ನಾನು ಹೇಳಿದಂತೆ ಪಿಚ್ ಸಿದ್ದ ಮಾಡಿಲ್ಲ: ಇಂಗ್ಲೆಂಡ್ ವಿರುದ್ಧ ಸೋತ ಬಳಿಕ ಬಾಬರ್ ಅಜಂ ಪ್ರತಿಕ್ರಿಯೆ!

ಪಾಕಿಸ್ತಾನ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ಅಂತ್ಯವಾಗಿದ್ದು ಈ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ಅಮೋಘ ಪ್ರದರ್ಶನ ನೀಡುವ ಮೂಲಕ ಗೆಲುವು ಸಾಧಿಸಿದೆ. ಈ ಮೂಲಕ ತವರಿನಲ್ಲಿಯೇ ಪಾಕಿಸ್ತಾನ ಮೊದಲ ಪಂದ್ಯ ಸೋತು ಹಿನ್ನಡೆ ಅನುಭವಿಸಿದಂತಾಗಿದೆ. ರಾವಲ್ಪಿಂಡಿಯಲ್ಲಿ ನಡೆದ ಈ ಪಂದ್ಯದಲ್ಲಿ ಬ್ಯಾಟರ್‌ಗಳ ಅಬ್ಬರ ಆರಂಭದಿಳದೇ ಜೋರಾಗಿತ್ತು. ಈ ಪಿಚ್‌ನ ವರ್ತನೆಯನ್ನು ಸಕಾರಾತ್ಮಕವಾಗಿ ಬಳಸಿಕೊಂಡ ಇಂಗ್ಲೆಂಡ್ ಸ್ಪೋಟಕ ಪ್ರದರ್ಶನ ನೀಡಿ ಆತಿಥೇಯರ ಹಿನ್ನಡೆಗೆ ಕಾರಣವಾದರು. ಈ ಮೂಲಕ ಆರಂಭಿಕ ಪಂದ್ಯವನ್ನು ಇಂಗ್ಲೆಂಡ್ ತನ್ನ ವಶಕ್ಕೆ ಪಡೆದುಕೊಂಡಿದೆ.
ಈ ಪಂದ್ಯದ ಮುಕ್ತಾಯದ ಬಳಿಕ ರಾವಲ್ಪಿಂಡ್ ಪಿಚ್‌ನ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ. ಅಭಿಮಾನಿಗಳು ಪಿಸಿಬಿ ವಿರುದ್ಧ ಕಿಡಿ ಕಾರಿದರೆ ಸ್ವತಃ ಪಿಸಿಬಿ ಮುಖ್ಯಸ್ಥ ರಮೀಜ್ ರಾಜಾ ಟೆಸ್ಟ್ ಕ್ರಿಕೆಟ್‌ಗೆ ಪೂರಕವಾಗುವ ಸಮರ್ಥ ಪಿಚ್ ತಯಾರಿಸಲು ಪಾಕಿಸ್ತಾನಕ್ಕೆ ವರ್ಷಗಳ ಸಮಯಾವಕಾಶ ಬೇಕಾಗುತ್ತದೆ ಎಂದಿದ್ದರು. ಇದೀಗ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಮಾತನಾಡಿದ್ದು ಪಿಚ್ ತಯಾರೆಕೆಗೂ ಮುನ್ನ ಕ್ಯೂರೇಟರ್ ತಮ್ಮಲ್ಲಿ ಸಲಹೆಯನ್ನು ಕೇಳಿದ್ದರು ಕೂಡ ತಾನು ಕೇಳಿಕೊಂಡಂತಾ ಪಿಚ್ ಸಿದ್ದಪಡಿಸಿಲ್ಲ ಎಂದಿದ್ದಾರೆ.

ಪಿಚ್ ಬಗ್ಗೆ ಬಾಬರ್ ಮಾತು
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲು ಅನುಭವಿಸಿದ ಬಳಿಕ ಮಾತನಾಡಿರುವ ಬಾಬರ್ ಅಜಂ ಪಿಚ್ ತಯಾರಿಸುವುದಕ್ಕೂ ಮುನ್ನ ಪಿಚ್ ಕ್ಯುರೇಟರ್ ನನ್ನಿಂದ ಸಲಹೆಯನ್ನು ಕೇಳಿದ್ದರು. ಆದರೆ ನಾನು ಕೇಳಿದ್ದ ಸ್ಪಿನ್ನರ್‌ಗಳಿಗೆ ನೆರವಾಗುವಂತಾ ಪಿಚ್ ಇದಾಗಿರಲಿಲ್ಲ ಎಂದಿದ್ದಾರೆ ಪಾಕಿಸ್ತಾನ ತಂಡದ ನಾಯಕ. ಇನ್ನು ಇದೇ ಸಂದರ್ಭದಲ್ಲಿ ಬಾಬರ್ ಅಜಂ ವಾತಾವರಣ ಭಿನ್ನವಾಗಿರುವ ಕಾರಣ ತಾವು ಬಯಸಿದ ಪಿಚ್ ಸಿದ್ದಪಡಿಸುವುದು ಅಸಾಧ್ಯ ಎಂದು ಕೂಡ ಬಾಬರ್ ಅಜಂ ಹೇಳಿದ್ದಾರೆ.

ಬ್ಯಾಟ್ಸ್‌ಮನ್‌ಗಳಿಗೆ ಸ್ವರ್ಗವಾಗಿದ್ದ ರಾವಲ್ಪಿಂಡಿ ಪಿಚ್
ಮೂರು ಪಂದ್ಯಗಳ ಟೆಸ್ಟ್ ಸರಣಿಯ ಪೈಕಿ ಮೊದಲ ಪಂದ್ಯ ರಾವಲ್ಪಿಂಡಿಯಲ್ಲಿ ನಡೆಯಿತು. ಈ ಕ್ರೀಡಾಂಗಣದ ಪಿಚ್ ಬ್ಯಾಟರ್‌ಗಳ ಪಾಲಿಗೆ ಅಕ್ಷರಶಃ ಸ್ವರ್ಗದಂತೆ ಪರಿಣಮಿಸಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಎರಡು ತಂಡಗಳು ಕೂಡ 500ಕ್ಕೂ ಅಧಿಕ ರನ್‌ಗಳಿಸಿದ್ದು ಒಟ್ಟಾರೆಯಾಗಿ ಈ ಪಂದ್ಯದಲ್ಲಿ 7 ಆಟಗಾರರು ಶತಕವನ್ನು ಸಿಡಿಸಿದ್ದಾರೆ. ಇನ್ನು ಇಂಗ್ಲೆಂಡ್ ತಂಡ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದರೆ ಎರಡು ಇನ್ನಿಂಗ್ಸ್‌ನಲ್ಲಿಯೂ ಯಶಸ್ಸು ಸಾಧಿಸಿತು. ಅಂತಿಮವಾಗಿ ಇಂಗ್ಲೆಂಡ್ ತಂಡ ಈ ಪಂದ್ಯದಲ್ಲಿ 74 ರನ್‌ಗಳ ಗೆಲುವು ಸಾಧಿಸಿದೆ.

ಮುಂದಿನ ಪಂದ್ಯಗಳಲ್ಲಿಯೂ ಹೀಗೆಯೇ ಆಡಲಿದ್ದಾರೆ!
ಇನ್ನು ಈ ಸಂದರ್ಭದಲ್ಲಿ ಇಂಗ್ಲೆಂಡ್ ತಂಡ ಮುಂದಿನ ಪಂದ್ಯಗಳಲ್ಲಿಯೂ ಮೊದಲ ಪಂದ್ಯದಲ್ಲಿ ಆಡಿದ ಶೈಲಿಯಲ್ಲಿಯೇ ಆಕ್ರಮಣಕಾರಿಯಾಗಿ ಆಡುವ ನಿರೀಕ್ಷೆ ಹೊಂದಿದ್ದೇವೆ ಎಂದು ಬಾಬರ್ ಅಜಂ ಹೇಳಿದ್ದಾರೆ. "ಅವರು ಹೀಗೆಯೇ ಮುಂದಿನ ಪಂದ್ಯಗಳಲ್ಲಿಯೂ ಆಡುವ ನಿರೀಕ್ಷೆಯಿದೆ. ಇಂಥಾ ಸಂದರ್ಭದಲ್ಲಿ ಬವೌಲರ್‌ಗಳು ಸೂಕ್ತವಾದ ಪ್ರದೇಶಗಳಲ್ಲಿ ಬೌಲಿಂಗ್ ಮಾಡದಿದ್ದರೆ ಅದು ನಾಯಕನಿಗೆ ಬಹಳ ಕಷ್ಟವಾಗುತ್ತದೆ. ಆದರೆ ಎರಡು ಇನ್ನಿಂಗ್ಸ್‌ನಲ್ಲಿಯೂ ಅವರು ಆಡಿದ ರೀತಿಗೆ ನಾನು ಶ್ರೇಯಸ್ಸು ನೀಡಲೇ ಬೇಕು" ಎಂದಿದ್ದಾರೆ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ

ಶುಕ್ರವಾರದಿಂದ ಎರಡನೇ ಪಂದ್ಯ
ಇನ್ನು ಈ ಸರಣಿಯ ಎರಡನೇ ಪಂದ್ಯ ಡಿಸೆಂಬರ್ 9 ಶುಕ್ರವಾರದಿಂದ ಆರಂಭವಾಗಲಿದೆ. ಮುಲ್ತಾನ್‌ನಲ್ಲಿ ಈ ಪಂದ್ಯ ನಡೆಯಲಿದ್ದು ಎರಡು ತಂಡಗಳು ಕೂಡ ಈ ಪಂದ್ಯಕ್ಕೆ ಸಿದ್ಧತೆ ನಡೆಸುತ್ತಿದೆ. ಪಾಕಿಸ್ತಾನದ ಪಾಲಿಗೆ ಈ ಪಂದ್ಯ ಮಹತ್ವದ್ದಾಗಿದ್ದು ಸರಣಿ ಸಮಬಲಗೊಳಿಸುವ ವಿಶ್ವಾಸದಲ್ಲಿದೆ.
ಪಾಕಿಸ್ತಾನ ಸಂಪೂರ್ಣ ಸ್ಕ್ವಾಡ್: ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಅಜರ್ ಅಲಿ, ಬಾಬರ್ ಅಜಮ್ (ನಾಯಕ), ಸೌದ್ ಶಕೀಲ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ನಸೀಮ್ ಶಾ, ಹ್ಯಾರಿಸ್ ರೌಫ್, ಮೊಹಮ್ಮದ್ ಅಲಿ, ಜಾಹಿದ್ ಮಹಮೂದ್, ಶಾನ್ ಮಸೂದ್, ಸರ್ಫರಾಜ್ ಅಹ್ಮದ್, ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಂ ಜೂನಿಯರ್, ನೌಮನ್ ಅಲಿ, ಫಹೀಮ್ ಅಶ್ರಫ್, ಅಬ್ರಾರ್ ಅಹ್ಮದ್
ಇಂಗ್ಲೆಂಡ್ ಸಂಪೂರ್ಣ ಸ್ಕ್ವಾಡ್: ಝಾಕ್ ಕ್ರಾಲಿ, ಬೆನ್ ಡಕೆಟ್, ಆಲಿ ಪೋಪ್ (ವಿಕೆಟ್ ಕೀಪರ್), ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಲಿಯಾಮ್ ಲಿವಿಂಗ್ಸ್ಟೋನ್, ವಿಲ್ ಜ್ಯಾಕ್ಸ್, ಜ್ಯಾಕ್ ಲೀಚ್, ಆಲಿ ರಾಬಿನ್ಸನ್, ಜೇಮ್ಸ್ ಆಂಡರ್ಸನ್, ಕೀಟನ್ ಜೆನ್ನಿಂಗ್ಸ್, ಬೆನ್ ಫೋಕ್ಸ್, ಜೇಮೀ ಓವರ್ಟನ್, ರೆಹಾನ್ ಅಹ್ಮದ್, ಮಾರ್ಕ್ ವುಡ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications