PAK Vs ENG 2nd Test: ಇಂಗ್ಲೆಂಡ್‌ಗೆ ಬೃಹತ್ ಮುನ್ನಡೆ, ಸರಣಿ ಸೋಲಿನ ಭೀತಿಯಲ್ಲಿ ಪಾಕಿಸ್ತಾನ

ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಾಕಿಸ್ತಾನ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ 2ನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 281 ರನ್‌ಗಳ ಮುನ್ನಡೆ ಸಾಧಿಸುವ ಮೂಲಕ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ 281 ರನ್‌ಗಳಿಗೆ ಆಲೌಟ್ ಆಗಿದ್ದ ಇಂಗ್ಲೆಂಡ್, ಪಾಕಿಸ್ತಾನ ತಂಡವನ್ನು ಮೊದಲನೇ ಇನ್ನಿಂಗ್ಸ್‌ನಲ್ಲಿ 202 ರನ್‌ಗಳಿಗೆ ಆಲೌಟ್ ಮಾಡುವ ಯಶಸ್ವಿಯಾಗಿತ್ತು. 79 ರನ್‌ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್, 2ನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 202 ರನ್ ಗಳಿಸುವ ಮೂಲಕ 281 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ.
ಎರಡನೇ ಇನ್ನಿಂಗ್ಸ್‌ನಲ್ಲಿ ಬೆನ್ ಡಕೆಟ್ 98 ಎಸೆತಗಳಲ್ಲಿ 79 ರನ್ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು. ಜಾಕ್ ಕ್ರಾಲೆ ಮತ್ತು ಒಲೀ ಪೋಪ್ ಇಬ್ಬರೂ ರನ್ ಔಟ್ ಆಗಿದ್ದು ಇಂಗ್ಲೆಂಡ್ ತಂಡಕ್ಕೆ ದುಬಾರಿಯಾಗಿ ಪರಿಣಮಿಸಿತು.
ವಿಲ್ ಜ್ಯಾಕ್ಸ್ 4 ರನ್‌ಗಳಿಗೆ ಔಟ್ ಆಗಿ ನಿರಾಸೆ ಮೂಡಿಸಿದರು. ಜೋ ರೂಟ್ ಕೂಡ 35 ಎಸೆತಗಳಲ್ಲಿ 21 ರನ್ ಗಳಿಸಿ ಔಟಾದರು. ಹ್ಯಾರಿ ಬ್ರೂಕ್ ಮಾತ್ರ ಪಾಕಿಸ್ತಾನ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. 108 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ಸಹಿತ ಅಜೇಯ 74 ರನ್ ಗಳಿಸಿದ್ದು 3ನೇ ದಿನಕ್ಕೆ ವಿಕೆಟ್ ಕಾಯ್ದಕೊಂಡಿದ್ದಾರೆ. ನಾಯಕ ಬೆನ್ ಸ್ಟೋಕ್ಸ್ ಕೂಡ ಅಜೇಯ 16 ರನ್ ಗಳಿಸಿದ್ದಾರೆ.

10 ವಿಕೆಟ್ ಪಡೆದ ಅಬ್ರಾರ್ ಅಹ್ಮದ್
ಮೊದಲ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಪಡೆಯುವ ಮೂಲಕ ಮಿಂಚಿದ್ದ ಪಾಕಿಸ್ತಾನ ಬೌಲರ್ 2ನೇ ಇನ್ನಿಂಗ್ಸ್‌ನಲ್ಲಿ 3 ವಿಕೆಟ್ ಪಡೆಯುವ ಮೂಲಕ, ಚೊಚ್ಚಲ ಪಂದ್ಯದಲ್ಲೇ 10 ವಿಕೆಟ್ ಗಳಿಸಿದ ಪಾಕಿಸ್ತಾನದ ಎರಡನೇ ಆಟಗಾರ ಎನಿಸಿಕೊಂಡರು. ಈ ಮೊದಲು 1996ರಲ್ಲಿ ಮೊಹಮ್ಮದ್ ಜಹೀದ್ ಪಾಕಿಸ್ತಾನ ಪರ ಆಡಿದ ಮೊದಲ ಟೆಸ್ಟ್ ಪಂದ್ಯದಲ್ಲಿ 11 ವಿಕೆಟ್ ಪಡೆದು ಸಾಧನೆ ಮಾಡಿದ್ದರು.
ಮತ್ತೊಂದು ಸೋಲಿನ ಭೀತಿಯಲ್ಲಿ ಪಾಕಿಸ್ತಾನ
ರಾವಲ್ಪಿಂಡಿಯಲ್ಲಿ ನಡೆದ ಸರಣಿಯ ಮೊದಲನೇ ಪಂದ್ಯದಲ್ಲಿ ಸೋಲನುಭವಿಸಿರುವ ಪಾಕಿಸ್ತಾನ ಎರಡನೇ ಟೆಸ್ಟ್ ಪಂದ್ಯದಲ್ಲೂ ಸೋಲಿನ ಸುಳಿಗೆ ಸಿಲುಕಿದೆ. 2ನೇ ದಿನದಾಂತ್ಯಕ್ಕೆ 281 ರನ್‌ಗಳ ಮುನ್ನಡೆ ಪಡೆದುಕೊಂಡಿರುವ ಇಂಗ್ಲೆಂಡ್ ಉತ್ತಮ ಸ್ಥಿತಿಯಲ್ಲಿದೆ, ಬೌಲರ್ ಗಳಿಗೆ ನೆರವಾಗುವ ಈ ಪಿಚ್‌ನಲ್ಲಿ 3ನೇ ಬ್ಯಾಟಿಂಗ್ ಮಾಡುವುದು ಸುಲಭವಲ್ಲ. 300 ಕ್ಕೂ ಅಧಿಕ ರನ್ ಮುನ್ನಡೆ ಸಾಧಿಸಿದರೆ, ಇಂಗ್ಲೆಂಡ್ ಮತ್ತೊಂದು ಜಯದ ನಿರೀಕ್ಷೆಯಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications