Pak Vs NZ T20: ಪಾಕಿಸ್ತಾನದ ವಿರುದ್ಧ ನಾಲ್ಕು ರನ್‌ಗಳ ರೋಚಕ ಗೆಲುವು ಸಾಧಿಸಿದ ನ್ಯೂಜಿಲೆಂಡ್
ಪಾಕಿಸ್ತಾನದ ವಿರುದ್ಧದ ಟಿ29 ಸರಣಿಯ ಮೂರನೇ ಪಂದ್ಯದಲ್ಲಿ ನ್ಯೂಜಿಲೆಂಡ್ 4 ರನ್ ಗಳ ರೋಚಕ ಗೆಲುವು ಸಾಧಿಸಿದೆ. ಲಾಹೋರ್ ನ ಗಡಾಫಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ನಾಯಕ ಟಾಮ್ ಲಾಥಮ್ ಜವಾಬ್ದಾರಿಯುತ ಅರ್ಧಶತಕದ ನೆರವಿನಿಂದ ನ್ಯೂಜಿಲೆಂಡ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 163 ರನ್ ಗಳಿಸಿತು.
ಆರಂಭಿಕ ಆಟಗಾರ ಚಾಡ್ ಬೋವ್ಸ್ ಕೇವಲ 7 ರನ್ ಗಳಿಸಿ ಔಟಾದರು,ವಿಲ್ ಯಂಗ್ 15 ಎಸೆತಗಳಲ್ಲಿ 17 ರನ್ ಗಳಿಸಿದರು. ನಂತರ ಬಂದ ಡೇರಿಲ್ ಮಿಚೆಲ್ ನಾಯಕ ಟಾಮ್ ಲಾಥಮ್ ಜೊತೆಯಾಗಿ ಉತ್ತಮ ಇನ್ನಿಂಗ್ಸ್ ಆಡಿದರು.3ನೇ ವಿಕೆಟ್ ಗೆ ಈ ಜೋಡಿ 43 ಎಸೆತಗಳಲ್ಲಿ 65 ರನ್ ಕಲೆಹಾಕಿದರು. ಮಿಚೆಲ್ 26 ಎಸೆತಗಳಲ್ಲಿ 2 ಬೌಂಡರಿ ಒಂದು ಸಿಕ್ಸರ್ ಸಹಿತ 33 ರನ್ ಗಳಿಸಿದರು.

ಮಾರ್ಕ್ ಚಾಪ್‌ಮಾನ್ 9 ಎಸೆತಗಳಲ್ಲಿ ಅಜೇಯ 16 ರನ್ ಗಳಿಸಿದರು. ಜಿಮ್ಮಿ ನೀಶಮ್ 6 ಎಸೆತಗಳಲ್ಲಿ 10 ರನ್ ಗಳಿಸಿದರು. ರಚಿನ್ ರವೀಂದ್ರ ಅಜೇಯ 8 ರನ್ ಗಳಿಸಿದರು. ಪಾಕ್ ಪರವಾಗಿ ಶಹೀನ್ ಅಫ್ರಿದಿ ಮತ್ತು ಹ್ಯಾರಿಸ್ ರೌಫ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ಶದಾಬ್ ಖಾನ್ 1 ವಿಕೆಟ್ ಪಡೆದರು.

ಆರಂಭದಲ್ಲೇ ಕುಸಿದ ಪಾಕಿಸ್ತಾನ
ಸವಾಲಿನ ಮೊತ್ತವನ್ನು ಬೆನ್ನತ್ತಿದ ಪಾಕಿಸ್ತಾನ ಆರಂಭದಲ್ಲೇ ಆಘಾತ ಅನುಭವಿಸಿತು. ನಾಯಕ ಬಾಬರ್ ಅಜಂ 6 ಎಸೆತಗಳಲ್ಲಿ ಕೇವಲ ಒಂದು ರನ್ ಗಳಿಸಿ ಔಟಾದರು. ಮೊಹಮ್ಮದ್ ರಿಜ್ವಾನ್ ಕೂಡ 6 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಫಖಾರ್ ಜಮಾನ್ 22 ಎಸೆತಗಳಲ್ಲಿ 17 ರನ್ ಗಳಿಸಿದರೆ, ಸೈಮ್ ಅಯುಬ್ 10 ರನ್ ಗಳಿಸಿದರು. ಶದಾಬ್ ಖಾನ್ 16, ಇಮಾದ್ ವಾಸಿಂ 3, ಶಹೀನ್ ಅಫ್ರಿದಿ 6 ರನ್ ಗಳಿಸಿ ಔಟಾಗುವ ಮೂಲಕ ಪಾಕಿಸ್ತಾನ 14.1 ಓವರ್ ಗಳಲ್ಲಿ 88 ರನ್ ಗಳಿಸಿ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಗೆಲುವಿನ ಸಮೀಪ ಬಂದು ಮುಗ್ಗರಿಸಿದ ಪಾಕಿಸ್ತಾನ
ಇಫ್ತಿಕರ್ ಅಹ್ಮದ್ ಮತ್ತು ಫಹೀಮ್ ಅಶ್ರಫ್ 8ನೇ ವಿಕೆಟ್‌ಗೆ 60 ರನ್ ಕಲೆಹಾಕುವ ಮೂಲಕ ಗೆಲುವಿನ ಸಮೀಪ ಬಂದಿತು. ಇಫ್ತಿಕರ್ ಅಹ್ಮದ್ ಸ್ಫೋಟಕ ಇನ್ನಿಂಗ್ಸ್ ಆಡುವ ಮೂಲಕ ಪಾಕ್ ತಂಡಕ್ಕೆ ನೆರವಾದರು. 24 ಎಸೆತಗಳಲ್ಲಿ 3 ಬೌಂಡರಿ 8 ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಗೆಲುವಿನ ಭರವಸೆ ಮೂಡಿಸಿದರು. ಫಹೀಮ್ ಅಶ್ರಫ್ ಕೂಡ 14 ಎಸೆತಗಳಲ್ಲಿ 27 ರನ್ ಗಳಿಸಿ ಔಟಾದರು.
ಕೊನೆಯ ಓವರ್ ನಲ್ಲಿ ಪಾಕಿಸ್ತಾನದ ಗೆಲುವಿಗೆ 15 ರನ್‌ಗಳ ಅಗತ್ಯವಿತ್ತು, ಇಫ್ತಿಕರ್ ಅಹ್ಮದ್ ಮೊದಲ ಎಸೆತದಲ್ಲಿ ಸಿಕ್ಸರ್ ಸಿಡಿಸಿದರು. ಎರಡನೇ ಎಸೆತದಲ್ಲಿ ರನ್ ಗಳಿಸಲು ವಿಫಲವಾದ ನಂತರ ಮೂರನೇ ಎಸೆತದಲ್ಲಿ ಬೌಂಡರಿ ಗಳಿಸಿದರು. ಆಗ ಪಾಕಿಸ್ತಾನಕ್ಕೆ 3 ಎಸೆತಗಳಲ್ಲಿ 5 ರನ್ ಬೇಕಿತ್ತು. 4ನೇ ಎಸೆತದಲ್ಲೇ ಅವರು ಡೇರಿಲ್ ಮಿಚೆಲ್‌ಗೆ ಕ್ಯಾಚ್ ನೀಡಿ ಔಟಾದರು, 5ನೇ ಎಸೆತದಲ್ಲಿ ರನ್ ಬರಲಿಲ್ಲ, 6ನೇ ಎಸೆತದಲ್ಲಿ ಹ್ಯಾರಿಸ್ ರೌಫ್ ಬೌಲ್ಡ್ ಆದರು.
ಕೊನೆಯ ಓವರ್ ನಲ್ಲಿ ಜೇಮ್ಸ್ ನೀಶಮ್ ಅತ್ಯುತ್ತಮ ಬೌಲಿಂಗ್ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ನೀಶಮ್ 4 ಓವರ್ ಗಳಲ್ಲಿ 38 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದರು, ರಚಿನ್ ರವೀಂದ್ರ ಮತ್ತು ಆಡಂ ಮಿಲ್ನೆ ತಲಾ 2 ವಿಕೆಟ್ ಪಡೆದುಕೊಂಡರು, ಮ್ಯಾಟ್ ಹೆನ್ರಿ ಮತ್ತು ಇಶ್ ಸೋಧಿ ತಲಾ ಒಂದು ವಿಕೆಟ್ ಪಡೆದರು. ಈ ಗೆಲುವಿನ ಮೂಲಕ ನ್ಯೂಜಿಲೆಂಡ್ ಸರಣಿಯಲ್ಲಿ ಅಂತರವನ್ನು 1-2 ಕ್ಕೆ ಕಡಿಮೆ ಮಾಡಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications