Pak vs Eng: ಫೈನಲ್ ಪಂದ್ಯದಲ್ಲಿ 'ಪ್ಲೇಯರ್ ಆಫ್ ದ ಮ್ಯಾಚ್' ಪ್ರಶಸ್ತಿ ಗೆಲ್ಲಬಹುದಾದ ನಾಲ್ಕು ಆಟಗಾರರು ಇವರು

ನವೆಂಬರ್ 13 ರ ಭಾನುವಾರದಂದು ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂ (MCG) ನಲ್ಲಿ ಟಿ20 ವಿಶ್ವಕಪ್ 2022 ರ ಫೈನಲ್‌ನಲ್ಲಿ ಇಂಗ್ಲೆಂಡ್ ಪಾಕಿಸ್ತಾನವನ್ನು ಎದುರಿಸಲಿದೆ. 1992ರ ವಿಶ್ವಕಪ್‌ನಲ್ಲಿ ಈ ಎರಡೂ ತಂಡಗಳು ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ಮುಖಾಮುಖಿಯಾಗಿದ್ದವು. ಪಾಕಿಸ್ತಾನ ಇಂಗ್ಲೆಂಡ್ ತಂಡವನ್ನು ಸೋಲಿಸಿ ಕಪ್ ಗೆದ್ದಿತ್ತು.
ಎರಡೂ ತಂಡಗಳು ಸೂಪರ್ 12 ಹಂತದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಹೊಂದಿದ್ದವು. ಪಾಕಿಸ್ತಾನ ಜಿಂಬಾಬ್ವೆ ವಿರುದ್ಧ ಸೋಲನುಭವಿಸಿದರೆ, ಇಂಗ್ಲೆಂಡ್ ಐರ್ಲೆಂಡ್ ವಿರುದ್ಧ ಸೋತು ಮುಖಭಂಗ ಅನುಭವಿಸಿತ್ತು.
ಆದರೆ, ನಂತರ ಎರಡೂ ತಂಡಗಳು ಅತ್ಯುತ್ತಮ ರೀತಿಯಲ್ಲಿ ಆಟವಾಡಿದವು. ಸೆಮಿಫೈನಲ್‌ನಲ್ಲಿ ಎರಡೂ ತಂಡಗಳು ಗುಂಪಿನ ಅಗ್ರ ತಂಡಗಳನ್ನು ಸೋಲಿಸುವ ಮೂಲಕ ಫೈನಲ್ ತಲುಪಿದವು.
ಭಾನುವಾರ ಎಂಸಿಜಿಯಲ್ಲಿ ಟಿ20 ವಿಶ್ವಕಪ್ 2022 ಫೈನಲ್‌ನಲ್ಲಿ ಎರಡೂ ತಂಡಗಳ ಆಟಗಾರರು ತಮ್ಮ ಅತ್ಯತ್ತಮ ಆಟ ಪ್ರದರ್ಶಿಸಲು ಉತ್ಸುಕರಾಗಿದ್ದಾರೆ. ಎರಡೂ ತಂಡಗಳಲ್ಲೂ ಪಂದ್ಯವನ್ನು ಗೆಲ್ಲಿಸಿಕೊಡುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ, ಫೈನಲ್‌ನಲ್ಲಿ ಅತ್ಯುತ್ತಮ ಪ್ರದರ್ಶನದ ಮೂಲಕ ಪಂದ್ಯದ ಆಟಗಾರ ಪ್ರಶಸ್ತಿ ಪಡೆಯಲು ಈ ನಾಲ್ವರು ಆಟಗಾರರ ನಡುವೆ ಭಾರಿ ಪೈಪೋಟಿ ನಡೆಯುವ ಸಾಧ್ಯತೆ ಇದೆ.

ಫಾರ್ಮ್ ಮುಂದುವರೆಸುವರೇ ಶಾಹೀನ್ ಅಫ್ರಿದಿ
ಪಾಕಿಸ್ತಾನದ ಎಡಗೈ ವೇಗದ ಬೌಲರ್ ಶಾಹೀನ್ ಅಫ್ರಿದಿ ಕಳೆದ ಕೆಲವು ಪಂದ್ಯಗಳಿಂದ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಪಂದ್ಯಾವಳಿಯ ಆರಂಭದಲ್ಲಿ ನೀರಸ ಪ್ರದರ್ಶನ ನೀಡಿದರು. ಆದರೆ, ಕೊನೆಯ ಮೂರು ಪಂದ್ಯಗಳಲ್ಲಿ ಅವರು ಅತ್ಯುತ್ತಮ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಕಾರಣವಾದರು.
ಟಿ20 ವಿಶ್ವಕಪ್ 2022ರಲ್ಲಿ ಮೊದಲ ಮೂರು ಪಂದ್ಯಗಳಲ್ಲಿ ಕೇವಲ ಒಂದು ವಿಕೆಟ್ ಪಡೆದ ನಂತರ, ಶಾಹೀನ್ ಅಫ್ರಿದಿ ತನ್ನ ಕೊನೆಯ ಮೂರು ಪಂದ್ಯಗಳಲ್ಲಿ ಒಂಬತ್ತು ವಿಕೆಟ್ ಪಡೆದರು. ಪಂದ್ಯಾವಳಿಯಲ್ಲಿ ಶಾಹೀನ್ ಅಫ್ರಿದಿ ವಿಕೆಟ್ ಪಡೆದ ಎಲ್ಲಾ ಪಂದ್ಯಗಳಲ್ಲೂ ಪಾಕಿಸ್ತಾನ ಜಯ ಗಳಿಸಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಮೂರು, ಬಾಂಗ್ಲಾದೇಶದ ವಿರುದ್ಧ ನಾಲ್ಕು ಮತ್ತು ನ್ಯೂಜಿಲೆಂಡ್ ವಿರುದ್ಧದ ಮೊದಲ ಸೆಮಿಫೈನಲ್‌ನಲ್ಲಿ ಎರಡು ವಿಕೆಟ್ ಪಡೆದರು. ಪವರ್ ಪ್ಲೇನಲ್ಲಿ ಶಾಹೀನ್ ಅಫ್ರಿದಿ ಅಪಾಯಕಾರಿ ಬೌಲರ್ ಆಗಿದ್ದಾರೆ. ಇವರು ಮೊದಲ ಸ್ಪೆಲ್‌ನಲ್ಲಿ ಮಿಂಚಿದರೆ ಇಂಗ್ಲೆಂಡ್ ಗೆಲುವು ಕಷ್ಟವಾಗಲಿದೆ.

ಆರಂಭಿಕ ಆಟಗಾರ ಅಲೆಕ್ಸ್ ಹೇಲ್ಸ್
2019ರ ಏಕದಿನ ವಿಶ್ವಕಪ್ ತಂಡದಿಂದ ಅಲೆಕ್ಸ್ ಹೇಲ್ಸ್‌ರನ್ನು ಕೈಬಿಡಲಾಗಿತ್ತು. ಅವರ ಕ್ರಿಕೆಟ್ ಬದುಕು ಮುಕ್ತಾಯವಾಗಿದೆ ಎಂದು ಎಣಿಸಲಾಗಿತ್ತು. ಅವರು ಈ ಬಾರಿ ಟಿ20 ವಿಶ್ವಕಪ್ ತಂಡದಲ್ಲಿ ಆಯ್ಕೆಯಾಗಿರಲಿಲ್ಲ, ಆದರೆ, ಜಾನಿ ಬೈರ್‌ಸ್ಟೋವ್ ಗಾಯಗೊಂಡ ನಂತರ ಅಲೆಕ್ಸ್ ಹೇಲ್ಸ್ ತಂಡದಲ್ಲಿ ಸ್ಥಾನ ಪಡೆದರು.
ಅಲೆಕ್ಸ್ ಹೇಲ್ಸ್ 5 ಪಂದ್ಯಗಳಲ್ಲಿ 52.75 ಸರಾಸರಿಯಲ್ಲಿ ಮತ್ತು 148.59 ಸ್ಟ್ರೈಕ್‌ರೇಟ್‌ನಲ್ಲಿ 211 ರನ್ ಗಳಿಸಿದ್ದಾರೆ. ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಗಿಂತ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಕೊನೆಯ ಮೂರು ಪಂದ್ಯಗಳಲ್ಲಿ ಹೇಲ್ಸ್, 52, 47 ಮತ್ತು ಅಜೇಯ 86 ರನ್ ಗಳಿಸಿದ್ದಾರೆ. ಫೈನಲ್‌ನಲ್ಲಿ ಕೂಡ ಇದೇ ಫಾರ್ಮ್ ಮುಂದುವರೆಸಿದರೆ ಇಂಗ್ಲೆಂಡ್‌ಗೆ ಗೆಲುವು ಸುಲಭವಾಗಲಿದೆ.

ಆರಂಭಿಕ ಬ್ಯಾಟರ್ ಮೊಹಮ್ಮದ್ ರಿಜ್ವಾನ್
ಪಾಕಿಸ್ತಾನದ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ ಸದ್ಯ ಟಿ20 ಕ್ರಿಕೆಟ್‌ನಲ್ಲಿ ತಮ್ಮ ನಂ 1 ಶ್ರೇಯಾಂಕವನ್ನು ಕಳೆದುಕೊಂಡಿರಬಹುದು. ಆದರೆ, ನ್ಯೂಜಿಲೆಂಡ್ ವಿರುದ್ಧ ಅರ್ಧಶತಕ ಗಳಿಸುವ ಮೂಲಕ ತಮ್ಮ ವಿಶ್ವಾಸವನ್ನು ಮರಳಿ ಪಡೆದುಕೊಂಡಿದ್ದು, ಫೈನಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಉತ್ಸಾಹದಲ್ಲಿದ್ದಾರೆ.
ಸ್ಟ್ರೈಕ್ ರೇಟ್‌ನ ಬಗ್ಗೆ ಅನೇಕ ಟೀಕೆಗಳಿದ್ದರೂ, ರಿಜ್ವಾನ್ ತಮ್ಮ ನಿರಂತರ ಪ್ರದರ್ಶನದಿಂದ ಹಲವು ಪಂದ್ಯಗಳನ್ನು ಗೆಲ್ಲಲು ತಮ್ಮ ತಂಡಕ್ಕೆ ಸಹಾಯ ಮಾಡಿದ್ದಾರೆ. ಕೊನೆಯವರೆಗೂ ಆಡುವ ಸಾಮರ್ಥ್ಯ ಇರುವ ರಿಜ್ವಾನ್, ಇಂಗ್ಲೆಂಡ್ ವಿರುದ್ಧದ ಫೈನಲ್‌ನಲ್ಲಿ ಫಾರ್ಮ್ ಮುಂದುವರೆಸಿದರೆ ಪಾಕಿಸ್ತಾನಕ್ಕೆ ಗೆಲುವು ಸುಲಭವಾಗಲಿದೆ.

ಇಂಗ್ಲೆಂಡ್‌ನ ಆಲ್‌ರೌಂಡರ್ ಬೆನ್‌ಸ್ಟೋಕ್ಸ್
ಸೂಪರ್ 12 ಎನ್‌ಕೌಂಟರ್‌ನಲ್ಲಿ ಶ್ರೀಲಂಕಾ ವಿರುದ್ಧ ಅಜೇಯ 42 ರನ್ ಗಳಿಸುವ ಮೂಲಕ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ತಂಡದಲ್ಲಿ ಭರವಸೆ ಮೂಡಿಸಿದ್ದಾರೆ. ಅದಕ್ಕೆ ಮುಂಚಿನ ಪಂದ್ಯಗಳಲ್ಲಿ ಅವರು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು.
2019ರಲ್ಲಿ ಇಂಗ್ಲೆಂಡ್ ತಂಡ ತವರಿನಲ್ಲಿ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದಾಗ ಫೈನಲ್ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಪಂದ್ಯದ ಆಟಗಾರ ಪ್ರಶಸ್ತಿ ಪಡೆದಿದ್ದರು. ಬೆನ್ ಸ್ಟೋಕ್ಸ್ ಏಕಾಂಗಿಯಾಗಿ ಪಂದ್ಯವನ್ನು ಗೆಲ್ಲಿಸಿಕೊಡುವ ಸಾಮರ್ಥ್ಯ ಹೊಂದಿದ್ದಾರೆ. ಪಾಕಿಸ್ತಾನದ ವಿರುದ್ಧ ಅವರು ಆಡಿದರೆ ಇಂಗ್ಲೆಂಡ್‌ಗೆ ಗೆಲುವು ಕಷ್ಟವೇನಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications