PAK vs BAN: ಐಸಿಸಿ ಶಿಕ್ಷೆಗೆ ಗುರಿಯಾದ ಪಾಕಿಸ್ತಾನ; ಡಬ್ಲ್ಯೂಟಿಸಿ ಫೈನಲ್ ಹಾದಿ ಕಠಿಣ?
ದಿನದಿಂದ ದಿನಕ್ಕೆ ಪಾಕಿಸ್ತಾನ ತಂಡ ಸ್ಥಿತಿ ಹದಗೆಡುತ್ತಿದೆ. ಇತ್ತೀಚೆಗೆ ಪಾಕಿಸ್ತಾನ ತವರಿನಲ್ಲಿ ಬಾಂಗ್ಲಾದೇಶದ ವಿರುದ್ಧ 10 ವಿಕೆಟ್‌ಗಳ ಹೀನಾಯ ಸೋಲನ್ನು ಎದುರಿಸಬೇಕಾಯಿತು. ಬಾಂಗ್ಲಾದೇಶ ತಂಡದ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನಕ್ಕೆ ಇದು ಮೊದಲ ಸೋಲಾಗಿದೆ.
ಈ ಸೋಲಿನ ನಂತರ ಪಾಕಿಸ್ತಾನ ತಂಡ ಎಲ್ಲೆಡೆ ಅಪಹಾಸ್ಯಕ್ಕೀಡಾಗಿದ್ದು, ಟೀಕೆಗಳ ಸುನಾಮಿ ಎದ್ದಿದೆ. ಇದರ ಮಧ್ಯೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪಾಕಿಸ್ತಾನ ಸೋಲಿನ ಗಾಯದ ಮೇಲೆ ಬರೆ ಎಳೆದಿದೆ.

ಇದರಿಂದ ಪಾಕ್ ತಂಡ ಇನ್ನೂ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಐಸಿಸಿ ವಿಧಿಸಿರುವ ಈ ಶಿಕ್ಷೆಯ ನಂತರ ಪಾಕಿಸ್ತಾನಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ) ಫೈನಲ್ ತಲುಪುವುದು ಇನ್ನಷ್ಟು ಕಷ್ಟಕರವಾಗಿದೆ.
ಪಾಕಿಸ್ತಾನ ಬಿಸಿ ಮುಟ್ಟಿಸಿದ ಐಸಿಸಿ
ಬಾಂಗ್ಲಾದೇಶ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡಲು ಪಾಕಿಸ್ತಾನ ಪ್ರವಾಸವನ್ನು ಕೈಗೊಂಡಿದೆ. ಈ ಸರಣಿಯ ಮೊದಲ ಪಂದ್ಯ ರಾವಲ್ಪಿಂಡಿಯಲ್ಲಿ ನಡೆಯಿತು. ಈ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಮಾಡಿರುವುದಕ್ಕೆ ಐಸಿಸಿ ಪಾಕಿಸ್ತಾನದ 6 ಡಬ್ಲ್ಯೂಟಿಸಿ ಅಂಕಗಳನ್ನು ಕಡಿತಗೊಳಿಸಿದೆ.
ಅಲ್ಲದೆ ಶಾನ್ ಮಸೂದ್ ನೇತೃತ್ವದ ಪಾಕ್ ತಂಡ ನಿಗದಿತ ಸಮಯಕ್ಕಿಂತ 6 ಓವರ್‌ಗಳಷ್ಟು ಹಿಂದಿದ್ದರು. ಈ ಕಾರಣದಿಂದಾಗಿ ಐಸಿಸಿ ಶಿಕ್ಷೆಗೆ ಪಾಕ್ ಗುರಿಯಾಗಿರುವುದು ಮತ್ತೊಮ್ಮೆ ಟೀಕೆಗಳನ್ನು ಎದುರಿಸುವಂತಾಗಿದೆ. ಅಷ್ಟೇ ಅಲ್ಲ, ಪಾಕಿಸ್ತಾನ ಪಂದ್ಯ ಶುಲ್ಕದ ಶೇ.30ರಷ್ಟು ದಂಡವನ್ನೂ ತೆರಬೇಕಾಗಿದೆ.
ಬಾಂಗ್ಲಾದೇಶಕ್ಕೂ ಶಿಕ್ಷೆ
ಬಾಂಗ್ಲಾದೇಶ ಮತ್ತು ಪಾಕಿಸ್ತಾನ ತಂಡಗಳ ಸ್ಥಿತಿ ಒಂದೇ ಎಂದರೆ ತಪ್ಪಾಗುವುದಿಲ್ಲ. ಬಾಂಗ್ಲಾ ತಂಡಕ್ಕೂ ಐಸಿಸಿ ನಿಧಾನಗತಿಯ ಓವರ್ ರೇಟ್ ಮಾಡಿರುವುದಕ್ಕೆ 3 ಡಬ್ಲ್ಯೂಟಿಸಿ ಅಂಕಗಳು ಮತ್ತು ಪಂದ್ಯದ ಶುಲ್ಕದ 15 ಪ್ರತಿಶತದಷ್ಟು ದಂಡ ವಿಧಿಸಿದೆ.
ಬಾಂಗ್ಲಾದೇಶ ಎದುರು ಸೋಲಿನ ನಂತರ ಪಾಕ್ ತಂಡ ಡಬ್ಲ್ಯೂಟಿಸಿ ಅಂಕಪಟ್ಟಿಯಲ್ಲಿ ಕೆಳಗಿನಿಂದ ಎರಡನೇ ಸ್ಥಾನದಲ್ಲಿದೆ. ಈ ಋತುವಿನಲ್ಲಿ ಇದು ಪಾಕಿಸ್ತಾನದ ಮೂರನೇ ಸರಣಿಯಾಗಿದ್ದು, ತಂಡಕ್ಕೆ ಇನ್ನೂ 8 ಪಂದ್ಯಗಳು ಬಾಕಿ ಇವೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಪ್ರವೇಶಿಸಲು ಪಾಕ್ 8 ಪಂದ್ಯಗಳಲ್ಲಿ 7ರಲ್ಲಿ ಗೆಲ್ಲಬೇಕು.
ಎರಡನೇ ಟೆಸ್ಟ್ ಯಾವಾಗ?
ಬಾಂಗ್ಲಾದೇಶ ಮತ್ತು ಪಾಕಕಿಸ್ತಾನ ನಡುವಿನ ಅಂತಿಮ ಟೆಸ್ಟ್ ಪಂದ್ಯ ಆಗಸ್ಟ್ 30 ರಿಂದ ಆರಂಭವಾಗಲಿದೆ. ಈ ಪಂದ್ಯ ಪಾಕಿಸ್ತಾನಕ್ಕೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಈ ಪಂದ್ಯದಲ್ಲೂ ಪಾಕಿಸ್ತಾನ ಸೋತರೆ ಸರಣಿ ಕೈತಪ್ಪಲಿದೆ.
ಈ ಪಂದ್ಯವನ್ನೂ ಬಾಂಗ್ಲಾದೇಶ ಗೆದ್ದರೆ ಐತಿಹಾಸಿಕ ಜಯವಾಗಲಿದೆ. ಆದರೆ, ಕೊನೆಯ ಪಂದ್ಯಕ್ಕೂ ಮುನ್ನ ಪಾಕಿಸ್ತಾನದ ಪ್ಲೇಯಿಂಗ್ ಇಲೆವೆನ್ ನಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications