ರಕಟಿಸಿದೆ.
ಬೋಲ್ಯಾಂಡ್ ಪಾರ್ಕ್ ಮೂಲದ ಪಾರ್ಲ್ ರಾಯಲ್ಸ್ ತಂಡವು ತಮ್ಮ ಬಹುಪಾಲು ಆಟಗಾರರನ್ನು ಉಳಿಸಿಕೊಂಡಿದೆ. 12 ದಕ್ಷಿಣ ಆಫ್ರಿಕಾದ ಆಟಗಾರರು ಲೀಗ್‌ನ ಎರಡನೇ ಆವೃತ್ತಿಗೆ ಉಳಿದುಕೊಂಡಿದ್ದರೆ, ಮೂರು ವಿದೇಶಿ ಆಟಗಾರರನ್ನು ಉಳಿಸಿಕೊಂಡಿದೆ.

ದಕ್ಷಿಣ ಆಫ್ರಿಕಾದ ಬ್ಯಾಟರ್‌ಗಳಾದ ಡೇವಿಡ್ ಮಿಲ್ಲರ್, ಸ್ಪಿನ್ನರ್‌ಗಳಾದ ತಬ್ರೈಜ್ ಶಮ್ಸಿ ಮತ್ತು ಜಾರ್ನ್ ಫಾರ್ಟುಯಿನ್, ವೇಗಿ ಲುಂಗಿ ಎನ್‌ಗಿಡಿ, ಆಲ್‌ರೌಂಡರ್ ಆಂಡಿಲ್ ಫೆಹ್ಲುಕ್ವಾಯೊ, ಅಗ್ರ ಕ್ರಮಾಂಕದ ಬ್ಯಾಟರ್ ವಿಹಾನ್ ಲುಬ್ಬೆ ಮತ್ತು ವಿಕೆಟ್ ಕೀಪರ್ ಬ್ಯಾಟರ್ ಡೇನ್ ವಿಲಾಸ್ ಅವರಂತಹ ದೇಶೀಯ ಪ್ರತಿಭೆಗಳನ್ನು ಪಾರ್ಲ್ ರಾಯಲ್ಸ್ ಉಳಿಸಿಕೊಂಡಿದೆ.
ಟಿ20 ವಿಶ್ವಕಪ್ ವಿಜೇತ ಇಂಗ್ಲೆಂಡ್ ನಾಯಕ ಮತ್ತು 2023ರ SA20 ಪಂದ್ಯಾವಳಿಯ ಜೋಸ್ ಬಟ್ಲರ್, ಮತ್ತೊಬ್ಬ ಇಂಗ್ಲೆಂಡ್ ಆರಂಭಿಕ ಜೇಸನ್ ರಾಯ್ ಮತ್ತು ವೆಸ್ಟ್ ಇಂಡೀಸ್‌ನ ಸೀಮರ್ ಒಬೆಡ್ ಮೆಕಾಯ್ ಅವರು ಪಾರ್ಲ್ ರಾಯಲ್ಸ್ ಫ್ರಾಂಚೈಸಿಯೊಂದಿಗೆ ಮುಂದುವರಿಯಲು ಸಿದ್ಧರಾಗಿರುವ ಮೂವರು ಸಾಗರೋತ್ತರ ಆಟಗಾರರಾಗಿದ್ದಾರೆ.
ಹರಾಜಿನ ಜೊತೆಗೆ, ಪಾರ್ಲ್ ರಾಯಲ್ಸ್ ತಂಡ 17 ವರ್ಷದ ವೇಗಿ ಕ್ವೆನಾ ಮಫಕಾ ಅವರನ್ನು ಅನ್‌ಕ್ಯಾಪ್ಡ್ ಆಟಗಾರನಾಗಿ ಸಹಿ ಮಾಡಿದೆ. ಅವರು SA20 ರಲ್ಲಿ ಆಡುತ್ತಿರುವ ಅತ್ಯಂತ ಕಿರಿಯ ಆಟಗಾರನಾಗಿದ್ದಾರೆ.
SA20 ಪಂದ್ಯಾವಳಿಯ ಉದ್ಘಾಟನಾ ಆವೃತ್ತಿಯಲ್ಲಿ ಸೆಮಿಫೈನಲ್ ತಲುಪಿದ ಪಾರ್ಲ್ ರಾಯಲ್ಸ್ ತಂಡವು ಈ ವರ್ಷದ ಆರಂಭದಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ ಇಂಗ್ಲೆಂಡ್‌ನ ಅನುಭವಿ ಇಯಾನ್ ಮಾರ್ಗನ್ ಇಲ್ಲದೆ ಮೈದಾನಕ್ಕಿಳಿಯಲಿದೆ.
ಇನ್ನು ಪಾರ್ಲ್ ರಾಯಲ್ಸ್ ತಂಡವು ಆಲ್‌ರೌಂಡರ್ ಕಾರ್ಬಿನ್ ಬಾಷ್ ಅವರನ್ನು ಪ್ರಿಟೋರಿಯಾ ತಂಡಕ್ಕೆ ವ್ಯಾಪಾರ ಮಾಡಿದೆ. ಅಲ್ಲದೆ ಸ್ಪಿನ್ನರ್ ಇಮ್ರಾನ್ ಮನಾಕ್ ಮತ್ತು ವೆಸ್ಟ್ ಇಂಡೀಸ್‌ನ ವೇಗಿ ರಾಮನ್ ಸಿಮಂಡ್ಸ್ ಅವರನ್ನು ಬಿಡುಗಡೆ ಮಾಡಿದೆ.
ರಾಯಲ್ಸ್ ಫ್ರಾಂಚೈಸಿ ಕ್ರಿಕೆಟ್ ನಿರ್ದೇಶಕ ಕುಮಾರ್ ಸಂಗಕ್ಕಾರ ಅವರು ಉಳಿಸಿಕೊಂಡ ಆಟಗಾರರ ಬಗ್ಗೆ ಮಾತನಾಡಿದ್ದು, "ಕಳೆದ ಋತುವಿನಲ್ಲಿ SA20 ಪಂದ್ಯಾವಳಿಗೆ ಸಂಬಂಧಿಸಿದ ಎಲ್ಲರಿಗೂ ಇದು ಮೊದಲ ಬಾರಿಗೆ ಉತ್ತಮ ಅನುಭವವಾಗಿದೆ ಮತ್ತು ತಂಡವಾಗಿ ನಮಗೆ ಸಾಕಷ್ಟು ಕಲಿಯಲು ಅವಕಾಶಗಳಿವೆ," ಎಂದಿದ್ದಾರೆ.
"ನಾವು ಹೊಸ ಋತುವನ್ನು ಎದುರು ನೋಡುತ್ತಿರುವಾಗ, ಕೆಲವು ಅನುಭವಿ ಅಂತಾರಾಷ್ಟ್ರೀಯ ಆಟಗಾರರ ಜೊತೆಗೆ, ಹೆಚ್ಚಿನ ಗುಣಮಟ್ಟದ ದಕ್ಷಿಣ ಆಫ್ರಿಕಾದ ಪ್ರತಿಭೆಗಳನ್ನು ಒಳಗೊಂಡಿರುವ ಆಟಗಾರರ ತಂಡದೊಂದಿಗೆ ಹೋಗಲು ನಾವು ನಿರ್ಧರಿಸಿದ್ದೇವೆ," ಎಂದು ಕುಮಾರ್ ಸಂಗಕ್ಕಾರ ತಿಳಿಸಿದರು.
ಪಾರ್ಲ್ ರಾಯಲ್ಸ್ ಫ್ರಾಂಚೈಸಿಯಿಂದ ಉಳಿಸಿಕೊಂಡಿರುವ 15 ಸದಸ್ಯರ ತಂಡ ಇಲ್ಲಿದೆ.
ದಕ್ಷಿಣ ಆಫ್ರಿಕಾದ ಆಟಗಾರರು
ಡೇವಿಡ್ ಮಿಲ್ಲರ್
ಲುಂಗಿ ಎನ್‌ಗಿಡಿ
ತಬ್ರೈಜ್ ಶಮ್ಸಿ
ಜಾರ್ನ್ ಫಾರ್ಚುಯಿನ್
ಆಂಡಿಲೆ ಫೆಹ್ಲುಕ್ವಾಯೊ
ಡೇನ್ ವಿಲಾಸ್
ವಿಹಾನ್ ಲುಬ್ಬೆ
ಮಿಚೆಲ್ ವ್ಯಾನ್ ಬ್ಯೂರೆನ್
ಫೆರಿಸ್ಕೊ ಆಡಮ್ಸ್
ಕೋಡಿ ಯೂಸುಫ್
ಇವಾನ್ ಜೋನ್ಸ್
ಕ್ವೆನಾ ಮಫಕಾ
ವಿದೇಶಿ ಆಟಗಾರರು
ಜೋಸ್ ಬಟ್ಲರ್
ಜೇಸನ್ ರಾಯ್
ಒಬೆಡ್ ಮೆಕಾಯ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications