PAK vs BAN: ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಪಾಕಿಸ್ತಾನದ ಏಕೈಕ ಆಲ್‌ರೌಂಡರ್ ಔಟ್!
ಆಗಸ್ಟ್ 19 ಸೋಮವಾರ, ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಪಾಕಿಸ್ತಾನ ತಂಡಕ್ಕೆ ಹಿನ್ನೆಡೆ ಆಗಿದೆ. ಬಾಂಗ್ಲಾದೇಶ ಎದುರು ಸರಣಿ ಗೆದ್ದು ವಿಶ್ವ ಟೆಸ್ಟ್ ಚಾಂಪಿಯನ್ ಪಾಯಿಂಟ್ ಟೇಬಲ್‌ನಲ್ಲಿ ಮುನ್ನೆಡೆ ಸಾಧಿಸುವ ಕನಸು ಕಾಣುತ್ತಿದ್ದ ಪಾಕಿಸ್ತಾನ ತನ್ನ ಏಕೈಕ ಆಲ್‌ರೌಂಡರ್‌ನ್ನು ಕಳೆದುಕೊಂಡಿದೆ. ಇದೇ ತಿಂಗಳ ಆಗಸ್ಟ್ 21 ರಿಂದ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ನಡುವೆ ಟೆಸ್ಟ್ ಸರಣಿ ಆರಂಭವಾಗಲಿದೆ.
ಪಾಕಿಸ್ತಾನದ ಆಲ್‌ರೌಂಡರ್ ಅಮೀರ್ ಜಮಾಲ್ ಗಾಯಗೊಂಡಿದ್ದಾರೆ. ಹೀಗಾಗಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಿಂದ ಜಮಾಲ್ ಹೊರ ಬಿದ್ದಿದ್ದಾರೆ. ಹಲವು ಸಂದರ್ಭಗಳಲ್ಲಿ ಅವರು ಬೌಲಿಂಗ್ ಜೊತೆಗೆ ತಮ್ಮ ಬ್ಯಾಟಿಂಗ್ ಮೂಲಕ ತಂಡಕ್ಕೆ ನೆರವಾಗಿದ್ದಾರೆ. ಸರಣಿಯಿಂದ ಅವರು ಹೊರಗುಳಿದಿರುವ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಖಚಿತಪಡಿಸಿದೆ.

ಈ ವರ್ಷ ಮೇ ತಿಂಗಳಿನಿಂದ ಬೆನ್ನು ನೋವಿನಿಂದ ಬಳಲುತ್ತಿದ್ದ ಜಮಾಲ್ ಇತ್ತೀಚೆಗೆ ಚೇತರಿಸಿಕೊಂಡಿದ್ದರು. ಹೀಗಾಗಿ ಆರಂಭದಲ್ಲಿ ಫಿಟ್ನೆಸ್ ಆಧಾರದ ಮೇಲೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಆದರೆ ಬೆನ್ನು ನೋವಿನಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಿಂದ ದೂರ ಉಳಿದಿದ್ದಾರೆ.
2023-24ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಸರಣಿಯಲ್ಲಿ ಪಾಕಿಸ್ತಾನ ಪರ ಜಮಾಲ್ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. ಮೂರು ಟೆಸ್ಟ್‌ಗಳಲ್ಲಿ 18 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದ್ದರು.
ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನ ತಂಡದಲ್ಲಿದ್ದ ಜಮಾಲ್ ಏಕೈಕ ವೇಗದ ಬೌಲಿಂಗ್ ಆಲ್ ರೌಂಡರ್ ಆಗಿದ್ದರು. ಈಗ ಪಾಕಿಸ್ತಾನವು ಮೊದಲ ಟೆಸ್ಟ್‌ನಲ್ಲಿ ಯಾವುದೇ ಬದಲಾವಣೆಗಳಿಲ್ಲದೆ 14 ಆಟಗಾರರೊಂದಿಗೆ ಕಣಕ್ಕೀಳಿಯಲಿದೆ.
ಅಬ್ರಾರ್ ಅಹ್ಮದ್ ಮತ್ತು ಕಮ್ರಾನ್ ಗುಲಾಮ್ ಕೂಡ ಶಾಹೀನ್ ಪಾಕಿಸ್ತಾನ ಎ ತಂಡ ಪರ ಆಡುತ್ತಿದ್ದಾರೆ. ಹೀಗಾಗಿ ಬದಲಿ ಆಟಗಾರನನ್ನು ಪಿಸಿಬಿ ಘೋಷಣೆ ಮಾಡಿಲ್ಲ. ಹೀಗಾಗಿ ವೇಗದ ಬೌಲರ್‌ಗಳಾದ ಶಾಹೀನ್ ಶಾ ಆಫ್ರಿದಿ, ನಸೀಮ್ ಶಾ, ಮಿರ್ ಹಮ್ಜಾ, ಖುರ್ರಂ ಶಹಜಾದ್ ಮತ್ತು ಮೊಹಮ್ಮದ್ ಅಲಿ ಪಾಕ್ ತಂಡವನ್ನು ಮುನ್ನಡೆಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications