For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನದ ವಿರುದ್ಧದ ಟಿ20 ಸರಣಿಗೆ ಅಫ್ಘಾನಿಸ್ತಾನದ ಬಲಿಷ್ಠ ತಂಡ ಪ್ರಕಟ: ಮರಳಿದ ಸ್ಟಾರ್ ಕ್ರಿಕೆಟಿಗ

Pak vs Afghan t20 series: Rashid Khan led Afghanistan squad announced for T20 series against Pakistan

ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ತಂಡಗಳು ಮೂರು ಪಂದ್ಯಗಳ ಟಿ20 ಸರಣಿಗೆ ಸಜ್ಜಾಗಿದ್ದು ಮಾರ್ಚ್ 24ರಿಂದ ಈ ಸರಣಿ ಆರಂಭವಾಗಲಿದೆ. ಈ ಸರಣಿಗಾಗಿ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ಎಸಿಬಿ) 17 ಸದಸ್ಯರನ್ನು ಒಳಗೊಂಡ ಬಲಿಷ್ಠ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಿಕೊಳ್ಳಲಾಗಿದೆ.

ಅನುಭವಿ ಆಟಗಾರ ಮಾಜಿ ನಾಯಕ ಮೊಹಮ್ಮದ್ ನಬಿ ತಂಡದಲ್ಲಿ ಮತ್ತೆ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಮತ್ತೊಂದೆಡೆ 21ರ ಹರೆಯದ ಅನ್‌ಕ್ಯಾಪ್‌ಡ್ ಬ್ಯಾಟರ್ ಸಾದಿಕುಲ್ಲಾ ಅಟಲ್ ಈ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಎದುರು ನೋಡುತ್ತಿದ್ದಾರೆ.

ಕಳೆದ ತಿಂಗಳು ಯುಎಇ ವಿರುದ್ಧದ ಟಿ20 ಸರಣಿಯಲ್ಲಿ ಅಫ್ಘನ್ ಪರ ಆಡಿದ್ದ ಅನುಭವಿ ಬ್ಯಾಟರ್‌ಗಳಾದ ರಹಮತ್ ಶಾ ಮತ್ತು ಹಜರತುಲ್ಲಾ ಝಜೈ ಅವರನ್ನು ತಂಡದಿಂದ ಕೈಬಿಡಲಾಗಿದೆ. ಇನ್ನು ಜಹೀರ್ ಖಾನ್, ನಿಜತ್ ಮಸೂದ್ ಹಾಗೂ ನಂಗ್ಯಾಲ್ ಖರೋಟಿ ಅವರನ್ನು ಮೀಸಲು ಆಟಗಾರರಾಗಿ ತಂಡದೊಂದಿಗೆ ಇರಲಿದ್ದಾರೆ. ಪಾಕಿಸ್ತಾನ ಹಾಗೂ ಅಪ್ಘಾನಿಸ್ತಾನ ತಂಡಗಳ ಮಧ್ಯೆ ಮಾರ್ಚ್ 25ರಿಂದ 29ರವರೆಗೆ ಮೂರು ಪಂದ್ಯಗಳ ಟಿ20 ಸರಣಿ ಆಯೋಜನೆಯಾಗಲಿದ್ದು ಶಾರ್ಜಾದ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಸರಣಿಯ ಪಂದ್ಯಗಳು ನಡೆಯಲಿದೆ.

ಪಾಕಿಸ್ತಾನ ವಿರುದ್ಧದ ಟಿ20 ಸರಣಿಗಾಗಿ ಆಯ್ಕೆಯಾದ ಅಫ್ಘಾನಿಸ್ತಾನ ತಂಡ: ರಶೀದ್ ಖಾನ್ (ನಾಯಕ), ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಝದ್ರಾನ್, ಉಸ್ಮಾನ್ ಘನಿ, ಸೇದಿಕುಲ್ಲಾ ಅಟಲ್, ನಜೀಬುಲ್ಲಾ ಜದ್ರಾನ್, ಅಫ್ಸರ್ ಝಜೈ, ಕರೀಂ ಜನತ್, ಮೊಹಮ್ಮದ್ ನಬಿ, ಅಜ್ಮತುಲ್ಲಾ ಒಮರ್ಜಾಯ್, ಗುಲ್ಬದಿನ್ ನಾಯಬ್, ಶರಫುದ್ದೀನ್ ಅಶ್ರಫ್, ನೂರ್ ಅಹ್ಮದ್, ಮುಜೀಬ್ ಉರ್ ರೆಹಮಾನ್, ಫರೀದ್ ಅಹ್ಮದ್, ಫಜಲ್ ಹಕ್ ಫಾರೂಕಿ ಮತ್ತು ನವೀನ್ ಉಲ್ ಹಕ್.

ಇನ್ನು ಈ ಸರಣಿಗೆ ಪಾಕಿಸ್ತಾನ ತಂಡವನ್ನು ಈಗಾಗಲೇ ಘೋಷಣೆ ಮಾಡಲಾಗಿದೆ. ಖಾಯಂ ನಾಯಕ ಬಾಬರ್ ಅಜಂ, ಹ್ಯಾರಿಸ್ ರೌಫ್ ಹಾಗೂ ವೇಗಿ ಶಹೀನ್ ಶಾ ಅಫ್ರಿದಿಗೆ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದ್ದು ಶದಬ್ ಖಾನ್ ಪಾಕಿಸ್ತಾನ ತಂಡವನ್ನು ಮುನ್ನಡೆಸಲಿದ್ದಾರೆ. ಅಲ್ಲದೆ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಕೆಲ ಆಟಗಾರರು ಈ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದು ರಾಷ್ಟ್ರೀಯ ತಂಡದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.

ಪಾಕಿಸ್ತಾನ ಸ್ಕ್ವಾಡ್ ಹೀಗಿದೆ "ಶದಬ್ ಖಾನ್ (ನಾಯಕ), ಅಬ್ದುಲ್ಲಾ ಶಫೀಕ್, ಅಜಮ್ ಖಾನ್, ಫಹೀಮ್ ಅಶ್ರಫ್, ಇಫ್ತಿಕರ್ ಅಹ್ಮದ್, ಇಹ್ಸಾನುಲ್ಲಾ, ಇಮಾದ್ ವಾಸಿಮ್, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಂ ಜೂನಿಯರ್, ನಸೀಮ್ ಶಾ, ಸೈಮ್ ಅಯೂಬ್, ಶಾನ್ ಮಸೂದ್, ತಯ್ಯಬ್ ತಾಹಿರ್, ಜಮಾನ್ ಖಾನ್ ಮೀಸಲು ಆಟಗಾರರು: ಹಸೀಬುಲ್ಲಾ, ಉಸಾಮಾ ಮಿರ್, ಅಬ್ರಾರ್ ಅಹ್ಮದ್

Story first published: Tuesday, March 21, 2023, 18:12 [IST]
Other articles published on Mar 21, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+