ಕಿವೀಸ್ ವಿರುದ್ಧದ ಏಕದಿನ ಸರಣಿಗೆ ಪಾಕಿಸ್ತಾನ ತಂಡ ಪ್ರಕಟ: ಕಮ್‌ಬ್ಯಾಕ್ ಮಾಡಿದ ಅನುಭವಿ ಆಟಗಾರರು

ನ್ಯೂಜಿಲೆಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡುತ್ತಿದ್ದು ಈ ಸರಣಿಯ ಬಳಿಕ ಏಕದಿನ ಸರಣಿಯಲ್ಲಿ ಮುಖಾಮುಖಿಯಾಗಲಿದೆ. ತವರಿನಲ್ಲಿಯೇ ನಡೆಯಲಿರುವ ಈ ಸರಣಿಗೆ ಪಾಕಿಸ್ತಾನ ತನ್ನ ತಂಡವನ್ನು ಗುರುವಾರ ಆಯ್ಕೆ ಮಾಡಿದೆ. ಆರಂಭಿಕ ಆಟಗಾರ ಗಾಯದೊಂದ ಚೇತರಿಸಿಕೊಂಡಿದ್ದು ಈ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಮಧ್ಯಮ ಕ್ರಮಾಂಕದ ಆಟಗಾರ ಹ್ಯಾರಿಸ್ ಸೊಹೈಲ್ ಕೂಡ ಮತ್ತೆ ಪಾಕ್ ಏಕದಿನ ತಂಡದಲ್ಲಿ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಅನುಭವಿ ವೇಗಿ ಹ್ಯಾರಿಸ್ ರೌಫ್ ಈ ಸರಣಿಯ ಮೂಲಕ ಮತ್ತೆ ಪಾಕಿಸ್ತಾನ ಏಕದಿನ ತಂಡಕ್ಕೆ ಮರಳಿದ್ದಾರೆ. ಇನ್ನು ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಮಿಂಚಿರುವ ಆಟಗಾರ ತಯ್ಯಬ್ ತಾಹಿರ್ ಇದೇ ಮೊದಲ ಬಾರಿಗೆ ಪಾಕಿಸ್ತಾನ ತಂಡದ ಕರೆ ಸ್ವೀಕರಿಸಿದ್ದು, ಗಾಯದಿಂದ ಹೊರಗುಳಿದಿರುವ ಶದಬ್ ಖಾನ್ ಸ್ಥಾನದಲ್ಲಿ ಉಸ್ಮಾ ಮಿರ್‌ಗೆ ಅವಕಾಶ ದೊರೆತಿದೆ.
ಇನ್ನು ಈ ಆಯ್ಕೆಯ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಹಂಗಾಮಿ ಮುಖ್ಯಸ್ಥ ಶಾಹಿದ್ ಅಫ್ರಿದಿ ಪ್ರತಿಕ್ರಿಯೆ ನೀಡಿದ್ದಾರೆ. "ಶದಬ್ ಖಾನ್ ಬೆರಳಿನ ಗಾಯದಿಂದ ಚೇತರಿಸಿಕೊಂಡಿಲ್ಲ. ಅವರೊಂದಿಗೆ ಇಂದು ಮುಂಜಾನೆ ಮಾತನಾಡಿದ್ದು ಅವರು ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಅಲಭ್ಯವಾಗಲಿದ್ದಾರೆ. ಈ ತಂಡವನ್ನು ಆಯ್ಕೆ ಮಾಡುವ ಮುನ್ನ ನಾಯಕ ಬಾಬರ್ ಹಾಗೂ ಕೋಚ್ ಸಕ್ಲೈನ್ ಜೊತೆಗೆ ಮಾತನಾಡಿ ಅವರ ಆಯ್ಕೆಯ 16 ಸದಸ್ಯರನ್ನು ಹೆಸರಿಸುವಂತೆ ಹೇಳಲಾಗಿತ್ತು. ಯಾವೆಲ್ಲಾ ವಿಭಾಗದಲ್ಲಿ ಪ್ರಗತಿ ಸಾಧಿಸಬೇಕು ಎಂಬ ಬಗ್ಗೆ ನಾವು ಚರ್ಚಿಸಲಿದ್ದೇವೆ" ಎಂದಿದ್ದಾರೆ ಶಾಹೀದ್ ಅಫ್ರಿದಿ.
"ಇದು ನನಗೆ ನೀಡಿರುವ ಪ್ರಮುಖ ಜವಾಬ್ದಾರಿಯಾಗಿದೆ, ಪಾಕಿಸ್ತಾನದಲ್ಲಿ ಪ್ರತಿಭೆಗಳ ಕೊರತೆಯಿಲ್ಲ ಇದು ಬಹಳ ಉತ್ತಮವಾದ ಸಂಗತಿಯಾಗಿದೆ. ನಾನು ಸೀಮಿತ ಅವಧಿಗೆ ಈ ಸ್ಥಾನದಲ್ಲಿದ್ದು ಪಾಕಿಸ್ತಾನದ ಭವಿಷ್ಯವನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಮುಖ್ಯವಾಗಿದೆ" ಎಂದಿದ್ದಾರೆ ಶಾಹೀದ್ ಅಫ್ರಿದಿ.
ಪಾಕಿಸ್ತಾನ ತಂಡ ಹೀಗಿದೆ: ಬಾಬರ್ ಅಜಮ್ (ನಾಯಕ), ಫಖರ್ ಜಮಾನ್, ಹ್ಯಾರಿಸ್ ರೌಫ್, ಹ್ಯಾರಿಸ್ ಸೊಹೈಲ್, ಇಮಾಮ್-ಉಲ್-ಹಕ್, ಕಮ್ರಾನ್ ಗುಲಾಮ್, ಮೊಹಮ್ಮದ್ ಹಸ್ನೇನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಮೊಹಮ್ಮದ್ ವಾಸಿಮ್ ಜೂನಿಯರ್, ನಸೀಮ್ ಶಾ, ಸಲ್ಮಾನ್ ಅಲಿ ಅಘಾ, ಶಾನವಾಜ್ ದಹಾನಿ, ಶಾನ್ ಮಸೂದ್, ತಯ್ಯಬ್ ತಾಹಿರ್ ಮತ್ತು ಉಸಾಮಾ ಮಿರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications