ಬಾಂಗ್ಲಾದೇಶದ ಅನುಭವಿ ಆಟಗಾರ ಮುಷ್ಫೀಕರ್ ರಹೀಮ್ ಅವರ ಅಮೋಘ ಆಟದ ನೆರವಿನಿಂದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ, ಪಾಕಿಸ್ತಾನ ವಿರುದ್ಧ ಇನಿಂಗ್ಸ್ ಮುನ್ನಡೆ ಸಾಧಿಸಿದೆ.
ಪಾಕಿಸ್ತಾನ ತಂಡ ಇನಿಂಗ್ಸ್ ಮುನ್ನಡೆ ಸಾಧಿಸುವ ಕನಸಿಗೆ ಬಾಂಗ್ಲಾದೇಶ ತಣ್ಣೀರು ಏರಚಿದೆ. ನಾಲ್ಕನೇ ದಿನದಾಟವನ್ನು 5 ವಿಕೆಟ್‌ಗೆ 316 ರನ್‌ಗಳಿಂದ ಆಟ ಮುಂದುವರೆಸಿದ ಬಾಂಗ್ಲಾ 565 ರನ್‌ಗಳಿಗೆ ಆಲೌಟ್ ಆಯಿತು. ಎರಡನೇ ಇನಿಂಗ್ಸ್ ಆರಂಭಿಸಿರುವ ಪಾಕ್ ಶನಿವಾರದಾಟದಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 23 ರನ್ ಸೇರಿಸಿದೆ. ಪಾಕ್ 94 ರನ್‌ಗಳಿಂದ ಇನಿಂಗ್ಸ್ ಹಿನ್ನಡೆ ಅನುಭವಿಸುತ್ತಿದೆ.

ಶನಿವಾರ ಲಿಟನ್ ದಾಸ್ ಅವರನ್ನು ಪೆವಲಿಯನ್‌ಗೆ ಅಟ್ಟುವಲ್ಲಿ ನಾಸೀಮ್ ಶಾ ಸಫಲರಾದರು. ಏಳನೇ ವಿಕೆಟ್‌ಗೆ ಮುಷ್ಫೀಕರ್ ರಹೀಮ್ ಹಾಗೂ ಮೆಹದಿ ಹಸನ್ ಮಿರಜಾ ಅಮೋಘ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿಯನ್ನು ಕಟ್ಟಿ ಹಾಕಲು ಪಾಕ್ ಬೌಲರ್‌ಗಳನ್ನು ಕಾಡಿದರು.
ಏಳನೇ ವಿಕೆಟ್‌ಗೆ ಮುಷ್ಫೀಕರ್ ರಹೀಮ್ ಹಾಗೂ ಮೆಹದಿ ಹಸನ್ ಜೋತೆಗೂಡಿ ಸುಮಾರು 56 ಓವರ್‌ಗಳ ವರೆಗೆ ಬ್ಯಾಟಿಂಗ್ ನಡೆಸಿತು. ಈ ವೇಳೆ ಈ ಜೋಡಿ 196 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಮುಷ್ಫೀಕರ್ ರಹೀಮ್ 341 ಎಸೆತಗಳಲ್ಲಿ 22 ಬೌಂಡರಿ, 1 ಸಿಕ್ಸರ್ ಸಹಾಯದಿಂದ 191 ರನ್ ಬಾರಿಸಿ ಔಟ್ ಆದರು. ಮೆಹದಿ ಹಸನ್ ಮಿರಜಾ 179 ಎಸೆತಗಳಲ್ಲಿ 6 ಬೌಂಡರಿ ನೆರವಿನಿಂದ 77 ರನ್ ಸಿಡಿಸಿದರು. ಅಂತಿಮವಾಗಿ ಪಾಕ್ 565 ರನ್‌ಗಳಿಗೆ ಆಲೌಟ್ ಆಯಿತು.
ಪಾಕಿಸ್ತಾನದ ವೇಗದ ಬೌಲರ್ ನಾಸೀಮ್ ಶಾ ಬಿಗುವಿನ ದಾಳಿ ನಡೆಸಿ ಮೂರು ವಿಕೆಟ್ ಕಬಳಿಸಿದರು. ಶಾಹೀನ್ ಶಾ ಅಫ್ರಿದಿ, ಖುರ್ರಂ ಶಹಜಾದ್, ಮೊಹಮ್ಮದ್ ಅಲಿ ತಲಾ ಎರಡು ವಿಕೆಟ್ ಪಡೆದರು.
ಇನಿಂಗ್ಸ್ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ ದಿನದಾಟದಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 23 ರನ್ ಸೇರಿಸಿದೆ. ಪಾಕ್ ಐದನೇ ದಿನದಾಟದಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡುವ ಇರಾದೆಯನ್ನು ಹಾಕಿಕೊಂಡಿದೆ. ಈ ಪಂದ್ಯದಲ್ಲಿ ಪಾಕ್ ಯಾವ ತಂತ್ರದಿಂದ ಎರಡನೇ ಇನಿಂಗ್ಸ್ ಆರಂಭಿಸುತ್ತದೆ ಎಂಬ ಕುತೂಹಲ ಹೆಚ್ಚಿದೆ.