For Quick Alerts
ALLOW NOTIFICATIONS  
For Daily Alerts
 

ಕೋವಿಡ್‌ನಿಂದ ಚೇತರಿಸಿಕೊಂಡಿರುವ ಪ್ರಸಿದ್ಧ್ ಮೇ 23ಕ್ಕೆ ತಂಡ ಸೇರ್ಪಡೆ

Pacer Prasidh Krishna recovers from Covid-19, to join India team on May 23
England ಪ್ರವಾಸ ಕೈಗೊಂಡ ಕನ್ನಡದ ಬೌಲರ್ | Oneindia Kannada

ಬೆಂಗಳೂರು: ಟೀಮ್ ಇಂಡಿಯಾದ ಯುವ ವೇಗಿ, ಕನ್ನಡಿಗ ಪ್ರಸಿದ್ಧ್ ಕೃಷ್ಣ ಕೋವಿಡ್-19ನಿಂದ ಚೇತರಿಸಿಕೊಂಡಿದ್ದಾರೆ. ಇಂಗ್ಲೆಂಡ್‌ಗೆ ಪ್ರವಾಸ ಹೋಗಲಿರುವ ಭಾರತೀಯ ತಂಡದಲ್ಲಿ ಮೀಸಲು ಆಟಗಾರರಾಗಿರುವ ಕೃಷ್ಣ ಮೇ 23ಕ್ಕೆ ತಂಡ ಸೇರಿಕೊಳ್ಳಲಿದ್ದಾರೆ. ಬೆಂಗಳೂರಿನಿಂದ ಮುಂಬೈಗೆ ಮೇ 23ರಂದೇ ಪ್ರಯಾಣಿಸಲಿದ್ದಾರೆ.

'ಪ್ರಸಿದ್ಧ್ ಕೃಷ್ಣ ಸದ್ಯ ಕೋವಿಡ್-19ನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಅವರೀಗ ಸದ್ಯ ಬೆಂಗಳೂರಿನ ಅವರ ಮನೆಯಲ್ಲಿದ್ದಾರೆ. ಬೆಂಗಳೂರಿನಿಂದ ಮುಂಬೈಗೆ ಮೇ 23ಕ್ಕೆ ಪ್ರಯಾಣಿಸಲಿದ್ದಾರೆ,' ಎಂದು ಮೂಲವೊಂದು ಐಎಎನ್‌ಎಸ್‌ಗೆ ಮಾಹಿತಿ ನೀಡಿದೆ.

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುವ ಕೃಷ್ಣ ಈ ಬಾರಿಯ ಸೀಸನ್‌ ಮುಂದೂಡಲ್ಪಡುತ್ತಲೇ ಕೋವಿಡ್-19ಗೆ ತುತ್ತಾಗಿದ್ದರು. ಬೇರೆ ಬೇರೆ ನಾಲ್ಕು ಫ್ರಾಂಚೈಸಿಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ 2021ರ ಐಪಿಎಲ್ ಅರ್ಧಕ್ಕೆ ನಿಲ್ಲಿಸಲಾಗಿತ್ತು.

ಇಂಗ್ಲೆಂಡ್‌ಗೆ ಪ್ರವಾಸ ಹೋಲಿರುವ ವಿರಾಟ್ ಕೊಹ್ಲಿ ಪಡೆ ಅಲ್ಲಿ ನ್ಯೂಜಿಲೆಂಡ್ ವಿರುದ್ಧ ಜೂನ್ 18-22ರ ವರೆಗೆ ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಆಡಲಿದೆ. ಬಳಿಕ ಆತಿಥೇಯ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಟೆಸ್ಟ್‌ ಸರಣಿ ಆಗಸ್ಟ್ 4ರಿಂದ ಆರಂಭಗೊಳ್ಳಲಿದೆ.

Story first published: Saturday, May 22, 2021, 16:35 [IST]
Other articles published on May 22, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+