For Quick Alerts
ALLOW NOTIFICATIONS  
For Daily Alerts
 

Pahalgam Terror Attack: ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಬಿಸಿ ಮುಟ್ಟಿಸಿದ ಬಿಸಿಸಿಐ

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಅಮಾಯಕ ಪ್ರವಾಸಿಗರು ಸಾವನ್ನಪ್ಪಿದ್ದಾರೆ. ದಾಳಿಯ ನಂತರ ಇಡೀ ದೇಶದಲ್ಲಿ ದುಃಖ ಮನೆ ಮಾಡಿದೆ. ಉಗ್ರರನ್ನು ಸದೆಬಡಿಯಲು ಭದ್ರತಾ ಪಡೆಗಳು ನಿರಂತರವಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಉಗ್ರರ ದಾಳಿಯ ನಂತರ, ಕೇಂದ್ರ ಸರ್ಕಾರವೂ ಕಾರ್ಯಪ್ರವೃತ್ತವಾಗಿದ್ದು, ನೆರೆಯ ದೇಶ ಪಾಕಿಸ್ತಾನ ವಿರುದ್ಧ ದೊಡ್ಡ ನಿರ್ಧಾರಗಳನ್ನು ತೆಗೆದುಕೊಂಡಿದೆ. ಇವುಗಳಲ್ಲಿ ಅಟ್ಟಾರಿ ಗಡಿ ಚೆಕ್‌ಪೋಸ್ಟ್ ಮುಚ್ಚುವುದು, ಸಿಂಧೂ ಜಲ ಒಪ್ಪಂದವನ್ನು ನಿಲ್ಲಿಸುವುದು ಮತ್ತು ಪಾಕಿಸ್ತಾನಿ ನಾಗರಿಕರಿಗೆ ಭಾರತೀಯ ವೀಸಾ ನೀಡುವುದನ್ನು ನಿಲ್ಲಿಸುವುದು ಸೇರಿವೆ.

ಭಾರತ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಬಿಸಿಸಿಐ) ಕ್ರಿಕೆಟ್ ಸ್ಟ್ರೈಕ್ ನಡೆಸಿದೆ. ಕ್ರೀಡಾ ಪ್ರಸಾರ ವೇದಿಕೆ ಫ್ಯಾನ್‌ಕೋಡ್, ಸೋನಿ ಟೆಲಿವಿಷನ್ ಮತ್ತು ಕ್ರಿಕ್‌ಬಜ್ ಸೇರಿದಂತೆ ಹಲವು ಕ್ರೀಡಾ ವೆಬ್‌ಸೈಟ್‌ಗಳು ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ನ ನೇರ ಪ್ರಸಾರವನ್ನು ನಿಲ್ಲಿಸಲು ನಿರ್ಧರಿಸಿವೆ.

Pahalgam Terror Attack Pakistan Cricket Board has been hit by BCCI

ಏಪ್ರಿಲ್ 24 ರಿಂದ (ಗುರುವಾರ) ಪಿಸಿಎಲ್ ಪಂದ್ಯಗಳನ್ನು ಸ್ಟ್ರೀಮಿಂಗ್ ಮಾಡಲು ಫ್ಯಾನ್‌ಕೋಡ್ ಲಭ್ಯವಿಲ್ಲ. ಈ ನಿರ್ಧಾರದ ನಂತರ, ಪಿಎಸ್ಎಲ್ ನ ಡಿಜಿಟಲ್ ವೀಕ್ಷಕರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗುವ ಸಾಧ್ಯತೆಯಿದೆ. ಇದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಆದಾಯದ ಮೇಲೆ ನೇರ ಪರಿಣಾಮ ಬೀರಲಿದೆ.

ಪಾಕಿಸ್ತಾನ ಸೂಪರ್ ಲೀಗ್ 2025 ರ ಬಗ್ಗೆ ಕ್ರಿಕೆಟ್ ಫ್ಯಾಂಟಸಿ ಅಪ್ಲಿಕೇಶನ್‌ಗಳು ಸಹ ಒಂದು ದೊಡ್ಡ ಹೆಜ್ಜೆ ಇಟ್ಟಿವೆ. ಈಗ ಫ್ಯಾಂಟಸಿ ಬಳಸುವವರು ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಪಂದ್ಯಗಳಿಗಾಗಿ ಅಥವಾ ಅಪ್ಲಿಕೇಶನ್‌ನಲ್ಲಿ ತಮ್ಮ ನೆಚ್ಚಿನ ತಂಡವನ್ನು ರಚಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ಈ ಅಪ್ಲಿಕೇಶನ್‌ಗಳು ಪಿಎಸ್‌ಎಲ್‌ನ ಎಲ್ಲಾ ಪಂದ್ಯಗಳನ್ನು ತಮ್ಮ ಪ್ಲಾಟ್‌ಫಾರ್ಮ್‌ನಿಂದ ತೆಗೆದುಹಾಕಿವೆ.

ಇದಲ್ಲದೆ, ಕ್ರಿಕೆಟ್‌ ಸ್ಕೋರ್ ಅಪ್‌ಡೇಟಿಂಗ್ ಅಪ್ಲಿಕೇಶನ್‌ಗಳಾದ ಕ್ರಿಕ್‌ಬಜ್ ಮತ್ತು ಇಎಸ್‌ಪಿಎನ್ ಕ್ರಿಕ್‌ಇನ್ಫೋ ಕೂಡ ತಮ್ಮ ಅಪ್ಲಿಕೇಶನ್‌ಗಳಿಂದ ಪಿಎಸ್‌ಎಲ್ ಅನ್ನು ತೆಗೆದುಹಾಕಿವೆ. ಇದು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ನೇರ ಪರಿಣಾಮ ಬೀರುತ್ತಿದೆ. ಈ ಮೂಲಕ ಪಿಸಿಬಿಗೆ ಬಿಸಿಸಿಐ ಬಿಸಿ ಮುಟ್ಟಿಸಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮತ್ತು ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಬಹುತೇಕ ಏಕಕಾಲದಲ್ಲಿ ಆಯೋಜಿಸುತ್ತಿರುವುದು ಇದೇ ಮೊದಲು. ಪಿಎಸ್ಎಲ್ ಏಪ್ರಿಲ್ 11 ರಂದು ಪ್ರಾರಂಭವಾಗಿದ್ದು, ಫೈನಲ್ ಪಂದ್ಯವು ಮೇ 18 ರಂದು ನಡೆಯಲಿದೆ. ಇತ್ತ ಐಪಿಎಲ್ ಮಾರ್ಚ್ 22 ರಂದು ಪ್ರಾರಂಭವಾಗಿದ್ದು, ಫೈನಲ್ ಪಂದ್ಯವು ಮೇ 25 ರಂದು ನಡೆಯಲಿದೆ.

Story first published: Friday, April 25, 2025, 16:53 [IST]
Other articles published on Apr 25, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+