ಪಾಕಿಸ್ತಾನ vs ನ್ಯೂಜಿಲೆಂಡ್ ಟೆಸ್ಟ್ ಸರಣಿ: ಒತ್ತಡವನ್ನು ಹೇರಿಕೊಳ್ಳಲಾರೆ ಎಂದ ಬಾಬರ್ ಅಜಂ

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವೈಟ್‌ವಾಶ್ ಅವಮಾನಕ್ಕೆ ಒಳಗಾಗಿದ್ದ ಪಾಕಿಸ್ತಾನ ಈಗ ತವರಿನಲ್ಲಿ ಮತ್ತೊಂದು ಪಂದ್ಯಕ್ಕೆ ಸಜ್ಜಾಗುತ್ತಿದೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಹಾಗೂ ಏಕದಿನ ಸರಣಿಯಲ್ಲಿ ಪಾಕಿಸ್ತಾನ ಆಡಲಿದ್ದು ಈ ಸರಣಿಯಲ್ಲಿ ಪಾಕ್ ತಂಡದ ಪ್ರದರ್ಶನ ಕುತೂಹಲ ಮೂಡಿಸಿದೆ. ಈ ಸರಣಿಯ ಆರಂಭಕ್ಕೂ ಮುನ್ನ ಮಾತನಾಡಿರುವ ಪಾಕ್ ನಾಯಕ ಬಾಬರ್ ಅಜಂ ತಾನು ಯಾವುದೇ ಒತ್ತಡವನ್ನು ಹೇರಿಕೊಳ್ಳಲಾರೆ ಎಂದಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೂ ಮುನ್ನ ಮಾತನಾಡಿದ ಬಾಬರ್ ಅಜಂ ಒತ್ತಡವನ್ನು ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಅವರು ತಮ್ಮ ತಂಡದಲ್ಲಿ ಒಗ್ಗಟ್ಟಿದೆ ಎಂದಿದ್ದಾರೆ.
"ನಾನು ಪ್ರಮಾಣಿಕವಾಗಿ ಹೇಳುತ್ತಿದ್ದೇನೆ, ಯಾವುದೇ ಒತ್ತಡವನ್ನು ತೆಗೆದುಕೊಳ್ಳುವುದಿಲ್ಲ. ಒತ್ತಡ ಅನುಭವಿಸಿದರೆ ಪ್ರದರ್ಶನ ಸಹಜವಾಗಿಯೇ ಕೆಳಮುಖವಾಗುತ್ತದೆ. ನಾನು ಇದು ಹೊಸ ದಿನ, ಹೊಸ ತಂಡ ಹಾಗೂ ಹೊಸ ಪಂದ್ಯ ಎಂದೇ ಭಾವಿಸುತ್ತೇನೆ. ಆಗ ವೆಲ್ಲವೂ ಭಿನ್ನವಾಗಿರುತ್ತದೆ. ಇದು ನಮ್ಮ ತಂಡ, ಈ ತಂಡ ಕೇವಲ ನನಗೆ ಮಾತ್ರವೇ ಬೆಂಬಲ ನೀಡುವುದಿಲ್ಲ. ಎಲ್ಲರೂ ಪ್ರತಿಯೊಬ್ಬರಿಗೂ ಸಹಕಾರಿ ನೀಡುತ್ತಾರೆ" ಎಂದಿದ್ದಾರೆ ಬಾಬರ್ ಅಜಂ.
ಪಾಕಿಸ್ತಾನದ ನಾಯಕ ಬಾಬರ್ ಅಜಂ ತನ್ನನ್ನು ತನ್ನ ವಲಯದಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಪಾಕಿಸ್ತಾನ ತಂಡ ಕಮ್‌ಬ್ಯಾಕ್ ಮಾಡಲಿದ್ದು ನ್ಯೂಜಿಲೆಂಡ್ ವಿರುದ್ಧದ ಸರಣಿಯನ್ನು ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಮುಂದುವರಿದ ಬಾಬರ್ ಅಜಂ ಕಳೆದ ಎರಡು-ಮೂರು ದಿನಗಳಲ್ಲಿ ಪರಿಸ್ಥಿತಿ ಸಾಕಷ್ಟು ಬದಲಾಗಿದೆ. ಆದರೆ ವೃತ್ತಿಪರರಾಗಿ ಅಂತಹ ವಿಷಯಗಳನ್ನು ಎದುರಿಸಬೇಕಾಗಿದೆ" ಎಂದು ಹೇಳಿದ್ದಾರೆ. ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರನ್ನು ಪಿಸಿಬಿ ಹಂಗಾಮಿ ಮುಖ್ಯ ಆಯ್ಕೆಗಾರರನ್ನಾಗಿ ನೇಮಕಗೊಳಿಸಿದೆ.
ಪಾಕಿಸ್ತಾನ ತಂಡ: ಬಾಬರ್ ಆಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟಗ ಕೀಪರ್), ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಅಘಾ ಸಲ್ಮಾನ್, ಸೌದ್ ಶಕೀಲ್, ಮೊಹಮ್ಮದ್ ನವಾಜ್, ನಸೀಮ್ ಶಾ, ಹಸನ್ ಅಲಿ, ನೌಮನ್ ಅಲಿ, ಅಬ್ರಾರ್ ಅಹ್ಮದ್, ಮೊಹಮ್ಮದ್ ವಾಸಿಂ ಜೂನಿಯರ್, ಜಾಹಿದ್ ಮಹಮೂದ್, ಶಾನವಾಜ್ ದಹಾನಿ, ಸಾಜಿದ್ ಖಾನ್, ಮೀರ್ ಹಮ್ಜಾ, ಕಮ್ರಾನ್ ಗುಲಾಮ್, ಸರ್ಫರಾಜ್ ಅಹ್ಮದ್, ಶಾನ್ ಮಸೂದ್
ನ್ಯೂಜಿಲೆಂಡ್ ತಂಡ: ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಟಿಮ್ ಸೌಥಿ (ನಾಯಕ), ಟಾಮ್ ಲ್ಯಾಥಮ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್, ವಿಲ್ ಯಂಗ್, ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಮೈಕೆಲ್ ಬ್ರೇಸ್‌ವೆಲ್, ಅಜಾಜ್ ಪಟೇಲ್, ನೀಲ್ ವ್ಯಾಗ್ನರ್, ಇಶ್ ಸೋಧಿ, ಮ್ಯಾಟ್ ಹೆನ್ರಿ, ಗ್ಲೆನ್ ಫಿಲಿಪ್ಸ್, ಬ್ಲೇರ್ ಟಿಕ್ನರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications