ವಿಶ್ವಕಪ್: ಇಂಡೊ-ಪಾಕ್ ಕದನಕ್ಕೂ ಮುನ್ನ ಭಾರತವನ್ನು ಕೆಣಕಿದ ಪಾಕಿಸ್ತಾನ!

ಲಂಡನ್, ಜೂನ್ 11: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್‌ನ 12ನೇ ಆವೃತ್ತಿಯ ಟೂರ್ನಿಯಲ್ಲಿ ಬಹು ನಿರೀಕ್ಷಿತ ಇಂಡೊ-ಪಾಕ್ ಪಂದ್ಯ ಸಮೀಪಿಸುತ್ತಿದ್ದು, ಇದೇ ವೇಳೆ ಪಾಕಿಸ್ತಾನದ ಟಿ.ವಿ ಚಾನಲ್ ಒಂದು ಭಾರತವನ್ನು ಕೆಣಕುವ ಕೆಲಸ ಮಾಡಿದೆ.
ವಿಶ್ವಕಪ್: ಬಾಂಗ್ಲಾದೇಶ vs ಶ್ರೀಲಂಕಾ ಪಂದ್ಯದ ಲೈವ್ ಸ್ಕೋರ್ ಕಾರ್ಡ್
ಪಾಕಿಸ್ತಾನದಲ್ಲಿ ವಿಶ್ವಕಪ್ ಟೂರ್ನಿಯನ್ನು ನೇರ ಪ್ರಸಾರ ಮಾಡುತ್ತಿರುವ ಟಿ.ವಿ ಚಾನಲ್ ಜಝ್ ಟಿವಿ, ಇಂಡೊ-ಪಾಕ್ ಪಂದ್ಯದ ಜಾಹೀರಾತಿನಲ್ಲಿ ಭಾರತದ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಅಣಕವಾಡಿದೆ. ಜಝ್ ಟಿ.ವಿ ಬಿಡುಗಡೆ ಮಾಡಿರುವ 33 ಸೆಕೆಂಡ್‌ಗಳ ಈ ಜಾಹೀರಾತಿನಲ್ಲಿ ಅಭಿನಂದನ್ ಅವರಂತೆ ಮೀಸೆ ಬಿಟ್ಟ ವ್ಯಕ್ತಿಯೊಬ್ಬ ಭಾರತ ಕ್ರಿಕೆಟ್ ತಂಡದ ಸಮವಸ್ತ್ರವನ್ನು ಹೋಲುವ ಜರ್ಸಿ ತೊಟ್ಟು ಕಾಣಿಸಿಕೊಂಡಿದ್ದಾನೆ.
ಮಿಗ್ ವಿಮಾನದಲ್ಲಿ ಪಾಕ್ ಗಡಿಯೊಳಗೆ ನುಗ್ಗಿ ಅತ್ಯಾಧುನಿಕ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದ ವಿಂಗ್ ಕಮಾಂಡರ್ ಅಭಿನಂದನ್ ಬಳಿಕ ಪಾಕಿಸ್ತಾನ ಸೇನೆಯಲ್ಲಿ ಬಂಧಿಯಾಗಿದ್ದರು. ಈ ಸಂದರ್ಭದಲ್ಲಿ ಅವರ ಹಲವು ವಿಡಿಯೊಗಳು ಬಿಡುಗಡೆಯಾಗಿದ್ದವು. ಈ ವಿಡಿಯೊ ಒಂದರಲ್ಲಿ ಪಾಕ್ ಸೇನೆಯ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವ ಅಧಿಕಾರ ನನಗಿಲ್ಲ. ನಾನು ಹೇಳುವುದಿಲ್ಲ ಎಂದು ತಮ್ಮ ಹೆಸರು ಮತ್ತು ತಮ್ಮ ಗ್ರೇಡ್ ಕುರಿತಾಗಿ ಅಷ್ಟೇ ಮಾಹಿತಿ ನೀಡಿದ್ದ ಅಭಿನಂದನ್, ಪಾಕ್ ಅಧಿಕಾರಿಗಳು ನೀಡಿದ್ದ ಚಹಾ ಚೆನ್ನಾಗಿದೆ ಎಂದು ಹೇಳಿದ್ದರು.
ಅಭಿನಂದನ್ ಹೋಲುವ ವ್ಯಕ್ತಿಯನ್ನು ಬಳಸಿ ಜಾಹೀರಾತು ಮಾಡಿರುವ ವಿಡಿಯೊಗಾಗಿ ಈ ಲಿಂಕ್ ಕ್ಲಿಕ್ ಮಾಡಿ https://twitter.com/ajaynewsman/status/1138318807573979137
ಇದೀಗ ಈ ಅಂಶವನ್ನೇ ಬಳಸಿಕೊಂಡು ಭಾರತವನ್ನು ಕೆಣಕುವಂತಹ ಜಾಹೀರಾತನ್ನು ಪಾಕಿಸ್ತಾನದ ಟಿ.ವಿ ಚಾನಲ್ ಬಿಡುಗಡೆ ಮಾಡಿದೆ. ಜಾಹೀರಾತಿನಲ್ಲಿ ಭಾರತ ತಂಡವನ್ನು ಕೇಳುವಂತೆ ಅಭಿನಂದನ್ ಅವರನ್ನು ಹೋಲುವ ವ್ಯಕ್ತಿಗೆ ಟಾಸ್ ಗೆದ್ದರೆ ಏನು ಮಾಡುತ್ತೀರಿ? ಎಂದು ಮೊದಲು ಪ್ರಶ್ನಿಸಲಾಗುತ್ತದೆ. ಇದಕ್ಕೆ ಅಭಿನಂದನ್ ಅವರನ್ನು ಹೋಲುವ ವ್ಯಕ್ತಿ 'ಇದನ್ನು ನಾನು ಹೇಳುವಂತಿಲ್ಲ' ಎನ್ನುತ್ತಾರೆ. ಬಳಿಕ ಟೀಮ್ ಇಂಡಿಯಾದ ಪ್ಲೇಯಿಂಗ್ 11 ಹೇಗಿದೆ? ಎಂಬ ಪ್ರಶ್ನೆಗೂ 'ನಾನು ಹೇಳುವಂತಿಲ್ಲ' ಎಂದು ಉತ್ತರಿಸುತ್ತಾರೆ. ಬಳಿಕ ಚಹಾ ಹೇಗಿದೆ ಎಂದು ಕೇಳಿದಾಗ ಚೆನ್ನಾಗಿದೆ ಎಂದು ಉತ್ತರಿಸಿ ಕಪ್ ತೆಗೆದುಕೊಂಡು ಹೋಗುವಾಗ, ಕಪ್ ಎಲ್ಲಿಗೆ ಒಯ್ಯುತ್ತಿದ್ದೀರಿ? ಕಪ್ ನಮ್ಮದು ಎಂದು ಈ ಬಾರಿ ವಿಶ್ವಕಪ್‌ನಲ್ಲಿ ಕಪ್ ಗೆಲ್ಲೋದು ಪಾಕಿಸ್ತಾನ ತಂಡ ಎಂದು ಬಿಂಬಿಸಲಾಗಿದೆ.
ಭಾರತ ತಂಡ 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದು, ಪಾಕಿಸ್ತಾನ ವಿರುದ್ಧ ಜೂನ್ 16ರಂದು ಮ್ಯಾಂಚೆಸ್ಟರ್‌ನಲ್ಲಿ ಪೈಪೋಟಿ ನಡೆಸಲಿದೆ. ಅಂದಹಾಗೆ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಪಾಕಿಸ್ತಾನ ವಿರುದ್ಧ ಅದ್ಭುತ ದಾಖಲೆ ಹೊಂದಿದ್ದು, 1992ರಿಂದ ಈವರೆಗೆ ಆಡಿದ ಒಟ್ಟು 6 ಪಂದ್ಯಗಳನ್ನು ಗೆದ್ದು ಬೀಗಿದೆ. ಇದೀಗ ಪಾಕ್ ವಿರುದ್ಧ ವಿಶ್ವಕಪ್‌ನಲ್ಲಿ ಅಜೇಯ ಗೆಲುವಿನ ಓಟವನ್ನು ಮುಂದುವರಿಸುವುದು ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡದ ಲೆಕ್ಕಾಚಾರವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications