ಭಾರತದೆದುರು ಪಾಕ್ ಸೋಲಲು ಅಸಲಿ ಕಾರಣವಿದು: ಪಾಕ್ ಅಭಿಮಾನಿಗಳು

ಮ್ಯಾನ್ಚೆಸ್ಟರ್, ಜೂನ್ 17: ಭಾರತದ ವಿರುದ್ಧ ಏಳನೇ ವಿಶ್ವಕಪ್ ಪಂದ್ಯದಲ್ಲೂ ಸೋತು ಪಾಕಿಸ್ತಾನ ತಂಡ ಸೋಲಿನ ಸಂಖ್ಯೆಯನ್ನು 6ರಿಂದ 7ಕ್ಕೆ ಏರಿಸಿಕೊಂಡಿದೆ. ಗೆಲ್ಲೋದು ಗರ್ವ-ಗೌರವದ ಸಂಕೇತವೆಂದು ಭಾವಿಸಲಾಗಿದ್ದ ಈ ಪಂದ್ಯದಲ್ಲಿ ಕೊಹ್ಲಿ ಬಳಗ ಗೆದ್ದು ಬೀಗಿದ್ದು ಭಾರತೀಯರಿಗೆ ಹೆಮ್ಮೆಯ ವಿಚಾರವೇ. ಆದರೆ ಪಾಕ್ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ?
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಭಾರತ-ಪಾಕ್ ತಂಡಗಳ ಕ್ರಿಕೆಟ್ ಹಣಾಹಣಿಯ ವೇಳೆ ಯಾವ ತಂಡ ಸೋತರು ಒಂದಿಷ್ಟು ಟಿವಿಗಳು ಮುರಿದು ಹೋಗೋದು, ಗಾಜಿನ ಕಿಟಕಿಗಳು ಹಾಳಾಗೋದು, ಕೈಗೆ ಸಿಕ್ಕ ವಸ್ತುಗಳು ಸಿಟ್ಟಿಗೆ ಅಹುತಿಯಾಗೋದು ಇದ್ದೇಇದೆ. ಪಾಕ್ ಸೋತರೆ ಪಾಕ್ ಅಭಿಮಾನಿಗಳು, ಭಾರತ ಸೋತರೆ ಭಾರತದ ಅಭಿಮಾನಿಗಳ ಸಿಟ್ಟು ಹೀಗೆಲ್ಲ ಹೊರಬೀಳುತ್ತವೆ.
ಭಾರತ vs ಪಾಕ್ ಪಂದ್ಯದಲ್ಲಿ ಪಾಕ್ ಸೋಲಿಗೆ ಅಭಿಮಾನಿಗಳ ಪ್ರತಿಕ್ರಿಯೆಯ ಕೆಲ ಟ್ವೀಟ್‌ಗಳು ಕೆಳಗಿವೆ.
ಸೋಲಿಗೆ ಮತ್ತೊಂದು ನೆಪ
ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಪಾಕ್ 7ನೇ ಸೋಲಿನ ಮುಖಭಂಗ ಅನುಭವಿಸಿದಾಗಲೂ ಪಾಕ್ ಅಭಿಮಾನಿಗಳು ಸಿಡುಕು ಪ್ರದರ್ಶಿಸಿದ್ದರು. ಸೋಲಿಗೆ ಇಂಥದ್ದೆಲ್ಲಾ ಕಾರಣ ಅಂತ ಪಾಕ್ ತಂಡದ ಹುಳುಕುಗಳತ್ತ ಬೊಟ್ಟು ಮಾಡಿದ್ದರು. ಪಾಕ್ ಅಭಿಮಾನಿಗಳ ಪಾಲಿಗೆ ತಮ್ಮ ನೆಚ್ಚಿನ ತಂಡದ ಸೋಲಿಗೆ ಮತ್ತೊಂದು ಕಾರಣ ಸಿಕ್ಕಿದೆ.
ಬೇಜಾವಾಬ್ದಾರಿಯ ವರ್ತನೆ
ಭಾರತದ ವಿರುದ್ಧ ಮಹತ್ವದ ಪಂದ್ಯವಿದ್ದರೂ ಹಿಂದಿನ ರಾತ್ರಿ ಪಾಕ್ ಕ್ರಿಕೆಟಿಗರು ಇಂಗ್ಲೆಂಡ್‌ನ ಶಿಶಾ ಕೇಫ್‌ನಲ್ಲಿ ಕಳೆದಿದ್ದಾರೆ. ಬೇಜಾವಾಬ್ದಾರಿಯಿಂದ ವರ್ತಿಸಿದ್ದಾರೆ. ತಂಡದ ಸೋಲಿಗೆ ಇದೇ ಕಾರಣ ಎಂದು ಪಾಕ್ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅವರ ದೇಸಿ ಕ್ರಿಕೆಟಿಗರ ಮೇಲೆ ಕಿಡಿ ಕಾರುತ್ತಿದ್ದಾರೆ. ಇತ್ತಂಡಗಳ ಮಹತ್ವದ ಈ ಪಂದ್ಯದಲ್ಲಿ ಭಾರತ (ಡಕ್ವರ್ಥ್ ಲೂಯೀಸ್ ನಿಯಮದ ಆಧಾರದಲ್ಲಿ) 89 ರನ್ ಜಯ ಗಳಿಸಿತ್ತು.
ಮಿರ್ಝಾ ಜೊತೆ ಮಲಿಕ್
ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ದೂರುವ ಪ್ರಕಾರ, ಪಾಕಿಸ್ತಾನ ಅಲ್ ರೌಂಡರ್ ಶೋಯೆಬ್ ಮಲಿಕ್ ಮತ್ತು ಅವರ ಪತ್ನಿ, ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಝಾ ಭಾರತದ ವಿರುದ್ಧದ ಪಂದ್ಯಕ್ಕೂ ಹಿಂದಿನ ರಾತ್ರಿ ಕೆಫೆಯಲ್ಲಿ ಕಾಣಿಸಿಕೊಂಡಿದ್ದರು. ಇವರ ಜೊತೆ ಪಾಕ್ ಕ್ರಿಕೆಟಿಗರಾದ ವಹಾಬ್ ರಿಯಾಝ್ ಮತ್ತು ಇಮಾಮ್ ಉಲ್ ಹಕ್ ಕೂಡ ಇದ್ದರು. ಪ್ರಮುಖ ಪಂದ್ಯವಿದ್ದಾಗಲೂ ಪಾಕ್ ಕ್ರಿಕೆಟಿಗರು ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ತಂಡದ ಸೋಲಿಗೆ ಇಂಥ ಹುಂಬತನವೇ ಕಾರಣ ಎಂದು ಪಾಕ್ ಅಭಿಮಾನಿಗಳು ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ. ಇಲ್ಲಿ ಮಿರ್ಝಾ ಟ್ವೀಟ್ ಕೂಡ ಇದೆ.
ಪಾಕ್ ಅಭಿಮಾನಿಗಳ ಬೇಸರ
ಮ್ಯಾನ್ಚೆಸ್ಟರ್‌ನ ವಿನ್ಸ್‌ಲೋ ರಸ್ತೆಯಲ್ಲಿರುವ ಹೊಟೇಲ್‌ನಲ್ಲಿ ಶೋಯೆಬ್ ಮಲ್ಲಿಕ್ ಅವರು ಶಿಶಾ (ದೂಮಗೊಳವೆ) ಸೇದುತ್ತಿರುವುದನ್ನು ನೋಡಿದ್ದೇವೆ. ಇನ್ನಿತರ ಆಟಗಾರರು ಬರ್ಗರ್, ಪಿಝ್ಝಾದಂತ ಜಂಕ್ ಫುಡ್‌ಗಳನ್ನು ತಿನ್ನುತ್ತ ಮೈ ಮರೆತಿದ್ದರು ಎಂದು ಕೆಲ ಪಾಕ್ ಕ್ರಿಕೆಟ್ ಅಭಿಮಾನಿಗಳು ದೂರಿದ್ದಾರೆ. ಟ್ವಿಟರ್‌ನಲ್ಲಿ ಈ ಬಗ್ಗೆ ಪಾಕ್ ಅಭಿಮಾನಿಗಳು ಬೇಸರ ತೋರಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications