ಆಸ್ಟ್ರೇಲಿಯಾದ ಬೀದಿಯಲ್ಲಿ ವಾಸ, ಪಾತ್ರೆ ತೊಳೆಯುವ ಕೆಲಸ ಮಾಡಿದ ಪಾಕ್ ಹಾಕಿ ಆಟಗಾರರು
ಪಾಕಿಸ್ತಾನ ತಂಡದ ಪರಿಸ್ಥಿತಿಯ ಬಗ್ಗೆ ಈಗಾಗಲೇ ವರದಿಗಳು ಬಂದಿವೆ. ಈಗ ಪಾಕ್ ಹಾಕಿ ತಂಡದ ಆಟಗಾರ ಶಕೀಲ್ ಅಬ್ಬಾಸಿ ಸಹ, ತಮ್ಮ ಅನುಭವವನ್ನು ತೆರೆದಿಟ್ಟಿದ್ದಾರೆ. ಇವರು ಆಸ್ಟ್ರೇಲಿಯಾ ಪ್ರವಾಸದಲ್ಲಿ ಅನುಭವಿಸಿದ ಕಷ್ಟಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ತಂಡ ಅನುಭವಿಸಿದ ಸಮಸ್ಯೆಗಳ ಬಗ್ಗೆ ಮಾತನಾಡಿರುವ ಶಕೀಲ್ ಅಬ್ಬಾಸಿ, ತಂಡ ಮೂಲಭೂತ ಸಮಸ್ಯೆಗಳಿಂದ ಬಳಲಿತು. ತಂಡಕ್ಕೆ ವಸತಿ ಸಮಸ್ಯೆ ಉದ್ಭವಿಸಿದ್ದರಿಂದ ಬೀದಿ ಬೀದಿಗಳಲ್ಲಿ ಅಲೆದಾಡ ಬೇಕಾಯಿತು. ಅಲ್ಲದೆ ಪಂದ್ಯಕ್ಕೂ ಮುನ್ನ ನಾವು ಮಾಡಿದ ಅಡುಗೆಯ ಪಾತ್ರೆಗಳನ್ನು ನಾವೇ ತೊಳೆದು ಅಂಗಳಕ್ಕೆ ಇಳಿಯಬೇಕಿತ್ತು. ಪಾಕಿಸ್ತಾನ ಹಾಕಿ ಫೆಡರೇಷನ್ ಸುಳ್ಳಿನ ಮೇಲೆ ಸುಳ್ಳು ಹೇಳುತ್ತಿದೆ ಎಂದು ಕಿಡಿ ಕಾರಿದ್ದಾರೆ.

ಈಗಿನ ಹಾಕಿ ಫೆಡರೇಷನ್ ಜೊತೆಗೆ ನಾವು ಕೆಲಸ ಮಾಡಲು ಸಾಧ್ಯವಿಲ್ಲ. ನಾವು ಹಾಕಿ ಸ್ಟಿಕ್ ಹಿಡಿದು ಅಂಗಳಕ್ಕೆ ಇಳಿಯುವ ಮೊದಲು, ಅಡುಗೆ ಮನೆ, ಪಾತ್ರೆಗಳನ್ನು ಕ್ಲೀನ್ ಮಾಡಿ ಹೋಗಬೇಕಾಗಿತ್ತು. ಹೀಗಿರುವಾಗ ಸಂಸ್ಥೆ ನಮ್ಮಿಂದ ಯಾವ ಫಲಿತಾಂಶ ಬಯಸುತ್ತಿದೆ ಎಂದು ಶಕೀಲ್ ಅಬ್ಬಾಸಿ ಪ್ರಶ್ನೆ ಮಾಡಿದ್ದಾರೆ.
ಬೀದಿಯಲ್ಲಿ ವಾಸ
ಆಸ್ಟ್ರೇಲಿಯಾದಲ್ಲಿ ರಾಷ್ಟ್ರೀಯ ತಂಡದ ಹೋಟೆಲ್ ವಸತಿ ವ್ಯವಸ್ಥೆ ಮಾಡಲು ಸರ್ಕಾರಿ ಸ್ವಾಮ್ಯದ ಪಾಕಿಸ್ತಾನ ಕ್ರೀಡಾ ಮಂಡಳಿ (ಪಿಎಸ್‌ಬಿ) 10 ಮಿಲಿಯನ್ ರೂಪಾಯಿಗಳಿಗೂ ಹೆಚ್ಚು ಹಣವನ್ನು ನೀಡಿದ್ದಾಗ ಹೇಳಿದ ಮೇಲೆ ಈ ಬಗ್ಗೆ ಟೀಕೆಗಳು ಆರಂಭವಾದವು. ಪಾಕಿಸ್ತಾನ ಹಾಕಿ ತಂಡವು ಸಿಡ್ನಿಯಿಂದ ಕ್ಯಾನ್‌ಬೆರಾಗೆ ಹೋಗುವ ಮುನ್ನ ಸುಮಾರು 13 ರಿಂದ 14 ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲಿ ಕಾಯಬೇಕಾಯಿತು. ಅಲ್ಲದೆ ಹೋಟೆಲ್‌ಗೆ ಭೇಟಿ ನೀಡಿದಾಗಲೂ ಗೊಂದಲ ಇತ್ತು ಎಂದು ತಿಳಿದು ಬಂದಿದೆ.
ಹೋಟೆಲ್‌ಗಳಿಗೆ ರೂಮ್ ಬುಕ್ ಮಾಡಲು ಮೊದಲೇ ಹಣವನ್ನು ಸಹ ನೀಡಿರಲಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ. ಆಟಗಾರರು ಗಂಟೆಗಳ ಕಾಲ ರಸ್ತೆಯಲ್ಲಿಯೇ ಕಾದು ಕಾದು ಕೂಡಬೇಕಾಯಿತು. ಇದಾದ ಬಳಿಕ ಆಟಗಾರರು ಮಾರದಿನ ಮಧ್ಯಾಹ್ನ ಆಸ್ಟ್ರೇಲಿಯಾ ವಿರುದ್ಧ ಅಂಗಳಕ್ಕೆ ಇಳಿಯಬೇಕಿತ್ತು. ಈ ಪಂದ್ಯದಲ್ಲಿ ಪಾಕ್ 3-2 ಗೋಲುಗಳಿಂದ ಸೋಲು ಕಂಡಿತು. ಪಾಕ್ ಆಸ್ಟ್ರೇಲಿಯಾಕ್ಕೆ 13 ದಿನ ಪ್ರಯಾಣ ಬೆಳೆಸಿತ್ತು. ಆದರೆ 10 ದಿನಗಳಿಗೆ ರೂಮ್ ವ್ಯವಸ್ಥೆ ಮಾಡಲಾಗಿತ್ತು. ಉಳಿದ ದಿನಗಳಲ್ಲಿ ಆಟಗಾರರು ಎಲ್ಲಿ ಉಳಿಯಬೇಕಾಗಿತ್ತು ಎಂಬ ಪ್ರಶ್ನೆಯನ್ನೇ ಆಟಗಾರರು ಕೇಳಿದ್ದಾರೆ.
ಪಿಎಸ್‌ಬಿ ನಿರ್ದೇಶಕ ನೂರ್ ಉಲ್ ಶಬಾ ಅವರು ಈ ಬಗ್ಗೆ ಮಾಧ್ಯಮಗಳಿಗೆ ವರದಿ ನೀಡಿದ್ದು, ಆಟಗಾರರ ಸಮಸ್ಯೆಗಳನ್ನು ಆಲಿಸಿ ವಿಸ್ತೃತ ವರದಿಯನ್ನು ಪ್ರಧಾನಿ ಅವರಿಗೆ ಸಲ್ಲಿಸಲಾಗುತ್ತದೆ. ಈ ಬಗ್ಗೆ ತನಿಖೆ ಸಹ ನಡೆಯಲಿದೆ ಎಂದು ತಿಳಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಆದ ತೊಂದರೆಯ ಬಗ್ಗೆ ಮಾತನಾಡದಂತೆ ಪಿಎಚ್‌ಎಸ್ ಆಟಗಾರರಿಗೆ ಕಟ್ಟೆಚ್ಚರಿಕೆ ನೀಡಿದೆ.
ನಮ್ಮ ತಂಡ ಬಲಿಷ್ಠವಾಗಿದೆ. ಆದರೆ ನಮಗೆ ಉತ್ತಮ ತರಬೇತಿಯ ಅವಶ್ಯಕತೆ ಇದೆ. ನಮ್ಮ ತಂಡಕ್ಕೆ ವಿದೇಶಿ ಕೋಚ್ ಅವಶ್ಯಕತೆ ಇದೆ ಎಂದು ಶಕೀಲ್ ಅಬ್ಬಾಸಿ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications