PAK vs NZ : ಕೇನ್ ವಿಲಿಯಮ್ಸನ್ ಅಮೋಘ ದ್ವಿಶತಕ: ತವರಿನಲ್ಲಿ ಮತ್ತೊಂದು ಟೆಸ್ಟ್ ಸೋಲಿನ ಭೀತಿಯಲ್ಲಿ ಪಾಕಿಸ್ತಾನ

ಆಸ್ಟ್ರೇಲಿಯಾ ತಂಡದ ವಿರುದ್ಧ ತವರಿನಲ್ಲಿಯೇ ಹೀನಾಯ ಟೆಸ್ಟ್ ಸರಣಿ ಸೋಲಿನ ಬಳಿಕ ಪಾಕಿಸ್ತಾನ ನ್ಯೂಜಿಲೆಂಡ್ ತಂಡದ ವಿರುದ್ಧ ಟೆಸ್ಟ್ ಸರಣಿಯಲ್ಲಿ ಆಡುತ್ತಿದೆ. ಕರಾಚಿಯಲ್ಲಿ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡ ಈಗ ಸೋಲಿನ ಭೀತಿಯಲ್ಲಿದ್ದು ಕೊನೆಯ ದಿನದಾಟ ಸೋಲಿನಿಂದ ತಪ್ಪಿಸಿಕೊಳ್ಳಲು ಪಾಕಿಸ್ತಾನ ಹರಸಾಹಸ ಪಡಲಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ತಂಡದ ಪರವಾಗಿ ಕೇನ್ ವಿಲಿಯಮ್ಸನ್ ಅಮೋಘ ದ್ವಿಶತಕ ಬಾರಿಸಿದ್ದು ಟಾಮ್ ಲಾಥಮ್ ಶತಕದ ಕೊಡುಗೆ ನೀಡಿದ್ದರು. ಇದರ ಪರಿಣಾಮವಾಗಿ ನ್ಯೂಜಿಲೆಂಡ್ ತಂಡ 612 ರನ್‌ಗಳಿಸಿದ್ದು ಈ ಮೂಲಕ 174 ರನ್‌ಗಳ ಮುನ್ನಡೆ ಸಾಧಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಬಳಿಕ ನಾಲ್ಕನೇ ದಿನದ ಅಂತ್ಯಕ್ಕೆ ಎರಡನೇ ಇನ್ನಿಂಗ್ಸ್‌ನ ಬ್ಯಾಟಿಂಗ್ ಆರಂಭಿಸಿರುವ ಪಾಕಿಸ್ತಾನ ಈಗಾಗಲೇ ಎರಡು ವಿಕೆಟ್ ಕಳೆದುಕೊಂಡಿದ್ದು ಒತ್ತಡದಲ್ಲಿದೆ.

ಇನ್ನೂ ಹಿನ್ನಡೆಯಲ್ಲಿದೆ ಪಾಕಿಸ್ತಾನ
ನಾಲ್ಕನೇ ದಿನದಾಟದಲ್ಲಿ ಪಾಕಿಸ್ತಾನ ಎರಡನೇ ಇನ್ನಿಂಗ್ಸ್‌ನ ಬ್ಯಾಟಿಂಗ್ ಆರಂಭಿಸಿದ್ದು ದಿನದ ಅಂತ್ಯಕ್ಕೆ 77 ರನ್‌ಗಳನ್ನು ಗಳಿಸಿ 2 ವಿಕೆಟ್ ಕಳೆದುಕೊಂಡಿದೆ. ಇನ್ನು ಕೂಡ ನ್ಯೂಜಿಲೆಂಡ್‌ನ ಮೊದಲ ಇನ್ನಿಂಗ್ಸ್‌ನ ರನ್‌ಗಿಂತ ಪಾಕಿಸ್ತಾನ 93 ರನ್‌ಗಳ ಹಿನ್ನಡೆಯಲ್ಲಿದೆ. ಆರಂಭಿಕ ಆಟಗಾರ ಅಬ್ದುಲ್ಲಾ ಶಫೀಕ್ ಹಾಗೂ 3ನೇ ಕ್ರಮಾಂಕದ ಆಟಗಾರ ಶಾನ್ ಮಸೂದ್ ವಿಕೆಟ್ ಕಳೆದುಕೊಂಡಿದೆ. ಕರಾಚಿ ಕ್ರೀಡಾಂಗಣದ ನಿರ್ಜೀವ ಪಿಚ್‌ನಲ್ಲಿ ಕಿವೀಸ್ ಸ್ಪಿನ್ನರ್‌ಗಳು ಪಾಕ್ ದಾಂಡಿಗರ ವಿರುದ್ಧ ಮೇಲುಗೈ ಸಾಧಿಸುವ ಆತ್ಮವಿಶ್ವಾಸ ಮೂಡಿಸಿದ್ದಾರೆ.

5ನೇ ದ್ವಿಶತಕ ಸಿಡಿಸಿದ ಕೇನ್
ಇನ್ನು ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಅಮೋಘ ದ್ವಿಶತಕ ಸಿಡಿಸಿದ್ದಾರೆ. ಈ ಮೂಲಕ ಟೆಸ್ಟ್ ಮಾದರಿಯಲ್ಲಿ ಕಿವೀಸ್ ನಾಯಕ 5ನೇ ದ್ವಿಶತಕದ ಸಾಧನೆ ಮಾಡಿದ್ದು ಜೋ ರೂಟ್, ರಾಹುಲ್ ದ್ರಾವಿಡ್, ಗ್ರೇಮ್ ಸ್ಮಿತ್ ಮತ್ತು ಅಲಸ್ಟರ್ ಕುಕ್ ಸಾಧನೆಯನ್ನು ಸರಿಗಟ್ಟಿದ್ದಾರೆ. ಅತಿ ಹೆಚ್ಚು ದ್ವಿಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಡಾನ್ ಬ್ರಾಡ್ಮನ್ ಮೊದಲ ಸ್ಥಾನದಲ್ಲಿದ್ದು 12 ದ್ವಿಶತಕ ಸಿಡಿಸಿದ್ದಾರೆ. ಇನ್ನು 3ನೇ ದಿನದಾಟದಲ್ಲಿ ಕೇನ್ ವಿಲಿಯಮ್ಸನ್ ಬಹುತೇಕ ಎರಡು ವರ್ಷಗಳ ಶತಕದ ಬರವನ್ನು ನೀಗಿಸಿದ್ದರು.

ಕುತೂಹಲ ಮೂಡಿಸಿದ ಅಂತಿಮ ದಿನದಾಟ
ಇನ್ನು ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ನಡೆಸಿದ್ದ ಪಾಕಿಸ್ತಾನ ನಾಯಕ ಬಾಬರ್ ಅಜಂ ಅವರ ಭರ್ಜರಿ 161 ರನ್‌ಗಳ ಕೊಡುಗೆ ಹಾಗೂ ಅಘಾ ಸಲ್ಮಾನ್ ಅವರ ಶತಕದ ನೆರವಿನಿಂದಾಗಿ 438 ರನ್‌ಗಳನ್ನು ಗಳಿಸಿತ್ತು. ಅದಕ್ಕೆ ಪ್ರತಿಯಾಗಿ ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 612 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ 174 ರನ್‌ಗಳ ಮುನ್ನಡೆ ಪಡೆದ ನ್ಯೂಜಿಲೆಂಡ್ ತಂಡ ಬೌಲಿಂಗ್‌ನಲ್ಲಿಯೂ ಅಂತಿಮ ದಿನ ಅಬ್ಬರಿಸುವ ನಿರೀಕ್ಷೆ ಮೂಡಿಸಿದೆ.
ಇನ್ನು ಈಗಾಗಲೇ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸೋಲು ಅನುಭವಿಸಿ ಸಾಕಷ್ಟ ಟೀಕೆಗೆ ಗುರಿಯಾಗಿರುವ ಪಾಕಿಸ್ತಾನ ಅಂತಿಮ ದಿನ ಟೆಸ್ಟ್ ಪಂದ್ಯವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸರ್ವ ಪ್ರಯತ್ನ ನಡೆಸಲಿದೆ.

ಇತ್ತಂಡಗಳ ಸಂಪೂರ್ಣ ಸ್ಕ್ವಾಡ್
ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಶಾನ್ ಮಸೂದ್, ಬಾಬರ್ ಅಜಮ್ (ನಾಯಕ), ಸೌದ್ ಶಕೀಲ್, ಸರ್ಫರಾಜ್ ಅಹ್ಮದ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ನೌಮನ್ ಅಲಿ, ಮೊಹಮ್ಮದ್ ವಾಸಿಂ ಜೂನಿಯರ್, ಅಬ್ರಾರ್ ಅಹ್ಮದ್, ಮೀರ್ ಹಮ್ಜಾ
ಬೆಂಚ್: ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ನವಾಜ್, ನಸೀಮ್ ಶಾ, ಹಸನ್ ಅಲಿ, ಜಾಹಿದ್ ಮಹಮೂದ್, ಶಹನವಾಜ್ ದಹಾನಿ, ಸಾಜಿದ್ ಖಾನ್, ಕಮ್ರಾನ್ ಗುಲಾಮ್
ಟಾಮ್ ಲ್ಯಾಥಮ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್, ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಮೈಕೆಲ್ ಬ್ರೇಸ್‌ವೆಲ್,
ಟಿಮ್ ಸೌಥಿ (ನಾಯಕ), ಇಶ್ ಸೋಧಿ, ನೀಲ್ ವ್ಯಾಗ್ನರ್, ಅಜಾಜ್ ಪಟೇಲ್
ಬೆಂಚ್: ವಿಲ್ ಯಂಗ್, ಮ್ಯಾಟ್ ಹೆನ್ರಿ, ಬ್ಲೇರ್ ಟಿಕ್ನರ್, ಗ್ಲೆನ್ ಫಿಲಿಪ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications