ಶುಕ್ರವಾರ, ಜನವರಿ 12ರಂದು ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನಡೆದ ಐದು ಪಂದ್ಯಗಳ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ತಂಡವು ಪ್ರವಾಸಿ ಪಾಕಿಸ್ತಾನ ತಂಡದ ವಿರುದ್ಧ 46 ರನ್‌ಗಳ ಅಮೋಘ ಗೆಲುವು ಸಾಧಿಸಿತು.
ತಮ್ಮ ವೇಗದ ಬೌಲಿಂಗ್ ಪಾಂಡಿತ್ಯದ ಅದ್ಭುತ ಪ್ರದರ್ಶನ ನೀಡಿದ ನ್ಯೂಜಿಲೆಂಡ್‌ನ ಅನುಭವಿ ಬೌಲರ್ ಟಿಮ್ ಸೌಥಿ ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 150 ವಿಕೆಟ್‌ಗಳ ಮೈಲಿಗಲ್ಲನ್ನು ತಲುಪಿದ ವಿಶ್ವದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಪಾಕಿಸ್ತಾನ ತಂಡದ ರನ್ ಚೇಸ್‌ನ 18ನೇ ಓವರ್‌ನಲ್ಲಿ ಟಿಮ್ ಸೌಥಿ ತನ್ನ ಮೂರನೇ ವಿಕೆಟ್ ಅನ್ನು ಅಬ್ಬಾಸ್ ಅಫ್ರಿದಿ ರೂಪದಲ್ಲಿ ತೆಗೆದುಕೊಂಡರು. ಮ್ಯಾಟ್ ಹೆನ್ರಿ ತೆಗೆದುಕೊಂಡ ಅದ್ಭುತ ಕ್ಯಾಚ್‌ಗೆ ಬಲಿಯಾದರು.
ಈ ವಿಕೆಟ್ ಟಿ20 ಪಂದ್ಯಗಳಲ್ಲಿ ಟಿಮ್ ಸೌಥಿ ಅವರ 150ನೇ ವಿಕೆಟ್ ಅನ್ನು ಗುರುತಿಸಿತು. ಟಿ20 ಸ್ವರೂಪದಲ್ಲಿ ಅವರನ್ನು ಅಗ್ರಸ್ಥಾನಿಯಾಗಿ ಸ್ಥಾಪಿಸಿತು. 35ರ ಹರೆಯದ ಟಿಮ್ ಸೌಥಿ ಮಾರಕ ಬೌಲಿಂಗ್ ಅಲ್ಲಿಗೆ ನಿಲ್ಲಲಿಲ್ಲ, ಅದೇ ಓವರ್‌ನಲ್ಲಿ ಹ್ಯಾರಿಸ್ ರೌಫ್ ಅವರನ್ನು ಔಟ್ ಮಾಡುವ ಮೂಲಕ ಪಾಕಿಸ್ತಾನಿ ತಂಡದ ಸೋಲಿಗೆ ಕಾರಣರಾದರು.
ಕಿವೀಸ್ ತಂಡದ ಅದ್ಭುತ ಬೌಲಿಂಗ್ ಪ್ರದರ್ಶನದಿಂದಾಗಿ ಪಾಕಿಸ್ತಾನ 180 ರನ್‌ಗಳಿಗೆ ಆಲೌಟ್ ಆಯಿತು. ಈ ಮೊದಲು ಬಲಗೈ ವೇಗಿ ಟಿಮ್ ಸೌಥಿ ಅಪಾಯಕಾರಿ ಮೊಹಮ್ಮದ್ ರಿಜ್ವಾನ್ ಮತ್ತು ಇಫ್ತಿಕರ್ ಅಹ್ಮದ್ ಅವರನ್ನು ಪೆವಿಲಿಯನ್‌ಗೆ ಕಳಿಸಿದ್ದರು.
ನ್ಯೂಜಿಲೆಂಡ್ ತಂಡದ ಅನುಭವಿ ವೇಗಿಯ ಟಿ20 ವೃತ್ತಿಜೀವನವು 8.12ರ ಎಕಾನಮಿ ದರದೊಂದಿಗೆ 118 ಪಂದ್ಯಗಳಲ್ಲಿ 151 ವಿಕೆಟ್‌ಗಳ ಪ್ರಭಾವಶಾಲಿ ದಾಖಲೆಯನ್ನು ಹೊಂದಿದೆ. ಈ ಸಾಧನೆಯೊಂದಿಗೆ, ಟಿಮ್ ಸೌಥಿ ಇದೀಗ ಟಿ20 ವಿಕೆಟ್ ಪಡೆದವರ ಪಟ್ಟಿಯಲ್ಲಿ ಶಕೀಬ್ ಅಲ್ ಹಸನ್ ಮತ್ತು ರಶೀದ್ ಖಾನ್ ಅವರಂತಹ ಸ್ಟಾರ್‌ಗಳನ್ನು ಹಿಂದಿಕ್ಕಿ ಅಗ್ರಸ್ಥಾನದಲ್ಲಿದ್ದಾರೆ.
ಗಮನಾರ್ಹವಾಗಿ, ಟಿಮ್ ಸೌಥಿ ಈ ಹಿಂದೆ 2010ರಲ್ಲಿ ಪಾಕಿಸ್ತಾನದ ಯೂನಿಸ್ ಖಾನ್, ಮೊಹಮ್ಮದ್ ಹಫೀಜ್ ಮತ್ತು ಉಮರ್ ಅಕ್ಮಲ್ ಅವರನ್ನು ಔಟ್ ಮಾಡುವ ಮೂಲಕ ಟಿ20 ಹ್ಯಾಟ್ರಿಕ್ ಗಳಿಸಿದ ಮೂರನೇ ಬೌಲರ್ ಆಗಿ ದಾಖಲೆ ದಾಖಲೆ ಪುಸ್ತಕವನ್ನು ಸೇರಿದ್ದರು.
ಟಿ20 ಪರಾಕ್ರಮದ ಜೊತೆಗೆ, 374 ವಿಕೆಟ್‌ಗಳೊಂದಿಗೆ ಟಿಮ್ ಸೌಥಿ ನ್ಯೂಜಿಲೆಂಡ್ ತಂಡದ ಪರ ಎರಡನೇ ಅತಿ ಹೆಚ್ಚು ಟೆಸ್ಟ್ ವಿಕೆಟ್-ಟೇಕರ್ ಸ್ಥಾನವನ್ನು ಹೊಂದಿದ್ದಾರೆ. ಅಲ್ಲದೆ, 221 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಕಿವೀಸ್ ಪರ ಮೂರನೇ ಸ್ಥಾನದಲ್ಲಿದ್ದಾರೆ.
ಪಾಕಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟಿಮ್ ಸೌಥಿ ಅವರ ಕ್ಲಿನಿಕಲ್ ಬೌಲಿಂಗ್ ಪ್ರದರ್ಶನವು ನ್ಯೂಜಿಲೆಂಡ್ ತಂಡದ 46 ರನ್‌ಗಳ ಜಯದಲ್ಲಿ ಪ್ರಮುಖ ಪಾತ್ರ ವಹಿಸಿತು. ಟಿಮ್ ಸೌಥಿ, ಆಡಮ್ ಮಿಲ್ನೆ ಮತ್ತು ಬೆನ್ ಸಿಯರ್ಸ್ ಅವರ ಕೊಡುಗೆಗಳೊಂದಿಗೆ ಪಾಕಿಸ್ತಾನ ತಂಡವನ್ನು 180 ರನ್‌ಗಳಿಗೆ ಸೀಮಿತಗೊಳಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ತನ್ನ ನಿಗದಿತ 20 ಓವರ್‌ಗಳಲ್ಲಿ 226 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಿತು. ಡ್ಯಾರಿಲ್ ಮಿಚೆಲ್ ಮತ್ತು ನಾಯಕ ಕೇನ್ ವಿಲಿಯಮ್ಸನ್ ಆಕರ್ಷಕ ಅರ್ಧಶತಕಗಳೊಂದಿಗೆ ತಂಡವನ್ನು ಮುನ್ನಡೆದರು.
ಆಲ್‌ರೌಂಡರ್ ಡ್ಯಾರಿಲ್ ಮಿಚೆಲ್ ಅವರ ಸ್ಫೋಟಕ 27 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಮತ್ತು ಬೌಂಡರಿಗಳ ಸಮೇತ 61 ರನ್‌ಗಳನ್ನು ಒಳಗೊಂಡಿತ್ತು.