PAK vs IRE T20: ಟಿ20 ಇತಿಹಾಸದಲ್ಲೇ ಪಾಕಿಸ್ತಾನ ವಿರುದ್ಧ ಐರ್ಲೆಂಡ್‌ಗೆ ಮೊದಲ ಜಯ
ಐಸಿಸಿ 2024ರ ಪುರಷರ ಟಿ20 ವಿಶ್ವಕಪ್‌ಗೆ ಭರ್ಜರಿ ತಯಾರಿ ನಡೆಸುತ್ತಿರುವ ಪಾಕಿಸ್ತಾನ ತಂಡಕ್ಕೆ ಟೂರ್ನಿಗೂ ಮುನ್ನ ಭಾರಿ ಹಿನ್ನಡೆಯಾಗಿದೆ.
ಕ್ಲೋಂಟಾರ್ಫ್ ಕ್ರಿಕೆಟ್ ಕ್ಲಬ್‌ನಲ್ಲಿ ಶುಕ್ರವಾರ ನಡೆದ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಐರ್ಲೆಂಡ್ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದೆ. ಇದು ಟಿ20 ಇತಿಹಾಸದಲ್ಲಿ ಪಾಕಿಸ್ತಾನ ವಿರುದ್ಧ ಐರ್ಲೆಂಡ್‌ನ ಮೊದಲ ಜಯವಾಗಿದೆ. ಇದಕ್ಕೂ ಮುನ್ನ ನ್ಯೂಜಿಲೆಂಡ್‌ನ ಬಿ ತಂಡ ಪಾಕಿಸ್ತಾನವನ್ನು ಸೋಲಿಸಿತ್ತು.

ಪಾಕಿಸ್ತಾನವು ತನ್ನ ಪ್ರಮುಖ ಬೌಲರ್‌ಗಳೊಂದಿಗೆ ಐರ್ಲೆಂಡ್ ಪ್ರವಾಸ ಕೈಗೊಂಡಿದೆ. ಶಾದಾಬ್ ಖಾನ್, ನಸೀಮ್ ಶಾ ಮತ್ತು ಶಾಹೀನ್ ಶಾ ಆಫ್ರಿದಿ ಅಂತಹ ಬೌಲರ್‌ಗಳಿದ್ದರೂ 182 ರನ್‌ಗಳ ಟಾರ್ಗೆಟ್ ಉಳಿಸುವಲ್ಲಿ ಪಾಕಿಸ್ತಾನ ಯಶಸ್ವಿಯಾಗಲಿಲ್ಲ. ಹೀಗಾಗಿ ಐರ್ಲೆಂಡ್ ವಿರುದ್ಧ ಪಾಕಿಸ್ತಾನ ತೀವ್ರ ಮುಖಭಂಗ ಅನುಭಿಸಿದೆ.
ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು. ಪಾಕ್ ಪರ ನಾಯಕ ಅಜಮ್ (57) ಅರ್ಧಶತಕ ಬಾರಿಸಿದರೆ, ಸ್ಯಾಮ್ ಅಯೂಬ್ (43) ಮತ್ತು ಇಫ್ತಿಕರ್ ಅಹ್ಮದ್ 15 ಎಸೆತಗಳಲ್ಲಿ 37 ರನ್ ಗಳಿಸಿದರು. ಐರ್ಲೆಂಡ್ ಪರ ಕ್ರೇಗ್ ಯಂಗ್ ಎರಡು ವಿಕೆಟ್‌ಗಳನ್ನು ಕಬಳಿಸಿ ತಂಡದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಮಾರ್ಕ್ ಆಡೈರ್ ಮತ್ತು ಗರೆಥ್ ಡೆಲಾನಿ ತಲಾ ಒಂದು ವಿಕೆಟ್ ಪಡೆದರು.
ಪಾಕಿಸ್ತಾನ ನೀಡಿದ 182 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಐರ್ಲೆಂಡ್ 19.4 ಎಸೆತಗಳಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು ಗೆದ್ದು ಬೀಗಿತ್ತು. ಐರ್ಲೆಂಡ್ ಪರ ಅನುಭವಿ ಬ್ಯಾಟರ್ ಆಂಡಿ ಬಲ್ಬಿರ್ನಿ 55 ಎಸೆತಗಳಲ್ಲಿ 10 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 77 ರನ್ ಗಳಿಸಿ ಗೆಲುವಿಗೆ ಕಾರಣನಾದರು.
ಪಾಕಿಸ್ತಾನ ಪರ ಅಬ್ಬಾಸ್ ಅಫ್ರಿದಿ ಎರಡು ವಿಕೆಟ್ ಪಡೆದರೆ, ಶಾಹೀನ್ ಶಾ ಆಫ್ರಿದಿ, ನಸೀಮ್ ಶಾ ಮತ್ತು ಇಮಾದ್ ವಾಸಿಮ್ ತಲಾ ಒಂದು ವಿಕೆಟ್ ಪಡೆದರು.
ಪಾಕ್‌ಗೆ ಎದುರಾದ ಸಂಕಷ್ಟ
ಟಿ20 ವಿಶ್ವಕಪ್‌ಗೂ ಮುನ್ನ ಪಾಕಿಸ್ತಾನ ತನ್ನ ಕಳಪೆ ಪ್ರದರ್ಶನದಿಂದ ಸಂಕಷ್ಟ ಅನುಭವಿಸಲಿದೆ. ಏಕೆಂದರೆ ವಿಶ್ವಕಪ್‌ಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಅದಕ್ಕೂ ಮುನ್ನ ಐರ್ಲೆಂಡ್ ವಿರುದ್ಧ ಸರಣಿ ಸೋತರೆ ಪಾಕಿಸ್ತಾನಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.
ಟಿ20 ವಿಶ್ವಕಪ್ ಗೆಲ್ಲುವ ಕನಸು ಕಾಣುತ್ತಿರುವ ಪಾಕಿಸ್ತಾನ ಬೌಲಿಂಗ್‌ನಲ್ಲಿ ಸುಧಾರಣೆ ತರಬೇಕಿದೆ. ಇದಕ್ಕೂ ಮುನ್ನ ಪಾಕಿಸ್ತಾನ ತಂಡ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅಗ್ರ 17 ಆಟಗಾರರಿಲ್ಲದೆ ಸೋತಿತ್ತು. ಪಾಕಿಸ್ತಾನದ ಕಳಪೆ ಬೌಲಿಂಗ್‌ನಿಂದಾಗಿ ಆ ಪಂದ್ಯವೂ ಸೋತಿತ್ತು.
ಇತ್ತೀಚೆಗಷ್ಟೇ ಪಾಕ್ ತಂಡ ಸೇನಾ ತರಬೇತಿಯನ್ನೂ ಪಡೆದಿತ್ತು. ಇದರಿಂದ ಫಿಟ್ನೆಸ್ ಸಂಬಂಧಿತ ತೊಂದರೆಗಳನ್ನು ನಿವಾರಿಸಬಹುದು ಎಂದು ತಿಳಿಸಿತ್ತು. ಜೊತೆಗೆ ಕೆಲ ದಿನಗಳ ಹಿಂದೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ, ಟಿ20 ವಿಶ್ವಕಪ್ ಗೆದ್ದರೆ ಪ್ರತಿ ಪಾಕ್ ಆಟಗಾರನಿಗೆ 100,000 ಯುಎಸ್ ಡಾಲರ್ ಬಹುಮಾನ ಘೋಷಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications