ಇಂಗ್ಲೆಂಡ್‌ಗೆ ಹೊರಡೋ ಮುನ್ನ ಪಾಕ್ ತಂಡಕ್ಕೆ ಎರಡೆರಡು ಬಾರಿ ಕೊರೊನಾ ಪರೀಕ್ಷೆ

ಲಾಹೋರ್, ಜೂನ್ 19: ಇಂಗ್ಲೆಂಡ್‌ಗೆ ಪ್ರವಾಸ ಹೊರಡುವ ಮುನ್ನ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರು, ಅಧಿಕಾರಿಗಳು ಎರಡೆರಡು ಬಾರಿ ಕೊರೊನಾವೈರಸ್ ಪರೀಕ್ಷೆಗೆ ಒಳಗಾಗಲಿದ್ದಾರೆ. ಜೂನ್ 28ರಂದು ಪಾಕ್ ತಂಡ ಇಂಗ್ಲೆಂಡ್ ಕಡೆಗಿನ ವಿಮಾನ ಹತ್ತಲಿದೆ. ಇದಕ್ಕೂ 3 ದಿನ ಮುಂಚಿತವಾಗಿ ಕೋವಿಡ್-19 ಪರೀಕ್ಷೆಗೆ ಒಳಗಾಗಲಿದೆ.
ಪಾಕ್ ಆಟಗಾರರು ಮತ್ತು ಸಿಬ್ಬಂದಿಗೆ ಕೊರೊನಾವೈರಸ್ ಮೊದಲ ಪರೀಕ್ಷೆ ಜೂನ್ 22ರ ಮಂಗಳವಾರ ನಡೆಯಲಿದೆ. ಎರಡನೇ ಪರೀಕ್ಷೆ ಜೂನ್ 24ರ ಬುಧವಾರ ನಡೆಯಲಿದೆ. ಪರೀಕ್ಷೆಯ ಬಳಿಕ ತಂಡ ಲಾಹೋರ್‌ನಲ್ಲಿ ಒಟ್ಟು ಸೇರಲಿದೆ. ಅಲ್ಲಿಂದ ಹೊರಡಲಾಗುತ್ತದೆ ಎಂದು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ (ಪಿಸಿಬಿ) ಮೂಲವೊಂದು ತಿಳಿಸಿದೆ.
ಮೊದಲ ಪರೀಕ್ಷೆಯನ್ನು ಆಟಗಾರರಿಗೆ ಮತ್ತು ಅಧಿಕಾರಿಗಳಿಗೆ ಅವರವರ ನಗರ ಮತ್ತು ಪ್ರದೇಶಗಳಲ್ಲಿ ನಡೆಸಲಾಗುತ್ತದೆ. ಬುಧವಾರ ಲಾಹೋರ್‌ನಲ್ಲಿ ಆಟಗಾರರು ಒಟ್ಟು ಸೇರಲಿದ್ದಾರೆ. ಅಲ್ಲಿ ಅವರಿಗೆ ಜೈವಿಕ ಸುರಕ್ಷತೆಯಿರುವ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ. ವಿಮಾನ ಹತ್ತುವ ಮುನ್ನ ಆಟಗಾರರು ಐಸೊಲೇಶನ್‌ನಲ್ಲಿ ಇರಲಿದ್ದಾರೆ,' ಎಂದು ಮೂಲ ತಿಳಿಸಿದೆ.
ಎರಡನೇ ಪರೀಕ್ಷೆ ಲಾಹೋರ್‌ನಲ್ಲೇ ನಡೆಯಲಿದೆ. ಪರೀಕ್ಷೆಯ ವೇಳೆ ಯಾವುದೇ ಆಟಗಾರ ಅಥವಾ ಅಧಿಕಾರಿಗಳಿಗೆ ಕೊರೊನಾವೈರಸ್ ಸೋಂಕು ಪತ್ತೆಯಾದರೆ ಅವರನ್ನು ಇಂಗ್ಲೆಂಡ್ ಪ್ರವಾಸಕ್ಕೆ ಕರೆದೊಯ್ಯಲಾಗುವುದಿಲ್ಲ ಎಂದು ಮೂಲ ಮಾಹಿತಿ ನೀಡಿದೆ.
ಇಂಗ್ಲೆಂಡ್‌ಗೆ ಪಾಕಿಸ್ತಾನ ತಂಡದ ಪ್ರವಾಸ ಸರಣಿಯು 3 ಟೆಸ್ಟ್ ಪಂದ್ಯಗಳನ್ನು, 3 ಟಿ20ಐ ಪಂದ್ಯಗಳನ್ನು ಒಳಗೊಂಡಿರಲಿದೆ. ಆರಂಭಿಕ ಟೆಸ್ಟ್ ಪಂದ್ಯ ಜುಲೈ 30ರಂದು ಲಂಡನ್‌ನ ಲಾರ್ಡ್ಸ್ ಸ್ಟೇಡಿಯಂನಲ್ಲಿ ನಡೆಯಲಿದೆ. ಟಿ20ಐ ಸರಣಿ ಆಗಸ್ಟ್ 29ರಿಂದ ಆರಂಭಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications