For Quick Alerts
ALLOW NOTIFICATIONS  
For Daily Alerts
 

PAK vs ENG 2nd test: ಸಾಜಿದ್-ನೌಮನ್ ಸ್ಪಿನ್ ದಾಳಿಗೆ ಪತರುಗುಟ್ಟಿದ ಆಂಗ್ಲರು; ಪಾಕಿಸ್ತಾನಕ್ಕೆ ಐತಿಹಾಸಿಕ ಜಯ

ಮುಲ್ತಾನ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 'ಬೇಸ್ ಬಾಲ್' ಆಟವನ್ನು ಪಾಕಿಸ್ತಾನ ಛಿದ್ರಗೊಳಿಸಿದೆ. ಮೊದಲ ಟೆಸ್ಟ್ ಪಂದ್ಯವನ್ನು ಭಾರೀ ಅಂತರದಲ್ಲಿ ಗೆದ್ದು ಬೀಗುತ್ತಿದ್ದ ಆಂಗ್ಲರನ್ನು ಯಾರೂ ನಂಬಲಸಾಧ್ಯವಾದ ರೀತಿಯಲ್ಲಿ ಪಾಕಿಸ್ತಾನ ಸೋಲಿಸಿದೆ.

ಇದೇ ಮುಲ್ತಾನ್ ಪಿಚ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ಕಳಪೆ ಬೌಲಿಂಗ್ ಪ್ರದರ್ಶನ ನೀಡಿತ್ತು. ಪರಿಣಾಮ ತವರು ನೆಲದಲ್ಲಿ ಪಾಕಿಸ್ತಾನ ಅವಮಾನಕರವಾಗಿ ಸೋತು ಭಾರೀ ಟೀಕೆಗೆ ಗುರಿಯಾಗಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ (ಪಿಸಿಬಿ)ನ ಹೊಸ ಆಯ್ಕೆ ಸಮಿತಿ ಮಹತ್ವದ ನಿರ್ಧಾರರ ತೆಗೆದುಕೊಂಡಿತ್ತು.

PAK vs ENG Pakistan beat England in second test Match

ಪಾಕಿಸ್ತಾನ ತಂಡದ ಸ್ಟಾರ್ ಆಟಗಾರರಾದ ಬಾಬರ್ ಆಝಮ್, ಶಾಹೀನ್ ಅಫ್ರಿದಿ ಮತ್ತು ನಸೀಮ್ ಶಾ ಅವರನ್ನು ತಂಡದಿಂದ ಆಯ್ಕೆ ಸಮಿತಿ ಕೈ ಬಿಟ್ಟಿತ್ತು. ಇದು ಪಾಕಿಸ್ತಾನ ಮಾತ್ರವಲ್ಲದ ಇಡೀ ವಿಶ್ವ ಕ್ರಿಕೆಟ್‌ನಲ್ಲೇ ಸಂಚಲನ ಮೂಡಿಸಿತ್ತು. ಈ ಬಗ್ಗೆ ಹಾಲಿ ಮತ್ತು ಮಾಜಿ ಕ್ರಿಕೆಟಿಗರು ಹಲವು ರೀತಿಯಲ್ಲಿ ಚರ್ಚೆಗಳನ್ನು ನಡೆಸಿ, ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಆದರೆ, ಪಿಸಿಬಿ ಮಾತ್ರ ಯಾವುದಕ್ಕೂ ಪ್ರತಿಕ್ರಿಯೆ ಕೊಡದೆ, ಹೊಸದಾಗಿ ನೇಮಕಗೊಂಡ ಆಯ್ಕೆ ಸಮತಿ ನಿರ್ಧಾರವನ್ನ ಎತ್ತಿ ಹಿಡಿದಿತ್ತು.

ಸ್ಪಿನ್ ದಾಳಿ

ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯ ಗೆಲ್ಲುವ ನಿರೀಕ್ಷೆಯಲ್ಲಿ ಸ್ಟಾರ್ ಆಟಗಾರರನ್ನು ಹೊರಗಿಟ್ಟು ಹೊಸಬರಿಗೆ ಅವಕಾಶ ನೀಡಲಾಗಿತ್ತು. ಈ ಅವಕಾಶವನ್ನು ಎರಡು ಕೈಯಿಂದ ಬಾಚಿಕೊಂಡ ಸ್ಪಿನ್ನರ್ ಗಳಾದ ಸಾಜಿದ್ ಖಾನ್ ಮತ್ತು ನೂಮನ್ ಅಲಿ ಅವರ ಅದ್ಭುತ ಬೌಲಿಂಗ್ ಪ್ರದರ್ಶಿನದಿಂದಾಗಿ ಪಾಕಿಸ್ತಾನ ಐತಿಹಾಸಿಕ ಗೆಲುವು ಸಾಧಿಸಿದೆ. ಶಾಹೀನ್, ನಸೀಮ್ ಮತ್ತು ಬಾಬರ್ ಇಲ್ಲದ ಪಾಕಿಸ್ತಾನ ತಂಡ ಇಂಗ್ಲೆಂಡ್ ಅನ್ನು 152 ರನ್‌ಗಳಿಂದ ಸೋಲಿಸಿದೆ. ಈ ಗೆಲುವಿನ ಬಳಿಕ ಪಾಕಿಸ್ತಾನ 3 ಟೆಸ್ಟ್‌ಗಳ ಸರಣಿಯನ್ನು 1-1ರಲ್ಲಿ ಸಮಬಲಗೊಳಿಸಿದೆ.

ಮೊದಲ ಇನಿಂಗ್ಸ್

ಮುಲ್ತಾನ್‌ನ ಎರಡನೇ ಟಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಈ ಪಂದ್ಯದಲ್ಲಿ ಬಾಬರ್ ಅಜಮ್ ಬದಲಿಗೆ ಕಮ್ರಾನ್ ಗುಲಾಮ್ ಪದಾರ್ಪಣೆ ಮಾಡುವ ಅವಕಾಶ ಪಡೆದರು. ಗುಲಾಮ್ (118) ತಮ್ಮ ಚೊಚ್ಚಲ ಪಂದ್ಯದಲ್ಲೇ ಅಬ್ಬರಿಸಿ ಶತಕ ಬಾರಿಸಿದರು. ಇದರೊಂದಿಗೆ ಬಾಬರ್ ಸ್ಥಾನಕ್ಕೆ ಅಪಾಯ ತಂದರು. ಜೊತೆಗೆ ಸ್ಯಾಮ್ ಅಯೂಬ್ (77), ಮೊಹಮ್ಮದ್ ರಿಜ್ವಾನ್ (41), ಅಘಾ ಸಲ್ಮಾನ್ (31), ಅಮರ್ ಜಮಾಲ್ (37) ಮತ್ತು ನೌಮನ್ ಅಲಿ (32) ಅವರಿಂದಲ್ಲೂ ಜವಾಬ್ದಾರಿಯುವ ಬ್ಯಾಟಿಂಗ್ ಕಂಡು ಬಂದಿತ್ತು. ಅಂತಿಮವಾಗಿ ಮೊದಲ ಇನಿಂಗ್ಸ್‌ನಲ್ಲಿ ಪಾಕಿಸ್ತಾನ 366 ರನ್ ಗಳಿಸಿತು.

ಇದಕ್ಕೆ ಉತ್ತರವಾಗಿ ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಪರ ಬೆನ್ ಡಕೆಟ್ (114) ಶತಕದ ನೆರವಿನಿಂದ 291 ರನ್ ಗಳಿಸಲಷ್ಟೇ ಶಕ್ತವಾಯಿತು. ಇನ್ನುಳಿದ ಯಾವುದೇ ಬ್ಯಾಟರ್‌ಗಳು ಅಬ್ಬರಿಸಲು ಪಾಕಿಸ್ತಾನ ಸ್ಪಿನ್ನರ್‌ಗಳು ಅವಕಾಶ ನೀಡಲಿಲ್ಲ. ಸಾಜಿದ್ ಖಾನ್ 7 ವಿಕೆಟ್ ಕಬಳಿಸಿ ಮಿಂಚಿದರೆ, ನೂಮನ್ ಅಲಿ 3 ವಿಕೆಟ್ ಪಡೆದರು.

ಎರಡನೇ ಇನಿಂಗ್ಸ್

ಪಾಕಿಸ್ತಾನದ ಬ್ಯಾಟರ್‌ಗಳು ಎರಡನೇ ಇನಿಂಗ್ಸ್‌ನಲ್ಲಿ ಹೇಳಿಕೊಳ್ಳುವಂತ ಪ್ರದರ್ಶನ ನೀಡಲಿಲ್ಲ. ಸಲ್ಮಾನ್ ಆಘಾ 63 ರನ್ ಗಳ ಕಲೆ ಹಾಕಿದ್ದು ಬಿಟ್ಟರೆ ಯಾವೊಬ್ಬ ಬ್ಯಾಟರ್ ತಂಡಕ್ಕೆ ಕೊಡುಗೆ ನೀಡಲಿಲ್ಲ. ಹೀಗಾಗಿ ಪಾಕಿಸ್ತಾನ 221 ರನ್ ಗಳಿಗೆ ಸರ್ವಪತನವಾಯಿತು. ಇಂಗ್ಲೆಂಡ್ ಪರ ಸ್ಪಿನ್ನರ್‌ಗಳಾದ ಶೊಯೀಬ್ ಬಶೀರ್ 4 ವಿಕೆಟ್ ಪಡೆದರೆ,ಲೀಚ್ 3 ವಿಕೆಟ್ ಉರಳಿಸಿದರು.

ಪಾಕಿಸ್ತಾನ ನೀಡಿದ 297 ರನ್ ಗಳ ಗುರಿಯನ್ನು ಬೆನ್ನಟ್ಟುವ ಭರವಸೆಯೊಂದಿಗೆ ಇಂಗ್ಲೆಂಡ್ ಮೈದಾನಕ್ಕಿಳಿದಿತ್ತು. ಆದರೆ ಸಾಜಿದ್ ಮತ್ತು ನೂಮನ್ ಅಲಿ ಜೋಡಿ ಎರಡನೇ ಇನ್ನಿಂಗ್ಸ್‌ನಲ್ಲಿಯೂ ತಮ್ಮ ಸ್ಪಿನ್ ಜಾದೂ ಮುಂದುವರೆಸಿದರು. ನೂಮನ್ 8 ವಿಕೆಟ್ ಪಡೆಯುವ ಮೂಲಕ ಇಂಗ್ಲೆಂಡ್ ತಂಡವನ್ನು ಕಟ್ಟಿ ಹಾಕಿದರು. ಸಾಜಿದ್ 2 ವಿಕೆಟ್ ಪಡೆದು ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಎರಡನೇ ಟೆಸ್ಟ್ ಪಂದ್ಯದಲ್ಲಿ ಈ ಇಬ್ಬರೂ ಸ್ಪಿನ್ನರ್‌ಗಳು 20 ವಿಕೆಟ್‌ ಉರುಳಿಸಿ ಇತಿಹಾಸ ನಿರ್ಮಿಸಿದರು.

Story first published: Friday, October 18, 2024, 15:42 [IST]
Other articles published on Oct 18, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+