PAK vs AUS Test: ಪಾಕ್ ಫೀಲ್ಡಿಂಗ್ ಜಾಲಕ್ಕೆ ಬಿದ್ದ ಸ್ಮಿತ್: ಕ್ಯಾಪ್‌ಗೆ ಚೆಂಡು ಬಡಿದರೂ ಸಿಗಲಿಲ್ಲ ಪೆನಾಲ್ಲಿ ರನ್
ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ನಡುವಣ ಮೂರನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಪಾಕ್ ಬೌಲರ್‌ಗಳು ಮೊದಲ ಇನ್ನಿಂಗ್ಸ್‌ನಲ್ಲಿ ಅಬ್ಬರಿಸಿದ್ದಾರೆ. ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಸ್ಟೀವನ್ ಸ್ಮಿತ್ ಅವರ ವಿಕೆಟ್ ಪಡೆಯಲು ಪಾಕ್ ಮಾಡಿಕೊಂಡ ರಣ ತಂತ್ರ ಫಲ ನೀಡಿದೆ.
ಈ ರೀತಿಯ ಫೀಲ್ಡಿಂಗ್‌ನ್ನು ಟೆಸ್ಟ್ ಪಂದ್ಯವನ್ನು ವೇಳೆ ನೋಡಲು ಸಿಗುವುದಿಲ್ಲ. ಸ್ಮಿತ್ ಅವರನ್ನು ಔಟ್ ಮಾಡಲು ಶಾನ್ ಮಸೂದ್ ಮಾಡಿಕೊಂಡ ಪ್ಲ್ಯಾನ್ ಫಲಿಸಿದೆ. ಸ್ಮಿತ್ ಬ್ಯಾಟ್ ಮಾಡುವ ವೇಳೆ ಕವರ್ಸ್‌ನಲ್ಲಿ ಒಬ್ಬರಲ್ಲಾ, ಇಬ್ಬರಲ್ಲ ಮೂವರು ಫಿಲ್ಡರ್‌ಗಳನ್ನು ಇಟ್ಟಿದರು. ಸಾಮಾನ್ಯವಾಗಿ ಈ ರೀತಿಯ ಫೀಲ್ಡಿಂಗ್ ಟೆಸ್ಟ್ ಪಂದ್ಯದಲ್ಲಿ ಕಾಣಿಸುವುದಿಲ್ಲ.

ಪಾಕ್ ತಂಡದ ವೇಗದ ಬೌಲರ್ ಮೀರ್ ಹಮಾಜ್ ಸ್ಮಿತ್‌ಗೆ ಖೆಡ್ಡಾ ತೋಡಿದರು. ಪಂದ್ಯದ 74ನೇ ಓವರ್‌ನಲ್ಲಿ ಶಾನ್ ಮಸೂದ್ ಕವರ್ಸ್‌ನಲ್ಲಿ ಮೂರು ಫೀಲ್ಡರ್‌ಗಳನ್ನು ಇಟ್ಟರು. ಹಮಾಜ್ ನಿಲ್ಲಿಸಿದ್ದ ಫೀಲ್ಡ್‌ಗೆ ಅನುಸಾರವಾಗಿ ಆಫ್ ಸೈಡ್‌ನಲ್ಲಿ ಬೌಲಿಂಗ್ ಮಾಡಿದರು. ಸ್ಮಿತ್ ಸ್ಮಿತ್ ಈ ಚೆಂಡನ್ನು ಕವರ್ಸ್ ಮೇಲಿನಿಂದ ಬಾರಿಸುವ ಉದ್ದೇಶದಿಂದ ಮುನ್ನುಗಿದರು. ಸ್ಮಿತ್ ಕವರ್ಸ್ ತಲೆಯ ಮೇಲಿನಿಂದ ಚೆಂಡನ್ನು ಬಾರಿಸಿದರೆ, ನಾಲ್ಕು ರನ್‌ಗಳು ಲಭಿಸುತ್ತದೆ ಎಂದು ಅರಿತಿದ್ದರು.
ಆದರೆ ಸ್ಮಿತ್ ಕವರ್ಸ್ ಮೇಲೆಯಿಂದ ಚೆಂಡನ್ನು ಬಾರಿಸುವಲ್ಲಿ ವಿಫಲರಾದರು. ಈ ಕ್ಷೇತ್ರದಲ್ಲಿ ಫೀಲ್ಡ್ ಮಾಡುತ್ತಿದ್ದ ಬಾಬರ್ ಅಜಮ್ ನೆಗೆದು ಕ್ಯಾಚ್ ಪಡೆದರು.
ಚೆಂಡನ್ನು ತಡೆದ ಕ್ಯಾಪ್
ಇನ್ನು ಇದೇ ಪಂದ್ಯದಲ್ಲಿ ಮತ್ತೊಂದು ಘಟನೆ ಎಲ್ಲರ ಗಮನ ಸೆಳೆದಿದೆ. ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಚೆಂಡನ್ನು ಮಿಡ್ ಆಫ್ ಮೇಲೆ ಆಡಿದರು. ಅದು ಸರಿಯಾಗಿ ಬ್ಯಾಟ್‌ಗೆ ತಾಗದ ಕಾರಣ ಅಯೂಬ್ ಅದನ್ನು ಹಿಡಿಯಲುಓಡಿದರು. ಅವರು ವೇಗವಾಗಿ ಓಡಿದರು. ಆದರೆ ಈ ಸಮಯದಲ್ಲಿ ಅವರ ಮೊಣಕಾಲು ನೆಲದಲ್ಲಿ ಸಿಲುಕಿಕೊಂಡಿತು.
ಸ್ಟೀವ್ ಸ್ಮಿತ್ ಅವರ ಶಾರ್ಟ್ ಡೈವ್ ಬಾರಿಸಿದರು. ಸೈಮ್ ಅಯೂಬ್ ಕ್ಯಾಪ್ ಚೆಂಡಿನ ಮೇಲೆ ಬಿದ್ದಿತು. ಇದಾದ ಬಳಿಕವೂ ಆಸ್ಟ್ರೇಲಿಯಾ ತಂಡಕ್ಕೆ ಯಾವುದೇ ಪೆನಾಲ್ಟಿ ರನ್ ಸಿಗಲಿಲ್ಲ. ಕ್ರಿಕೆಟ್‌ನ ನಿಯಮಗಳ ಪ್ರಕಾರ, ಆಟದ ಸಮಯದಲ್ಲಿ ಚೆಂಡು ಫೀಲ್ಡರ್‌ನ ಬಟ್ಟೆ, ಸಲಕರಣೆ ಅಥವಾ ಫೀಲ್ಡರ್‌ನಿಂದ ಆಕಸ್ಮಿಕವಾಗಿ ಬಿದ್ದ ಯಾವುದೇ ವಸ್ತುಗಳೊಂದಿಗೆ ಸಂಪರ್ಕಕ್ಕೆ ಬಂದರೆ, ಅದನ್ನು ಐಸಿಸಿ ನಿಯಮ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಈ ವೇಳೆ, ಬ್ಯಾಟಿಂಗ್ ತಂಡವು 5 ರನ್ಗಳನ್ನು ಪೆನಾಲ್ಟಿಯಾಗಿ ಪಡೆಯುತ್ತದೆ.
ಸೈಮ್ ಅಯೂಬ್ ಕ್ಯಾಪ್‌ಗೆ ಬಡಿದ ನಂತರವೂ ಆಸ್ಟ್ರೇಲಿಯಾಕ್ಕೆ ಪೆನಾಲ್ಟಿ ರನ್ ಸಿಗಲಿಲ್ಲ. ಐಸಿಸಿ ನಿಯಮ 28.2.2 ರ ಪ್ರಕಾರ, ಪಂದ್ಯದ ಸಮಯದಲ್ಲಿ ಚೆಂಡು ಯಾವುದೇ ಬಟ್ಟೆ, ಉಪಕರಣಗಳು ಅಥವಾ ಫೀಲ್ಡರ್‌ನಿಂದ ಆಕಸ್ಮಿಕವಾಗಿ ಬಿದ್ದ ಅಥವಾ ಅಂಪೈರ್‌ನಿಂದ ಬಿದ್ದ ಯಾವುದೇ ವಸ್ತುಗಳೊಂದಿಗೆ ಸಂಪರ್ಕಕ್ಕೆ ಬಂದರೆ ಅದು ಕಾನೂನುಬಾಹಿರ ಫೀಲ್ಡಿಂಗ್ ಎನ್ನುವುದಿಲ್ಲ.
ಇಲ್ಲಿ ಪಾಕಿಸ್ತಾನಿ ಫೀಲ್ಡರ್ ಉದ್ದೇಶಪೂರ್ವಕವಾಗಿ ಕ್ಯಾಪ್ ಅನ್ನು ಅಲ್ಲಿ ಬೀಳಿಸಲಿಲ್ಲ. ಡೈವಿಂಗ್ ಮಾಡುವಾಗ ಅದು ಅವನ ತಲೆಯಿಂದ ಕೆಳಗೆ ಬಿದ್ದಿತು. ಚೆಂಡನ್ನು ಕ್ಯಾಪ್ ನಿಂದ ನಿಲ್ಲಿಸಿದ ನಂತರವೂ ಆಸ್ಟ್ರೇಲಿಯಾಕ್ಕೆ 5 ರನ್ ಪೆನಾಲ್ಟಿ ಸಿಗದಿರಲು ಇದೇ ಕಾರಣ.
ಕ್ಯಾಪ್ ನಿಂದ ಚೆಂಡು ತಡೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications