ತಮ್ಮ ವಿವಾಹಕ್ಕೆ ಭಾರತೀಯ ಆಟಗಾರರನ್ನು ಆಹ್ವಾನಿಸಲಿರುವ ಪಾಕ್ ಕ್ರಿಕೆಟಿಗ

ಕರಾಚಿ, ಆಗಸ್ಟ್ 05: ಪಾಕಿಸ್ತಾನ ತಂಡದ ವೇಗದ ಬೌಲರ್ ಹಸನ್ ಅಲಿ ಭಾರತೀಯ ವಧುವನ್ನು ವರಿಸಲಿರುವುದು ಖಾತ್ರಿಯಾಗಿದ್ದು, ಸೆಪ್ಟೆಂಬರ್ 20ರಂದು ದುಬೈನಲ್ಲಿ ನಡೆಯಲಿರುವ ವಿವಾಹ ಸಮಾರಂಭಕ್ಕೆ ಭಾರತೀಯ ಕ್ರಿಕೆಟಿಗರನ್ನೂ ಆಹ್ವಾನಿಸುವುದಾಗಿ ಹೇಳಿಕೊಂಡಿದ್ದಾರೆ.
ಇದಕ್ಕೂ ಮುನ್ನ ತಮ್ಮ ಮದುವೆ ಸುದ್ದಿ ಹೊರ ಬೀಳುತ್ತಿದ್ದಂತೇ ಹೇಳಿಕೆ ನೀಡಿ, ಇನ್ನೂ ಖಾತ್ರಿಯಾಗಿಲ್ಲ ಎರಡೂ ಮನೆ ಕಡೆಯಿಂದ ಮಾತೂಕತೆ ನಡೆಯುತ್ತಿದೆ ಎಂದಿದ್ದ ಅಲಿ, ಇದೀಗ ಭಾರತೀಯ ಕ್ರಿಕೆಟಿಗರನ್ನು ಆಹ್ವಾನಿಸುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ನಿರ್ದಿಷ್ಟವಾಗಿ ಯಾರನ್ನು ಆಹ್ವಾನಿಸುತ್ತಿರುವುದಾಗಿ ಅವರು ಬಾಯ್ಬಿಟ್ಟಿಲ್ಲ.
"ವಿವಾಹ ಸಮಾರಂಭಕ್ಕೆ ಭಾರತೀಯ ಕ್ರಿಕೆಟ್ ತಂಡದ ಆಟಗಾರರನ್ನು ಆಹ್ವಾನಿಸುತ್ತೇನೆ. ನಾವೆಲ್ಲರೂ ಕ್ರಿಕೆಟ್ ಆಟಗಾರರು," ಎಂದು ಸ್ಥಳೀಯ ಪತ್ರಿಕೆ ಉರ್ದು ಎಕ್ಸ್‌ಪ್ರೆಸ್‌ಗೆ ಅಲಿ ಹೇಳಿಕೆ ನೀಡಿದ್ದಾರೆ.
"ದುಬೈನಲ್ಲಿ ನಡೆಯಲಿರುವ ವಿವಾಹ ಸಮಾರಂಭಕ್ಕೆ ಭಾರತೀಯ ಕ್ರಿಕೆಟಿಗರು ಆಗಮಿಸಿದರೆ ಬಹಳ ಸಂತಸವಾಗಲಿದೆ. ಸ್ಪರ್ಧೆ ಏನಿದ್ದರೂ ಕ್ರಿಕೆಟ್ ಮೈದಾನದ ಒಳಗೆ ಹೊರಗಲ್ಲ. ಅಂತಿಮವಾಗಿ ನಾವೆಲ್ಲರೂ ವೃತ್ತಿಪರ ಕ್ರಿಕೆಟಿಗರು. ಸಂಭ್ರಮವನ್ನು ಹಂಚಿಕೊಳ್ಳಬೇಕು," ಎಂದು ಹೇಳಿದ್ದಾರೆ.
ಹಸನ್ ಮತ್ತು ಶಮಿಯಾ ಅವರ ವಿವಾವ ದುಬೈನ ಅಟ್ಲಾಂಟಿಸ್ ಪಾಮ್ ಹೋಟೆಲ್‌ನಲ್ಲಿ ನಡೆಯಲಿದ್ದು, ಕುಟುಂಬ ಸದಸ್ಯರ ಸಮ್ಮುಖದಲ್ಲಿ ವಿವಾಹ ನಡೆಯಲಿದೆ. ಈ ವಿಚಾರವನ್ನು ಶಮಿಯಾ ಅವರ ತಂದೆ ಲಿಯಾಖತ್ ಅಲಿ ಈ ಮೊದಲು ಖಾತ್ರಿ ಪಡಿಸಿದ್ದರು.
ಮಾನವ್ ರಚನಾ ಯೂನಿವರ್ಸಿಟಿಯಲ್ಲಿ ಏರೊನಾಟಿಕಲ್ಸ್‌ನಲ್ಲಿ ಬಿ.ಟೆಕ್ ಪದವಿ ಪಡೆದಿರುವ ಶಮಿಯಾ, ಸದ್ಯ ಎಮಿರೇಟ್ಸ್ ವಿಮಾನಯಾನ ಸಂಸ್ಥೆಯಲ್ಲಿ ಫ್ಲೈಟ್ ಎಂಜಿನೀಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ದುಬೈನಲ್ಲಿ ನೆಲೆಸಿದ್ದಾರೆ. ಆದರೆ ಅವರ ಕುಟುಂಬ ಸದಸ್ಯರು ದಿಲ್ಲಿಯಲ್ಲಿ ನೆಲೆಸಿದ್ದಾರೆ.
ಪಾಕಿಸ್ತಾನದ ಕ್ರಿಕೆಟಿಗರು ಭಾರತೀಯ ವಧುವನ್ನು ವರಿಸುತ್ತಿರುವುದು ಇದು ಮೊದಲೇನಲ್ಲ. ಪಾಕ್ ಕ್ರಿಕೆಟ್ ತಂಡದ ಮಾಜಿ ದಿಗ್ಗಜರಾದ ಜಾಹಿರ್ ಅಬ್ಬಾಸ್ ಮತ್ತು ಮೊಹ್ಸಿನ್ ಖಾನ್ ಈ ಪಟ್ಟಿಯಲ್ಲಿ ಮುಂದಿದ್ದಾರೆ. ಇನ್ನು ಇತ್ತೀಚೆಗಷ್ಟೇ ನಡೆದ ವಿಶ್ವಕಪ್ ಟೂರ್ನಿಯೊಂದಿಗೆ ನಿವೃತ್ತಿ ಘೋಷಿಸಿದ ಸ್ಟಾರ್ ಆಲ್‌ರೌಂಡರ್ ಶೊಯೇಬ್ ಮಲಿಕ್, ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಝಾ ಅವರೊಟ್ಟಿಗೆ 2010ರ ಏಪ್ರಿಲ್ 12ರಂದು ವಿವಾಹ ಬಂಧನಕ್ಕೆ ಕಾಲಿಟ್ಟಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications